ಬೆಂಗಳೂರು: ಮೇಕೆದಾಟು ಪಾದಯಾತ್ರೆ ಅಡೆತಡೆಯ ರಿವೆಂಜ್ ಗೆ ಕೈ ಪಾಳಯ ಮುಂದಾಯ್ತಾ ಅಥವಾ ಕಾಂಗ್ರೆಸ್ ನಾಯಕರ ವಿರುದ್ಧ ರೂಲ್ಸ್ ಬ್ರೇಕ್ ಅಸ್ತ್ರ ಬಳಸಿದ್ದ ಬಿಜೆಪಿಗೆ ಅದನ್ನೇ ಪ್ರತ್ಯಾಸ್ತ್ರವಾಗಿ ಹೂಡಲು ಮುಂದಾಯ್ತಾ ಎಂಬ ಪ್ರಶ್ನೆಯೊಂದು ಎದ್ದಿದೆ.
ನಾಡಿನ ಹಿತಕ್ಕಾಗಿ, ಕುಡಿಯುವ ನೀರಿಗಾಗಿನ ನಮ್ಮ ಪಾದಯಾತ್ರೆಯನ್ನು ಬೆಂಬಲಿಸಿ ನಮ್ಮೊಂದಿಗೆ ಹೆಜ್ಜೆಹಾಕಿದ ಎಲ್ಲರಿಗೂ ಧನ್ಯವಾದಗಳು.
ನೀರಿಗಾಗಿನ ನಮ್ಮ ಹೋರಾಟವನ್ನು ತತ್ಕಾಲಿಕವಾಗಿ ಮುಂದೂಡಲಾಗಿದೆ. ಆದರೆ ಈ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ.
ಕರೋನಾ ನಿಯಂತ್ರಣಕ್ಕೆ ಬಂದ ನಂತರ ಪಾದಯಾತ್ರೆ ಮುಂದುವರಿಯಲಿದೆ.#MekedatuPadayatre pic.twitter.com/G9F71Mg6Yk
— Karnataka Congress (@INCKarnataka) January 13, 2022
Advertisement
ಹೌದು. ಕಮಲ ಪಾಳಯದ ರೂಲ್ಸ್ ಬ್ರೇಕ್ ವಿರುದ್ಧ ಕೈ ಪಾಳಯ ಕೋರ್ಟ್‍ಗೆ ಹೋಗಲು ನಿರ್ಧಾರ ಮಾಡಿದೆ. ಈ ಮೂಲಕ ಪಾದಯಾತ್ರೆ ಕೇಸ್ ಗೆ ಕೌಂಟರ್ ಅಟ್ಯಾಕ್ ಗೆ ಕೈ ಪಾಳಯ ಅಲರ್ಟ್ ಆಗಿದ್ದು, ನಾವು ದಾಖಲೆ ಸಹಿತ ಕೊಟ್ಟ ಅಷ್ಟೂ ದೂರಿಗೆ ಎಫ್ ಐಆರ್ ದಾಖಲಾಗಲಾಗಲೇಬೇಕು ಎಂದು ಕಿಡಿಕಾರಿದೆ.
Advertisement
ಐತಿಹಾಸಿಕ ಮೇಕೆದಾಟು ಪಾದಯಾತ್ರೆಯಲ್ಲಿ 'ನಮ್ಮ ನೀರು – ನಮ್ಮ ಹಕ್ಕು' ಘೋಷದೊಂದಿಗೆ ದೃಢ ಹೆಜ್ಜೆಗಳನ್ನಿಟ್ಟು ಮುನ್ನಡೆಯುತ್ತಿರುವ ಕಾಂಗ್ರೆಸ್ ನಾಯಕರು.
ಸತತ ನಾಲ್ಕನೇ ದಿನವೂ ಅಪಾರ ಜನ ಬೆಂಬಲದೊಂದಿಗೆ ಮುಂದುವರಿದ ನೀರಿಗಾಗಿ ನಡಿಗೆ.
ಬನ್ನಿ ಜೊತೆಯಾಗಿ, ನೀರಿಗಾಗಿ ಹೆಜ್ಜೆ ಹಾಕೋಣ..#MekedatuPadayatre pic.twitter.com/zqXQIIWGR4
— Karnataka Congress (@INCKarnataka) January 13, 2022
Advertisement
ಸಿಎಂ ಮುಂದೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಸಿಎಂ ಕಚೇರಿ ಧರಣಿಗೆ ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಇನ್ನೊಂದು ಕಡೆ ಕೋರ್ಟ್ ಮೆಟ್ಟಿಲೇರಲು ಕೈ ನಾಯಕರು ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಬಿಜೆಪಿ ನಾಯಕರ ಮೇಲೆ ಕೇಸ್ ಹಾಕಿ – ಸಿಎಂ ಮನೆ ಮುಂದೆ ಪ್ರತಿಭಟಿಸಲಿದ್ದಾರೆ ಡಿಕೆಶಿ, ಸಿದ್ದು
Advertisement
ದಾಖಲೆ ಸಹಿತ ಕೋರ್ಟ್ ಮೆಟ್ಟಿಲೇರಿ ಅಷ್ಟು ಜನರ ವಿರುದ್ಧ ಎಫ್ ಐ ಆರ್ ದಾಖಲಿಗೆ ಸೂಚನೆ ಕೊಡುವಂತೆ ಕೈ ಪಾಳಯ ತೀರ್ಮಾನಿಸಿದೆ. ಅಲ್ಲದೆ ಯಾವ್ಯಾವ ಜಿಲ್ಲೆಯಲ್ಲಿ ಬಿಜೆಪಿ ವಿರುದ್ಧ ಕೇಸು ದಾಖಲಿಸಿಲ್ಲ. ಅಲ್ಲಿನ ಡಿಸಿ, ಎಸ್‍ಪಿ ಕೋರ್ಟ್ ಮೆಟ್ಟಿಲು ಹತ್ತಿಸಲು ಸಹಾ ಪ್ಲಾನ್ ರೂಪಿಸಿದೆ. ಒಟ್ಟಾರೆ ಒಂದು ಕಡೆ ಸಿಎಂ ನಿವಾಸದ ಮುಂದೆ ಧರಣಿ, ಇನ್ನೊಂದು ಕೆಡೆ ನಿಯಮ ಮೀರಿದ ಬಿಜೆಪಿ ನಾಯಕರ ವಿರುದ್ಧ ಎಫ್ ಐಆರ್ ದಾಖಲಿಗೆ ಸೂಚನೆ ನೀಡುವಂತೆ ಕೋರ್ಟ್ ಮೊರೆ ಹೋಗಲಾಗುತ್ತಿದೆ. ಹೀಗೆ ಪಾದಯಾತ್ರೆ ವಿರುದ್ಧ ಕಾನೂನು ಅಸ್ತ್ರ ಬಳಸಿದ ಸರ್ಕಾರದ ವಿರುದ್ಧ ಕಾನೂನಿನ ಪ್ರತ್ಯಾಸ್ತ್ರ ಬಳಸಲು ಕಾಂಗ್ರೆಸ್ ಮುಂದಾಗಿದೆ.
ಐತಿಹಾಸಿಕ ಮೇಕೆದಾಟು ಪಾದಯಾತ್ರೆಯಲ್ಲಿ 'ನಮ್ಮ ನೀರು – ನಮ್ಮ ಹಕ್ಕು' ಘೋಷದೊಂದಿಗೆ ದೃಢ ಹೆಜ್ಜೆಗಳನ್ನಿಟ್ಟು ಮುನ್ನಡೆಯುತ್ತಿರುವ ಕಾಂಗ್ರೆಸ್ ನಾಯಕರು.
ಸತತ ನಾಲ್ಕನೇ ದಿನವೂ ಅಪಾರ ಜನ ಬೆಂಬಲದೊಂದಿಗೆ ಮುಂದುವರಿದ ನೀರಿಗಾಗಿ ನಡಿಗೆ.
ಬನ್ನಿ ಜೊತೆಯಾಗಿ, ನೀರಿಗಾಗಿ ಹೆಜ್ಜೆ ಹಾಕೋಣ..#MekedatuPadayatre@JarkiholiSatish pic.twitter.com/OhjzCAcgbl
— Karnataka Congress (@INCKarnataka) January 12, 2022
ಒಟ್ಟಿನಲ್ಲಿ ಪಾದಯಾತ್ರೆ ವಿಷಯದಲ್ಲಿ ಕೋರ್ಟ್ ಚಾಟಿ ಬೀಸಿದಂತೆ ಈಗಲೂ ಚಾಟಿ ಬೀಸುತ್ತಾ ಎಂಬುದು ಸದ್ಯದ ಕುತೂಹಲವಾಗಿದೆ.