ಬೆಂಗಳೂರು: ಕಲಬುರಗಿ ಜಿಲ್ಲೆಯ ಜೇವರ್ಗಿ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಇದರ ಮೂಲಕ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲ್ಲು ಬೆಂಬಲಿಗರೊಬ್ಬರಿಂದ ದುಡ್ಡು ಖರ್ಚು ಮಾಡಿಸಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟುಕೊಂಡಿದೆ.
ನಿಮಗಾಗಿ ನಾನು ಎಲೆಕ್ಷನ್‍ನಲ್ಲಿ 15 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ಆ ದುಡ್ಡನ್ನು ವಾಪಸ್ ಕೊಡಿ ಅಂತ ಆಂದೋಲ ಗ್ರಾಮದ ಶಿವಶರಣ ರೆಡ್ಡಿ ಎಂಬವರು ಅಜಯ್ ಸಿಂಗ್ ಅವರಿಗೆ ಪದೇ ಪದೇ ಮೆಸೇಜ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ರೋಸಿ ಹೋಗಿರುವ ಶಾಸಕರು ಬೆಂಬಲಿಗನ ವಿರುದ್ಧವೇ ಕೇಸ್ ಹಾಕುವ ಧಮ್ಕಿ ಹಾಕುತ್ತಿದ್ದಾರೆ ಎನ್ನಲಾಗಿದೆ.
Advertisement
Advertisement
ಚುನಾವಣೆ ಸಂದರ್ಭದಲ್ಲಿ ಮೆಸೇಜ್ ಮಾಡಿದ್ದ ಶಿವಶರಣ ರೆಡ್ಡಿ, ಬಿಜೆಪಿಯವರು ನನಗೆ ಪದೇ ಪದೇ ಫೋನ್ ಮಾಡುತ್ತಿದ್ದು, ನೀವು ದುಡ್ಡು ಕೊಡುತ್ತೀನಿ ಅಂತ ಮಾತು ಕೊಟ್ರೆ ನಿಮ್ಮ ಜೊತೆಗೆ ಮುಂದುವರಿಯುತ್ತೇನೆ. ಇಲ್ಲ ಅಂದರೆ ಬಿಜೆಪಿ ಪರ ಪ್ರಚಾರಕ್ಕೆ ಹೋಗುತ್ತೇನೆ ಅಂತ ಶಾಸಕರಿಗೆ ಮೆಸೇಜ್ ಹಾಕಿದ್ದರು. ಆಗ ಒಪ್ಪಿದ್ದ ಅಜಯ್ ಸಿಂಗ್ ಈಗ ಪಕ್ಷಕ್ಕಾಗಿ ಕೆಲಸ ಮಾಡು, ಆಮೇಲೆ ಕೊಡೋಣ ಅಂತ ರಿಪ್ಲೈ ಮಾಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.
Advertisement
ಶಿವಶರಣ ರೆಡ್ಡಿ ಜೊತೆಗೆ ಶಾಸಕರ ಆಪ್ತರ ದೂರವಾಣಿ ಸಂಭಾಷಣೆಯ ಆಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.
Advertisement