ಬೆಂಗಳೂರು: ದೋಸ್ತಿ ಸರ್ಕಾರದಲ್ಲಿ ಅತಿ ದೊಡ್ಡ ಹೊಂದಾಣಿಕೆ ನಡೆದಿದ್ದು, ಮೈತ್ರಿ ಸೂತ್ರ ಪಾಲಿಸಲು ಕಾಂಗ್ರೆಸ್ ಒಂದು ವಿಚಾರದಲ್ಲಿ ಇದೀಗ ಜೆಡಿಎಸ್‍ಗೆ ಸರೆಂಡರ್ ಆಗಿದೆ.
ಈ ಮೂಲಕ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಕಾಂಗ್ರೆಸ್ ಅನಿವಾರ್ಯವಾಗಿ ಸೈಲೆಂಟಾಯ್ತಾ ಅನ್ನೋ ಪ್ರಶ್ನೆ ಇದೀಗ ಎದ್ದಿದೆ. ಸಂಖ್ಯಾಬಲದ ಪ್ರಕಾರ ಸಭಾಪತಿ ಸ್ಥಾನ ಕಾಂಗ್ರೆಸ್ ವಶವಾಗಬೇಕಿತ್ತು. ಹೀಗಾಗಿ ಇದೇ ವಾದವನ್ನು ಮುಂದಿಟ್ಟು ಕೈ ಸದಸ್ಯರು ಸಭಾಪತಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದರು. ಆದರೆ ಈಗ ಎಲ್ಲಾ ನಾಯಕರು ಫುಲ್ ಸೈಲೆಂಟ್ ಆಗಿದ್ದು, ಇದರಿಂದ ದೋಸ್ತಿಗಳ ನಡುವೆ ದೊಡ್ಡ ಹೊಂದಾಣಿಕೆ ನಡೆದು ಹೋಯ್ತಾ ಎಂಬ ಕುತೂಹಲವೊಂದು ಮೂಡಿದೆ.
Advertisement
ಜೆಡಿಎಸ್‍ಗೆ ಪರಿಷತ್ ಸಭಾಪತಿ ಸ್ಥಾನ ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪಿಗೆ ಸೂಚಿಸಿದ್ದು, ಬಸವರಾಜ್ ಹೊರಟ್ಟಿಗೆ ಪರಿಷತ್ ಸಭಾಪತಿ ಸ್ಥಾನ ಬಿಟ್ಟುಕೊಡಲು `ಕೈ’ ಸಮ್ಮತಿಸಿದೆ. ಯಾರ ಬೆಂಬಲವಿಲ್ಲದೆ ಸಭಾಪತಿ ಸ್ಥಾನ ಪಡೆಯಲು ಕಾಂಗ್ರೆಸ್ ಸಮರ್ಥವಿದೆ. ಕಾಂಗ್ರೆಸ್ ಪರಿಷತ್ ಸದಸ್ಯರ ಅಭಿಪ್ರಾಯವು ಇದೇ ಆಗಿತ್ತು. ಆದರೆ 7 ನೇ ಬಾರಿ ಪರಿಷತ್ ಸದಸ್ಯರಾಗಿರುವ 38 ವರ್ಷ ಸದನದ ಸದಸ್ಯರಾಗಿರುವ ಹೊರಟ್ಟಿಯವರಂತಹ ಹಿರಿಯರ ಹಿರಿತನಕ್ಕೆ ಗೌರವ ನೀಡಲು ಕಾಂಗ್ರೆಸ್ ಮುಂದಾಗಿದೆ. ಹೀಗಾಗಿ ಹೊರಟ್ಟಿಯವರನ್ನೇ ಅಧಿಕೃತ ಪರಿಷತ್ ಸಭಾಪತಿಯನ್ನಾಗಿ ಮುಂದುವರಿಸಲು ಸಮ್ಮತಿ ಸೂಚಿಸಿದ್ದು, ಇಂದು ಸಭಾಪತಿ ಸ್ಥಾನದ ಚುನಾವಣೆಯ ಅಧಿಸೂಚನೆ ಹೊರ ಬೀಳಲಿದೆ.
Advertisement
ಹೀಗೆ ಸಭಾಪತಿ ಸ್ಥಾನಕ್ಕಾಗಿ ಕುಸ್ತಿ ಆಡುತ್ತಿದ್ದ ಮೈತ್ರಿ ಪಕ್ಷವಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸೂತ್ರಕ್ಕೆ ಮೊರೆಹೋಗಿವೆ. ಒಟ್ಟಿನಲ್ಲಿ ಹಿರಿತನದ ಗೌರವದೊಂದಿಗೆ ಬಸವರಾಜ ಹೊರಟ್ಟಿ ಸಭಾಪತಿಯಾಗುವುದು ಖಚಿತವಾಗಿದೆ.