ಬೆಂಗಳೂರು: ನನ್ನನ್ನು ಜೈಲಿಗೆ ಹಾಕಬೇಕೆಂದು ಕಾಂಗ್ರೆಸ್ ಪ್ರಯತ್ನ ಪಟ್ಟಿತ್ತು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧ ನಾನು ಹೋರಾಟ ಮಾಡಿದೆ. ಆಗ ನನ್ನ ಮೇಲೆ 4 ಕೇಸ್ ಹಾಕಿಸಿದ್ರು. 12 ವರ್ಷ ಹಿಂದೆ ಕೇಸ್ ಆಗಿತ್ತು. ಕಾಂಗ್ರೆಸ್ ಕೂಡಾ ನನ್ನನ್ನು ಜೈಲಿಗೆ ಹಾಕೋಕೆ ಪ್ರಯತ್ನ ಮಾಡಿತ್ತು. ನನಗೂ ಸಮನ್ಸ್ ಇಶ್ಯೂ ಮಾಡಿದ್ರು. ಹ್ಯೂಬ್ಲೇಟ್ ಸೇರಿದಂತೆ ಅನೇಕ ವಿಷಯಕ್ಕೆ ಧ್ವನಿ ಎತ್ತಿದ್ದೆ. ಕೆಂಪಯ್ಯ ಮೂಲಕ ಎಲ್ಲಾ ಮಾಡಲು ಮುಂದಾಗಿದ್ರು ಆದರೆ ಏನು ಆಗಿರಲಿಲ್ಲ. ನಾನು ಶುದ್ಧನಾಗಿ ಇದ್ದೆ ಹಾಗಾಗಿ ಇದು ಸಾಧ್ಯವಾಗಿಲ್ಲ. ಅದಕ್ಕೆ ಭಯ ಬಿದ್ದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಪುತ್ರನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟ ಬಿಎಸ್‌ವೈ: ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ
Advertisement
Advertisement
ಓಲೈಕೆ ರಾಜಕಾರಣದ ಬಗ್ಗೆ ಮಾತನಾಡಿ, ಎಲ್ಲಾ ಪಕ್ಷದಲ್ಲಿ ಜಾತಿ ಓಲೈಕೆ ನಡೆಯುತ್ತಿದೆ. ಒಕ್ಕಲಿಗರ ಸಮಾಜದ ಬಗ್ಗೆ ಚರ್ಚೆ ಆಗುತ್ತಿದೆ. ನಮ್ಮ ಸಮಾಜ ವ್ಯಾಮೋಹಕ್ಕೆ ಬಲಿಯಾಗಿಲ್ಲ. ರಾಜ್ಯದ ಅಭಿವೃದ್ಧಿ ಮಾಡೋರಿಗೆ ನಮ್ಮ ಸಮುದಾಯ ಬೆಂಬಲಿಸುತ್ತಾ ಬಂದಿದೆ. ಜಾತಿ ಅಸ್ತ್ರ ಹೂಡಿ ಎಲ್ಲರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಸಮುದಾಯದವರು ಎಲ್ಲವನ್ನು ನೋಡಿ ನಿರ್ಧಾರ ಮಾಡುತ್ತಾರೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಡಿಕ್ಷನರಿಯಲ್ಲಿ ನಿವೃತ್ತಿ ಎನ್ನುವ ಪದವಿಲ್ಲ: ವಿಜಯೇಂದ್ರ
Advertisement
ದೇವೇಗೌಡ ಆರೋಗ್ಯ ವಿಚಾರಿಸಲು ಆದಿಚುಂಚನಗಿರಿ ಶ್ರೀ ಬಂದಿದ್ದರು. ರಾಜಕೀಯ ಚರ್ಚೆ ಆಗಿಲ್ಲ. ನಮ್ಮ ಕಾರ್ಯ ಪಂಚ ರತ್ನ. ಇದೇ ನಮ್ಮ ಪಕ್ಷದ ಜೀವಾಳ. ನಮ್ಮ ಪಕ್ಷದ ಕಾರ್ಯಕ್ರಮ ಮುಂದೆ ಹೇಳುತ್ತೇನೆ. ಜನತಾ ಮಿತ್ರ ಸದ್ಯ ನಿಲ್ಲಿಸಿದ್ದೇವೆ. ಶೀಘ್ರವೇ ಮತ್ತೆ ಪ್ರಾರಂಭ ಮಾಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ.
ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿ ಅವರು ಇಂದು ಬೆಳಗ್ಗೆ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ @H_D_Devegowda ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಂದರ್ಭ.1/2 pic.twitter.com/l68jBqC7Hh
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) July 22, 2022
ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆ ಮಾಡಿದ್ರೆ ತಪ್ಪೇನು? ತಪ್ಪು ಮಾಡಿಲ್ಲ ಅಂದ್ರೆ ಭಯ ಯಾಕೆ? ಜೋಸೆಫ್ ಅವರ ಪುಸ್ತಕ ಓದಿದ್ರೆ ಕಾಂಗ್ರೆಸ್‍ಗೆ ಅನೇಕ ವಿಷಯ ಸಿಗುತ್ತೆ. ಅ ವಿಷಯ ಇಟ್ಟುಕೊಂಡು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಆದ್ರೆ ಕಾಂಗ್ರೆಸ್ ಇದನ್ನು ಮಾಡಲ್ಲ. ನಾನೇ ಅವ್ರಿಗೆ ಪಾಠ ಮಾಡ್ತಿದ್ದೇನೆ. ನನ್ನ ಪಾಠ ಕೇಳಿದರೆ ಕಾಂಗ್ರೆಸ್‍ಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.