ನವದೆಹಲಿ: ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಶನಿವಾರದಂದು ಕೊನೆಯುಸಿರೆಳೆದಿದ್ದು, ಈ ಬಗ್ಗೆ ಕಾಂಗ್ರೆಸ್ ಟ್ವಿಟ್ಟರ್‍ನಲ್ಲಿ ಸಂತಾಪ ಸೂಚಿಸಿದೆ. ಆದ್ರೆ ಸಾವಿನಲ್ಲೂ ಕಾಂಗ್ರೆಸ್ ರಾಜಕೀಯ ಮಾಡ್ತಿದೆ ಎಂದು ಟ್ವಿಟ್ಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀದೇವಿ ನಿಧನದ ಸುದ್ದಿ ಕೇಳಿ ಬಾಲಿವುಡ್ ಮಾತ್ರವಲ್ಲದೆ ಇಡೀ ದೇಶವೇ ಆಘಾತಕ್ಕೊಳಗಾಗಿದೆ. ನಟಿಯ ನಿಧನಕ್ಕೆ ಹಲವಾರು ಬಾಲಿವುಡ್ ನಟ-ನಟಿಯರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಐಎನ್‍ಸಿ ಇಂಡಿಯಾ ಟ್ವಿಟ್ಟರ್ ಖಾತೆಯಲ್ಲೂ ಕೂಡ ಸಂತಾಪ ಸೂಚಿಸಲಾಗಿದ್ದು, “ಶ್ರೀದೇವಿ ಅವರ ನಿಧನದ ಸುದ್ದಿ ಕೇಳಿ ವಿಷಾದಿಸುತ್ತೇವೆ. ಅವರು ಅತ್ಯುತ್ತಮ ನಟಿ. ಅವರು ನಮ್ಮ ಹೃದಯದಲ್ಲಿ ಎಂದೆಂದಿಗೂ ನೆಲೆಸಿರುತ್ತಾರೆ. ಅವರ ಪ್ರೀತಿಪಾತ್ರರಿಗೆ ನಮ್ಮ ಸಂತಾಪ. ಅವರಿಗೆ 2013 ರಲ್ಲಿ ಯುಪಿಎ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿತ್ತು” ಎಂದು ಟ್ವೀಟ್ ಮಾಡಲಾಗಿದೆ.
Advertisement
Advertisement
ಟ್ವೀಟ್ ಪೋಸ್ಟ್ ಆದ ಬಳಿಕ ಕಾಂಗ್ರೆಸ್ ವಿರುದ್ಧ ಟ್ವಿಟ್ಟರಿಗರು ಕಿಡಿ ಕಾರಿದ್ದಾರೆ. ಸಾವಿನ ಸಂದರ್ಭದಲ್ಲೂ ರಾಜಕೀಯ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ತಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಯುಪಿಎ ಸರ್ಕಾರದ ಸಂದರ್ಭದಲ್ಲಿ ನೀಡಿದ್ದು ಎಂದು ಹೇಳುವ ಅಗತ್ಯವೇನಿದೆ? ಅಂಥ ದೊಡ್ಡ ನಟಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಇಂಥ ಸಾಲುಗಳ ಅಗತ್ಯವಿದಯಾ? ಪ್ರಶಸ್ತಿಯನ್ನ ಭಾರತ ಸರ್ಕಾರ ನೀಡಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಜನರಿಂದ ಖಂಡನೆ ವ್ಯಕ್ತವಾದ ಬಳಿಕ ಕಾಂಗ್ರೆಸ್ ಈ ಹಿಂದೆ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿದೆ. ಬಳಿಕ 4 ಟ್ವೀಟ್ ಮಾಡಿ ತನ್ನ ಸಂತಾಪವನ್ನು ಸೂಚಿಸಿದೆ.
ಅತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ನಟಿಯ ನಿಧನಕ್ಕೆ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಶ್ರೀದೇವಿ ಅವರ ಅಕಾಲಿಕ ಮರಣದ ಸುದ್ದಿ ಕೇಳಿ ಆಘಾತವಾಗಿದೆ. ಅವರು ಅತ್ಯುತ್ತಮ ನಟಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
https://www.youtube.com/watch?v=Q-TaTMBm5XM
Shocked to hear about the sudden and untimely death of one of India’s favourite actress, Sridevi.
Sridevi was an incredibly talented and versatile actress whose vast body of work spanned a range of genres and languages.
My condolences to her family. May her soul rest in peace.
— Rahul Gandhi (@RahulGandhi) February 25, 2018
We regret to hear about the passing away of Sridevi. An actor par excellence. A legend who will continue to live in our hearts through her stellar body of work.
Our deepest condolences to her loved ones. pic.twitter.com/RPagwsnX9h
— Congress (@INCIndia) February 25, 2018
She received a multitude of awards including the fourth highest civilian award the Padma Shri in 2013 by the Govt of India & 6 Filmfare awards, the first at the age of 14. Sridevi started her career at the age of 4 in 'Thunaivan'. Her Bollywood debut was in 'Julie' at 12. pic.twitter.com/xQ1Kax4emV
— Congress (@INCIndia) February 25, 2018
A versatile performer, she acted in numerous Tamil, Telugu, Hindi, Malayalam, and Kannada films.
Sridevi's many successes included the critically acclaimed Sadma, ChaalBaaz, Lamhe, Khuda Gawah and Judaai. pic.twitter.com/Jl1DC7UvJI
— Congress (@INCIndia) February 25, 2018
In 2012, after a 15 year break she delivered the much appreciated English Vinglish. She is India's first female superstar. She'll be missed. pic.twitter.com/sd3FfF8azT
— Congress (@INCIndia) February 25, 2018