ಚಿಕ್ಕಬಳ್ಳಾಪುರ: ಕಾಂಗ್ರೆಸ್ ಬೆಂಬಲಿಸುವ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಕೊಳವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸದ್ಯ ಈ ಆತ್ಮಹತ್ಯೆ ಪ್ರಕರಣ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ.
29 ವರ್ಷದ ಜಗದೀಶ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಜೆಡಿಎಸ್ ಗೆ ಮತ ನೀಡುವಂತೆ ಕೆಲ ಮುಖಂಡರು 500 ರೂಪಾಯಿ ಹಣ ನೀಡಿ ಗ್ರಾಮದ ಮುನೇಶ್ವರ ದೇವಾಲಯದಲ್ಲಿ ಪ್ರಮಾಣ ಮಾಡಿಸಿಕೊಂಡಿದ್ರಂತೆ. ಇದ್ರಿಂದ ಮನನೊಂದ ಜಗದೀಶ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಾಂಗ್ರೆಸ್ ಕಾರ್ಯಕರ್ತರ ಆರೋಪಿಸುತ್ತಿದ್ದಾರೆ.
ಮೃತ ಜಗದೀಶ್ ಕುಡಿತದ ಚಟ ಮೈಗೂಡಿಸಿಕೊಂಡಿದ್ದು, ಹೆಂಡತಿ ತವರು ಮನೆ ಸೇರಿದ್ದರಂತೆ. ಇದ್ರಿಂದ ಮನನೊಂದು ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಪೊಲೀಸರು ಹೇಳ್ತಾರೆ.
ಮೃತ ಜಗದೀಶ್ ಕುಟುಂಬಸ್ಥರು ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ. ನಂದಿಗಿರಿಧಾಮ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.