Advertisements

ಪಕ್ಷದ ಎಲ್ಲಾ ಸ್ಥಾನಗಳಿಂದ ಸುನೀಲ್ ಜಾಖರ್, ಥಾಮಸ್‍ರನ್ನು ತೆಗೆದು ಹಾಕಿದ ಕಾಂಗ್ರೆಸ್

ಶಿಲಾಂಗ್: ಪಂಜಾಬ್ ಘಟಕದ ಮಾಜಿ ಮುಖ್ಯಸ್ಥ ಸುನೀಲ್ ಜಾಖರ್ ಮತ್ತು ಕೇರಳ ನಾಯಕ ಕೆ ವಿ ಥಾಮಸ್ ಅವರನ್ನು ಪಕ್ಷದ ಎಲ್ಲಾ ಸ್ಥಾನಗಳಿಂದ ತೆಗೆದುಹಾಕಲು ಕಾಂಗ್ರೆಸ್ ನಿರ್ಧರಿಸಿದೆ.

Advertisements

ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಮೇಘಾಲಯದಲ್ಲಿ ತನ್ನ ಐವರು ಶಾಸಕರನ್ನು ಅಮಾನತುಗೊಳಿಸಿದೆ. ಕಾಂಗ್ರೆಸ್ ಶಿಸ್ತು ಸಮಿತಿಯು ಜಾಖರ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿತು. ಆರಂಭದಲ್ಲಿ ಅವರನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಲು ನಿರ್ಧರಿಸಲಾಯಿತು. ಇದನ್ನೂ ಓದಿ: ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ

Advertisements

ಸಭೆ ನಡೆಸಿದ ಸಮಿತಿ, ಪಕ್ಷದ ನಿರ್ದೇಶನಗಳನ್ನು ಧಿಕ್ಕರಿಸಿ ರಾಜ್ಯದಲ್ಲಿ ಆಡಳಿತಾರೂಢ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ)ಗೆ ಬೆಂಬಲ ನೀಡಿದ ಮೇಘಾಲಯದ ಐವರು ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸುವಂತೆ ಶಿಫಾರಸು ಮಾಡಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶಿಸ್ತು ಸಮಿತಿಯ ಶಿಫಾರಸುಗಳನ್ನು ಅನುಮೋದಿಸಿದ್ದಾರೆ. ಮೇಘಾಲಯ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿನ್ಸೆಂಟ್ ಪಾಲಾ ಅವರಿಂದ ಸೋನಿಯಾ ಅವರು ಪ್ರಸ್ತುತ ಬಿಜೆಪಿ ಬೆಂಬಲಿತ ಸರ್ಕಾರವನ್ನು ಬೆಂಬಲಿಸುವ ಐದು ಶಾಸಕರ ಕ್ರಮಗಳ ಬಗ್ಗೆ ಪತ್ರವನ್ನು ಸ್ವೀಕರಿಸಿದ್ದರು. ಇದನ್ನೂ ಓದಿ: ಹಂಪಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಿಂತನೆ: ವಚನಾನಂದ ಮಹಾಸ್ವಾಮೀಜಿ

Advertisements

ಸಮಿತಿಯು ಈ ವಿಷಯವನ್ನು ವಿಸ್ಕೃತವಾಗಿ ಚರ್ಚಿಸಿದೆ. ಈ ಸಭೆಯ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಶಾಸಕರಾದ ಅಮ್ರಾರೀನ್ ಲಿಂಗ್ಡೋಹ್, ಪಿಟಿ ಸೌಕಿಮಿ, ಕಿಮ್ಫಾ ಮಾರ್ಬನಿಯಾಂಗ್, ಮೈರಾಲ್ಬೋರ್ನ್ ಸೈಯೆಮ್ ಮತ್ತು ಮೊಹೆಂದ್ರೋ ರಾಪ್ಸಾಂಗ್ ಅವರನ್ನು ಅಮಾನತುಗೊಳಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಥಾಮಸ್ ಅವರಿಗೆ ಸಂಬಂಧಿಸಿದಂತೆ, ಸಮಿತಿಯು ಅವರನ್ನು ರಾಜ್ಯ ರಾಜಕೀಯ ವ್ಯವಹಾರಗಳ ಸಮಿತಿ ಮತ್ತು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿಯಿಂದ ತೆಗೆದುಹಾಕಲು ನಿರ್ಧರಿಸಿತು. ಜಾಖರ್ ವಿಚಾರವಾಗಿ ಅವರನ್ನು ಪಕ್ಷದ ಎಲ್ಲಾ ಸ್ಥಾನಗಳಿಂದ ವಜಾಗೊಳಿಸಲು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಅವರನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಲು ಮತ್ತು ಪಕ್ಷದ ಎಲ್ಲಾ ಸ್ಥಾನಗಳಿಂದ ತೆಗೆದುಹಾಕಲು ಸಮಿತಿಯು ಮೊದಲು ನಿರ್ಧರಿಸಿತು. ಆದರೆ ನಂತರ ಅವರ ಕ್ರಮವನ್ನು ತಗ್ಗಿಸಿತು ಮತ್ತು ಅವರ ಅಮಾನತು ಕೈಬಿಡಲಾಯಿತು ಎಂದು ಮೂಲಗಳು ಸೂಚಿಸಿವೆ.

Advertisements
Exit mobile version