ಮಡಿಕೇರಿ: ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿದ್ದರಾಮಯ್ಯ (Siddaramaiah) ನವರ ಮುಸುಕಿನ ಗುದ್ದಾಟದ ನಡುವೆ ವಿಧಾನಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಹೆಚ್ಚಾಗಿದೆ. ಅದರಲ್ಲೂ ಬಿಜೆಪಿ (BJP) ಭದ್ರಕೋಟೆಯಾಗಿರುವ ಕೊಡಗಿನಲ್ಲೂ ಕಾಂಗ್ರೆಸ್ (Congress) ನಿಂದ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. 2 ಕ್ಷೇತ್ರಗಳಿಗೆ 9 ಜನರು ಅರ್ಜಿ ಸಲ್ಲಿಸಿದ್ದಾರೆ.
Advertisement
ವಿಧಾನಸಭೆ ಚುನಾವಣೆ (Vidhanasabha Election) ಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ಈ ಬೆನ್ನಲ್ಲೇ ಆಯಾ ಪಕ್ಷಗಳಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಕೊಡಗಿನಲ್ಲಿ ಕಾಂಗ್ರೆಸ್ ಟಿಕೆಟ್ (Congress Ticket) ಗಾಗಿ ಭರ್ಜರಿ ಪೈಪೋಟಿ ಏರ್ಪಟ್ಟಿದ್ದು, ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರದಿಂದ ಒಟ್ಟು 9 ಜನರು ಅರ್ಜಿ ಸಲ್ಲಿಸಿದ್ದಾರೆ. ಮಡಿಕೇರಿ ಕ್ಷೇತ್ರದಿಂದ ಮಾಜಿ ಸಚಿವ ಜೀವಿಜಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಪಿ ಚಂದ್ರಕಲಾ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಸೇರಿದಂತೆ ಹಲವರು ಟವೆಲ್ ಹಾಕಿದ್ದಾರೆ. ಇದನ್ನೂ ಓದಿ: ಪೊಲೀಸರಿಗೆ ಹೆದರಬೇಡಿ, ಬೇಕಾದ್ರೆ ಅವರ ಮೇಲೆ ಬಾಂಬ್ ಹಾಕಿ: ʼಕೈʼ ನಾಯಕಿ ವಿವಾದಾತ್ಮಕ ಹೇಳಿಕೆ
Advertisement
Advertisement
ವಿರಾಜಪೇಟೆ ಕ್ಷೇತ್ರ (Virajapete Constituency) ದಿಂದ ಮೂವರು ಅರ್ಜಿ ಹಾಕಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ಘಟಕದ ಅದ್ಯಕ್ಷ ಎ.ಎಸ್.ಪೊನ್ನಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಎಂ.ಆರ್ ಸೀತಾರಾಮ್ ಅವರ ಆಪ್ತ ಸಹಾಯಕ ಹರೀಶ್ ಬೋಪಣ್ಣ ಕೂಡ ಅರ್ಜಿ ಸಲ್ಲಿಸಿದ್ದಾರೆ. ಈ ಬಾರಿ ಯಾರಿಗೆ ಟಿಕೆಟ್ ನೀಡಿದ್ರು, ಪಕ್ಷ ಸಂಘಟನೆಯ ಮೂಲಕ ಈ ಬಾರಿ ಬಿಜೆಪಿ ಸೋಲಿಸಲು ಕಾರ್ಯಕರ್ತರು ಪಣ ತೊಟ್ಟಿದ್ದಾರೆ.
Advertisement
ಒಟ್ಟಿನಲ್ಲಿ ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಈ ಬಾರಿ ಆದ್ರೂ 2 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.