ತುಮಕೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್‌ನ ದೊಡ್ಡ ದೊಡ್ಡ ಮುಖಂಡರು ಸಿಕ್ಕಿ ಹಾಕಿಕೊಂಡಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅದರಲ್ಲಿ ಭಾಗಿಯಾಗಿದ್ದಾರೆ. ಪೂನಾದಲ್ಲಿ ದಿವ್ಯಾ ಹಾಗರಗಿಗೆ ಆಶ್ರಯ ಕೊಟ್ಟಿರೋದು ಕಾಂಗ್ರೆಸ್‌ನವರೇ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾವುದೇ ಪಕ್ಷ ಪಂಗಡ ನೋಡದೇ, ಮೂಗು ತೂರಿಸದೇ ತನಿಖೆ ಮಾಡಲು ಬಿಟ್ಟಿದ್ದೇವೆ. ಯಾರ ದಾಖಲಾತಿ ಸಿಗುತ್ತದೆಯೋ ಅಂತವರನ್ನು ಅರೆಸ್ಟ್ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ತಂದೆ ಆಸೆಯಂತೆ ಮುಸ್ಲಿಂ ಸಮುದಾಯಕ್ಕೆ ಭೂಮಿ ದಾನಕೊಟ್ಟ ಹಿಂದೂ ಸಹೋದರಿಯರು
Advertisement
Advertisement
ಕಾಂಗ್ರೆಸ್‌ನ ಅನೇಕ ಮುಖಂಡರು ನನ್ನ ಬಳಿ ಆ ವೀಡಿಯೋ ಇದೆ, ಈ ವೀಡಿಯೋ ಇದೆ ಎಂದು ಹೇಳಿದರು. ಆದರೇ ಅವರ್ಯಾರೂ ಅವುಗಳನ್ನು ತನಿಖಾಧಿಕಾರಿಗಳಿಗೆ ಒಪ್ಪಿಸುತ್ತಿಲ್ಲ. ಅದರ ಬದಲಾಗಿ ಯಾರ್ಯಾರದ್ದೋ ಚಾರಿತ್ರ‍್ಯ ಹರಣ ಮಾಡುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಪ್ರಾಮಾಣಿಕವಾದ ತನಿಖೆಯಲ್ಲಿ ನಂಬಿಕೆ ಇಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ವಿನಾಃಕಾರಣ ಸರ್ಕಾರವನ್ನು ಟೀಕಿಸುತ್ತಿದ್ದಾರೆ: ಆರಗ ಜ್ಞಾನೇಂದ್ರ
Advertisement
Advertisement
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತನಾಡಲು ವಿಷಯಗಳೇ ಇಲ್ಲ ಎಂದು ಯಾರ್ಯಾರದ್ದೋ ಚಾರಿತ್ರ‍್ಯ ಹರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಕಾಲದ್ದೇ ಸಿಒಡಿ ಮೇಲೆ ಅವರಿಗೆ ನಂಬಿಕೆ ಇಲ್ಲ ಅಂದರೆ ಹೇಗೆ? ನಂಬಿಕೆ ಇಲ್ಲ ಎಂದಿದ್ದರೆ ಸಿಒಡಿಯನ್ನು ಆಗಲೇ ವಿಸರ್ಜನೆ ಮಾಡಬೇಕಿತ್ತು. ಲೋಕಾಯುಕ್ತದ ಕತ್ತು ಹಿಸುಕಿದವರು ಯಾರು? ಕಾಂಗ್ರೆಸ್ ಕಾಲದಲ್ಲಿ ಪ್ರಬಲವಾಗಿದ್ದ ಲೋಕಾಯುಕ್ತದ ಕತ್ತು ಹಿಸುಕಲಾಯಿತು. ಆಮೇಲೆ ಅವರೇ ಎಸಿಬಿ ಜಾರಿಗೆ ತಂದವರು ಎಂದು ಆರಗ ಜ್ಞಾನೇಂದ್ರ ಹರಿಹಾಯ್ದರು.