ಒಡಿಶಾ ಹೋಟೆಲ್‌ನಲ್ಲಿ ಯುವತಿ ಮೇಲೆ ಅತ್ಯಾಚಾರ – ಕಾಂಗ್ರೆಸ್ ಸ್ಟೂಡೆಂಟ್ ಲೀಡರ್ ಅರೆಸ್ಟ್

Public TV
1 Min Read
Odisha Congress Student Union President Arrest

ಭುವನೇಶ್ವರ: ಒಡಿಶಾದ (Odisha) ಹೋಟೆಲ್ ಒಂದರಲ್ಲಿ ಯುವತಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಸಂಬಂಧ ಒಡಿಶಾದ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ.

ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಅಧ್ಯಕ್ಷ ಉದಿತ್ ಪ್ರಧಾನ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಉದಿತ್ ಪ್ರಧಾನ್‌ನನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿ ಮದ್ಯ ಸೇರಿಸಿದ್ದ ಜ್ಯೂಸ್‌ನ್ನು ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಇದನ್ನೂ ಓದಿ: ತಮಿಳುನಾಡು ಸಿಎಂ ಸ್ಟಾಲಿನ್‌ ಆಸ್ಪತ್ರೆಗೆ ದಾಖಲು

ಮಾ.18 ರಂದು ಭುವನೇಶ್ವರದ (Bhuvaneshawar) ಮಾಸ್ಟರ್ ಕ್ಯಾಂಟೀನ್‌ನಲ್ಲಿ ಇಬ್ಬರು ಸ್ನೇಹಿತರನ್ನು ಭೇಟಿಯಾಗಿದ್ದೆ. ಬಳಿಕ ಅವರೊಂದಿಗೆ ಹೋಟೆಲ್ ತೆರಳುತ್ತಿದ್ದ ವೇಳೆ ಉದಿತ್ ಪ್ರಧಾನ್ ನಮ್ಮೊಂದಿಗೆ ಸೇರಿಕೊಂಡಿದ್ದ. ಕಾರಿನಲ್ಲಿ ನನ್ನ ಪಕ್ಕ ಕುಳಿತಿದ್ದ ಉದಿತ್ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಇದನ್ನೂ ಓದಿ: ಕಲಬುರಗಿ | ಜೂಜಾಡುತ್ತಿದ್ದ ಕಾಂಗ್ರೆಸ್, ಬಿಜೆಪಿ ಮುಂಖಂಡರ ಸಹಿತ 7 ಮಂದಿ ಅರೆಸ್ಟ್

ನಂತರ ಅವರೆಲ್ಲರೂ ಸೇರಿ ಹೋಟೆಲ್‌ನಲ್ಲಿ ಕುಡಿಯಲು ಆರಂಭಿಸಿದರು. ನನ್ನನ್ನು ಕುಡಿಯಲು ಒತ್ತಾಯಿಸಿದರು, ಆದರೆ ನಾನು ನಿರಾಕರಿಸಿದ್ದೆ. ಬಳಿಕ ಉದಿತ್ ನನಗೆ ಮದ್ಯ ಬೆರೆಸಿದ ಪಾನೀಯವನ್ನು ನೀಡಿದ್ದ. ಅದನ್ನು ಕುಡಿದಾಗ, ನನಗೆ ತಲೆ ತಿರುಗಲು ಪ್ರಾರಂಭಿಸಿತು. ಆಗ ನನ್ನನ್ನು ಮನೆಗೆ ಬಿಡಲು ಕೇಳಿದೆ. ನಂತರ ನಾನಗೆ ಪ್ರಜ್ಞೆ ತಪ್ಪಿತು. ನನಗೆ ಪ್ರಜ್ಞೆ ಬಂದಾಗ, ಉದಿತ್ ನನ್ನ ಪಕ್ಕದಲ್ಲಿ ಮಲಗಿದ್ದ. ಏನೋ ತಪ್ಪು ನಡೆದಿದೆ ಎಂದು ನನಗನಿಸಿತು. ಮೊದಲು ದೂರು ನೀಡಲು ಹೆದರಿದ್ದೆ. ಈಗ ದೂರು ನೀಡಿದ್ದೇನೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದನ್ನೂ ಓದಿ: 189 ಮಂದಿ ಸಾವಿಗೆ ಕಾರಣವಾಗಿದ್ದ ಮುಂಬೈ ರೈಲು ಸ್ಫೋಟ ಕೇಸ್‌ – ಎಲ್ಲಾ 12 ಆರೋಪಿಗಳು ಖುಲಾಸೆ

ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಉದಿತ್ ಪ್ರಧಾನ್‌ನನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆಸಿದಿದ್ದಾರೆ.

Share This Article