ತಿರುವನಂತಪುರಂ: ಲೋಕಸಭಾ ಚುನಾವಣೆಯ ಪ್ರಚಾರದ ಅಬ್ಬರ ಎಲ್ಲೆಡೆ ಜೋರಾಗಿದೆ. ಈ ಮದ್ಯ ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ಲೋಕಸಮರದಲ್ಲಿ ಜಯಗಳಿಸಲು ಕಸರತ್ತು ಮಾಡುತ್ತಿದೆ. ಆದ್ರೆ ಪ್ರಚಾರದ ಭರದಲ್ಲಿ ಕಾರ್ಯಕರ್ತರು ಮಾಡಿರುವ ಎಡವಟ್ಟಿಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಟ್ರೋಲ್ ಆಗುತ್ತಿದೆ.
ಹೌದು, ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಎನ್. ಪ್ರತಾಪನ್ ಅವರ ಪ್ರಚಾರದ ವೇಳೆ ಕಾರ್ಯಕರ್ತರು ಮಾಡಿದ ಎಡವಟ್ಟಿಗೆ ಇಡೀ ಕೈ ಪಾಳೆಯವನ್ನೇ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಪ್ರಚಾರದ ವೇಳೆ ಪ್ರತಾಪನ್ ಅವರಿಗೆ ಮತ ನೀಡುವಂತೆ ಕೋರಿದ ಕಾರ್ಯಕರ್ತರು, ಗೋಡೆ ಬರಹದಲ್ಲಿ `ಹಸ್ತ’ದ ಚಿಹ್ನೆಗೆ ಆರು ಬೆರಳುಗಳನ್ನು ಬಿಡಿಸಿದ್ದಾರೆ. ಇದಕ್ಕೆ ಗೇಲಿ ಮಾಡುತ್ತಿರುವ ನೆಟ್ಟಿಗರು ಟ್ರೋಲ್‍ಗಳ ಮೇಲೆ ಟ್ರೋಲ್ ಮಾಡಿ ಕಾಂಗ್ರೆಸ್ ಅಭ್ಯರ್ಥಿಯ ಕಾಲೆಳೆಯುತ್ತಿದ್ದಾರೆ.
ಕೈ ಕಾರ್ಯಕರ್ತರ ಎಡವಟ್ಟಿಗೆ ವಯಾನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಳಿದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಕಾಯಕರ್ತರು ಪ್ರಯತ್ನ ಮೀರಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದರು. ಅದಕ್ಕೆ ಪಾಪ ಐದಕ್ಕೆ ಇನ್ನೊಂದು ಬೆರಳು ಜೋಡಿಸಿ ತಮ್ಮ ಪ್ರಯತ್ನ ಮೆರೆದಿದ್ದಾರೆ ಅಂತ ಬರೆದು ಕಾಲೆಳೆಯುತ್ತಿದ್ದಾರೆ.