ಮಂಡ್ಯ: ಪಕ್ಷೇತರ ಆಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ನಿಂತಿದ್ದ ಯುವ ಕಾಂಗ್ರೆಸ್ ನ 6 ಪದಾಧಿಕಾರಿಗಳ ಉಚ್ಛಾಟನೆ ಮಾಡಲಾಗಿದೆ. ಯುವ ಕಾಂಗ್ರೆಸ್ಸಿನ ರಾಜ್ಯ ಕಾರ್ಯದರ್ಶಿ ಗೀತಾ ರಾಜಣ್ಣರಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಯುವ ಕಾಂಗ್ರೆಸ್ ನ ಜಿಲ್ಲಾ ಉಪಾಧ್ಯಕ್ಷ ಅರವಿಂದ್ ಕುಮಾರ್, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರಶೇಖರ್, ನಾಗಮಂಗಲ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಶರತ್ ರಾಮಣ್ಣ, ಮಂಡ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವಿಜಯ್ ಕುಮಾರ್, ಮಳವಳ್ಳಿ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಕೃಷ್ಣೇಗೌಡ ಮತ್ತು ಮಳವಳ್ಳಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮಹದೇವ ಪ್ರಸಾದ್ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಇದನ್ನೂ ಓದಿ: ಪಕ್ಷೇತರರಾಗಿ ಸ್ಪರ್ಧಿಸಿದ್ರೂ ಸುಮಲತಾ ಪರವಾಗಿಯೇ ಕೆಲಸ ಮಾಡ್ತೇವೆ- ಕೆಪಿಸಿಸಿ ಸದಸ್ಯ
Advertisement
Advertisement
ಶುಕ್ರವಾರ ಮುಖಂಡ ಹಿಂಡವಾಳು ಸಚ್ಚಿದಾನಂದ ಅವರನ್ನು ಉಚ್ಛಾಟನೆ ಮಾಡಲಾಗಿತ್ತು. ಉಚ್ಛಾಟನೆಗೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಚ್ಚಿದಾನಂದ್, ನನ್ನಂತಹ ಲಕ್ಷಾಂತರ ಕಾರ್ಯಕರ್ತರು ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡುತ್ತಾರೆ. ಅವರನ್ನೂ ಉಚ್ಛಾಟನೆ ಮಾಡಿ ಪಕ್ಷಕ್ಕೆ ಬೀಗ ಜಡಿಯುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಸಂಧಾನಕ್ಕೆ ಬರಬೇಡಿ, ಏನೇ ಆದ್ರೂ ನಾವು ಸುಮಲತಾರನ್ನ ಬೆಂಬಲಿಸುತ್ತೇವೆ: ಕೈ ನಾಯಕ ಸಚ್ಚಿದಾನಂದ
Advertisement
ಪಕ್ಷದಿಂದ ನನ್ನ ಉಚ್ಛಾಟನೆ ಮಾಡಿರುವುನ್ನು ಸ್ವಾಗತಿಸುತ್ತೇನೆ. ಆದರೆ ಜೆಡಿಎಸ್ ಅವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ಕಗ್ಗೊಲೆ ಮಾಡ್ತಿದ್ದಾರಲ್ಲ ಅವರ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತೀರಾ? ಕಾಂಗ್ರೆಸ್ ಕಾರ್ಯಕರ್ತರು ತೊಂದರೆ ಅನುಭವಿಸುತ್ತಿದ್ದಾಗ ಯಾವ ರಾಜ್ಯ ನಾಯಕರು ಸಹಾಯಕ್ಕೆ ಬರುವುದಿಲ್ಲ. ಆದರೆ ಜೆಡಿಎಸ್‍ನವರಿಗೆ ತೊಂದರೆ ಆದರೆ ಅವರ ಕುಟುಂಬವೇ ಬಂದು ಆತ್ಮಸ್ಥೈರ್ಯ ತುಂಬುತ್ತದೆ. ಕಾಂಗ್ರೆಸ್ ಕಾರ್ಯಕರ್ತರು ಅನಾಥರಾಗಿದ್ದಾರೆ ಎಂದು ಸಚ್ಚಿದಾನಂದ ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಕೈ ಮುಖಂಡರ ಉಚ್ಛಾಟನೆ ನಿರೀಕ್ಷಿಸಿದ್ದೆ- ಸುಮಲತಾ