ತಿರುವನಂತಪುರಂ: ಪ್ರಧಾನಿ ಮೋದಿ (Narendra Modi) ಬಗ್ಗೆ ಲೇವಡಿ ಮಾಡಿ ಕೇರಳ ಕಾಂಗ್ರೆಸ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಕ್ಷಮೆ ಕೇಳಿದೆ.
G7 ಶೃಂಗಸಭೆ ಸಂದರ್ಭದಲ್ಲಿ ಪೋಪ್ (Pope Francis) ಭೇಟಿ ಮಾಡಿದ್ದ ಮೋದಿ, ಅವರನ್ನು ಆಲಂಗಿಸಿಕೊಂಡಿದ್ರು. ಈ ಬಗ್ಗೆ ಕೇರಳ ಕಾಂಗ್ರೆಸ್, ದೇವರನ್ನು ಭೇಟಿ ಮಾಡುವ ಅವಕಾಶ ಕೊನೆಗೂ ಪೋಪ್‍ಗೆ ದಕ್ಕಿದೆ ಎಂದು ಕಾಮೆಂಟ್ ಮಾಡಿತ್ತು. ಇದಕ್ಕೆ ಬಿಜೆಪಿ (BJP) ಫುಲ್ ಗರಂ ಆಗಿತ್ತು. ಇದು ಮೋದಿಯನ್ನು ಅಪಮಾನಿಸೋದು ಅಷ್ಟೇ ಅಲ್ಲ, ಪೋಪ್ ಜೊತೆಗೆ ಕ್ರೈಸ್ತ ಸಮುದಾಯವನ್ನು ಅಪಮಾನಿಸ್ತಿದೆ ಎಂದು ಆಪಾದಿಸಿದೆ.
ಕೇರಳ ಕಾಂಗ್ರೆಸ್ (Kerala Congress) ಎಕ್ಸ್ ಖಾತೆಯನ್ನು ಬಹುಶಃ ರ‍್ಯಾಡಿಕಲ್ ಇಸ್ಲಾಮಿಸ್ಟ್ ಗಳೋ ಇಲ್ಲವೇ ಅರ್ಬನ್ ನಕ್ಸಲರೋ ಹ್ಯಾಂಡಲ್ ಮಾಡ್ತಿರಬೇಕು ಎಂದ ಬಿಜೆಪಿ ಕಿಡಿಕಾರಿದೆ. ಈ ಬಗ್ಗೆ ಸೋನಿಯಾ ಗಾಂಧಿ (Sonia Gandhi) ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ. ಈ ಬೆನ್ನಲ್ಲೇ ಕೇರಳ ಕಾಂಗ್ರೆಸ್ ತನ್ನ ಪೋಸ್ಟ್ ಅನ್ನು ಡಿಲೀಟ್ ಮಾಡಿತು. ಅಲ್ಲದೇ ತಮ್ಮ ಪೋಸ್ಟ್ ನಿಂದ ಮಾನಸಿಕ ಕ್ಷೋಭೆ ಉಂಟಾಗಿದ್ರೆ ಕ್ರೈಸ್ತರು ಕ್ಷಮಿಸಬೇಕು ಎಂದು ಎಕ್ಸ್ ಖಾತೆಯಲ್ಲಿ ಹೇಳಿದೆ.
ಮೋದಿ ವಿಚಾರದಲ್ಲಿ ತಮ್ಮ ನಿಲುವು ಬದಲಾಗಲ್ಲ. ವಿಮರ್ಶೆ ಮಾಡೋದನ್ನು ನಿಲ್ಲಿಸಲ್ಲ ಎಂದು ಕೇರಳ ಕಾಂಗ್ರೆಸ್ ಘಟಕ ಸ್ಪಷ್ಟಪಡಿಸಿದೆ. ಅಲ್ಲದೇ ಮಣಿಪುರ ಹಿಂಸಾಚಾರ, ಚರ್ಚ್‍ಗಳ ದಹನದ ಬಗ್ಗೆಯೂ ಬಿಜೆಪಿ, ಕ್ರೈಸ್ತರ ಕ್ಷಮೆ ಕೇಳಬೇಕು ಎಂದು ಕೇರಳ ಕಾಂಗ್ರೆಸ್ ಆಗ್ರಹಿಸಿದೆ. ಇದನ್ನೂ ಓದಿ: ದೆಹಲಿ ಏರ್‌ಪೋರ್ಟ್‌ನಲ್ಲಿ ಕೈಕೊಟ್ಟ ಕರೆಂಟ್!