ನವದೆಹಲಿ: ಕೆಲ ದಿನಗಳ ಹಿಂದೆಯಷ್ಟೇ ಸಕ್ರಿಯ ರಾಜಕಾರಣ ಪ್ರವೇಶಿಸಿರುವ ಪ್ರಿಯಾಂಕಾ ವಾದ್ರಾ ವಿರುದ್ಧ ಕೀಳುಮಟ್ಟದ ಪ್ರಚಾರ ನಡೆಸಿದವರ ವಿರುದ್ಧ ಎಫ್‍ಐಆರ್ ದಾಖಲಾಗಲಿದೆ.
ದುರುದ್ದೇಶಪೂರಿತವಾಗಿ ಪ್ರಿಯಾಂಕಾ ವಾದ್ರಾ ವಿರುದ್ಧ ಕೀಳುಮಟ್ಟದ ಪ್ರಚಾರ ನಡೆಸಿದವರ ಅವರ ವಿರುದ್ದ ದೇಶಾದ್ಯಂತ ಕಾಂಗ್ರೆಸ್ ಮಹಿಳಾ ಘಟಕ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಸೋಮವಾರ ಎಫ್‍ಐಆರ್ ದಾಖಲಿಸಲಿದೆ ಘಟಕದ ಅಧ್ಯಕ್ಷೆ ಸುಶ್ಮಿತಾ ದೇವ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
Advertisement
Advertisement
ರಾಜಕೀಯ ಪ್ರವೇಶಿಸುತ್ತಿರುವ ನಾಯಕಿಯರ ಬಗ್ಗೆ ನಮ್ಮ ದೇಶದಲ್ಲಿ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ. ಹಲವು ಬಿಜೆಪಿ ನಾಯಕರು ಈಗಾಗಲೇ ಕೀಳು ಮಟ್ಟದ ಹೇಳಿಕೆಯನ್ನು ನೀಡಿದ್ದಾರೆ. ನಾನು ದೆಹಲಿಯಲ್ಲಿ ಎಫ್‍ಐಆರ್ ದಾಖಲಿಸುತ್ತಿದ್ದು, ರಾಜ್ಯ ಘಟಕ ಅಧ್ಯಕ್ಷರಿಗೆ ಆಯಾ ರಾಜ್ಯಗಳ ರಾಜಧಾನಿಗಳಲ್ಲಿ ಎಫ್‍ಐಆರ್ ದಾಖಲಿಸಲು ಸೂಚಿಸಲಾಗಿದೆ ಎಂದು ಸುಶ್ಮಿತಾ ದೇವ್ ವಿಡಿಯೋದಲ್ಲಿ ತಿಳಿಸಿದ್ದಾರೆ.
Advertisement
ಉತ್ತರ ಪ್ರದೇಶದ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ರಾವಣಾಸುರ ಹಾಗೂ ಅವರ ಸಹೋದರಿ ಪ್ರಿಯಾಂಕಾ ವಾದ್ರಾ ಅವರನ್ನು ಶೂರ್ಪನಖಿಗೆ ಹೋಲಿಕೆ ಮಾಡಿ ವ್ಯಂಗ್ಯವಾಡಿದ್ದರು.
Advertisement
ರಾಹುಲ್ ರಾವಣನಾದರೆ, ಅವರ ಸಹೋದರಿ ಪ್ರಿಯಾಂಕಾ ಶೂರ್ಪನಖಿ. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಶ್ರೀರಾಮಚಂದ್ರನಿದ್ದಂತೆ. ಈ ಆಧುನಿಕ ರಾವಣ ನಮ್ಮ ರಾಮನ ವಿರುದ್ಧ ತನ್ನ ತಂಗಿಯನ್ನು ರಾಜಕೀಯ ಯುದ್ಧಕ್ಕೆ ಕಳುಹಿಸಿದ್ದಾರೆ. ಆದರೆ ರಾಮಾಯಣದಲ್ಲಿ ಯುದ್ಧಕ್ಕೆ ಮೊದಲು ರಾವಣ ತನ್ನ ತಂಗಿ ಶೂರ್ಪನಖಿಯನ್ನು ರಾಮನ ಬಳಿಗೆ ಕಳಿಸಿ ಅನುಭವಿಸಿದ ಅವಮಾನವನ್ನೇ ಈಗ ರಾಹುಲ್ ಅನುಭವಿಸಬೇಕಾಗುತ್ತದೆ ಎಂದು ಸುರೇಂದ್ರ ಸಿಂಗ್ ಹೇಳಿದ್ದರು.
A derogatory thread on #PriyankaGandhi's physical appearance is being unleashed into social media. To counter this Mahila Congress has decided to file an FIR through all states on 4th Feb, 2019
AIMC president @sushmitadevmp has sent a video message #BetiyanKyunSharmindaHo pic.twitter.com/Y1oHIE1Akd
— All India Mahila Congress (@MahilaCongress) February 2, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv