ರಾಂಚಿ: ಪಶ್ಚಿಮ ಬಂಗಾಳ ಪೊಲೀಸರು ಶನಿವಾರ ಜಾರ್ಖಂಡ್‌ನ ಮೂವರು ಕಾಂಗ್ರೆಸ್ ಶಾಸಕರ ಕಾರಿನಲ್ಲಿ ಅಪಾರ ಪ್ರಮಾಣದ ನಗದು ಪತ್ತೆ ಮಾಡಿದ ಹಿನ್ನೆಲೆ ಕಾಂಗ್ರೆಸ್ ಭಾನುವಾರ ಮೂವರು ಶಾಸಕರನ್ನು ಅಮಾನತುಗೊಳಿಸಿದೆ.
ಜಾರ್ಖಂಡ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಉಸ್ತುವಾರಿ ಅವಿನಾಶ್ ಪಾಂಡೆ, ನಿನ್ನೆಯಷ್ಟೇ ಭಾರೀ ಪ್ರಮಾಣದ ಹಣದೊಂದಿಗೆ ಬಂಧನಕ್ಕೊಳಗಾದ ಮೂವರು ಶಾಸಕರನ್ನು ಈ ಕೂಡಲೇ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಸುರಕ್ಷತೆಯ ವಾತಾವರಣವಿದೆ, ಗನ್ ಮ್ಯಾನ್ ನೀಡಿ: ಜೆಡಿಎಸ್ ಸದಸ್ಯನ ಮನವಿ
Advertisement
Advertisement
ಅಮಾನತುಗೊಂಡಿರುವ ಜಮ್ತಾರಾ ಶಸಕ ಇರ್ಫಾನ್ ಅನ್ಸಾರಿ, ರಾಂಚಿ ಜಿಲ್ಲೆಯ ಖಿಜ್ರಿ ಶಾಸಕ ರಾಜೇಶ್ ಕಚ್ಚಪ್, ಸಿಮ್ಡೆಗಾ ಜಿಲ್ಲೆಯ ಕೊಲೆಬಿರಾ ಶಾಸಕ ನಮನ್ ಬಿಕ್ಸಲ್ ಕೊಂಗಾರಿ ಶನಿವಾರ ಕಾರಿನಲ್ಲಿ ರಾಣಿಹಟಿಯ ರಾಷ್ಟ್ರೀಯ ಹೆದ್ದಾರಿ-16 ರಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಪಶ್ಚಿಮ ಬಂಗಾಳ ಪೊಲೀಸರು ಕಾರನ್ನು ತಡೆದಿದ್ದರು. ಇದನ್ನೂ ಓದಿ: ಗದ್ದೆಯಲ್ಲಿ ನಾಟಿ ಮಾಡಿದ ಶಾಸಕ ಕುಮಾರಸ್ವಾಮಿ
Advertisement
ಪೊಲೀಸರು ವಾಹನವನ್ನು ಪರಿಶೀಲಿಸಿದಾಗ ಭಾರೀ ಮೊತ್ತದ ನಗದು ಪತ್ತೆಯಾಗಿದೆ. ಬಳಿಕ ಪೊಲೀಸರು ಎಣಿಕೆ ಯಂತ್ರ ತಂದು, ಹಣವನ್ನು ಎಣಿಸಿದ್ದಾರೆ. ಸುಮಾರು 48 ರಿಂದ 50 ಲಕ್ಷ ರೂ. ಪತ್ತೆಯಾಗಿರುವುದಾಗಿ ತಿಳಿಸಲಾಗಿದ್ದು, ಹಣದ ಮೂಲದ ಬಗ್ಗೆ ಶಾಸಕರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.