ಬೆಂಗಳೂರು: ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ವಿಧಾನಸಭೆ ಹಾಗೂ ವಿಧಾನ ಪರಿಷತ್‍ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದೆ. ಕಾಂಗ್ರೆಸ್ ಧರಣಿ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರಿಗೆ ಬೆಡ್, ತಲೆ ದಿಂಬುಗಳು ಹಾಗೂ ಹೊದಿಕೆ ವ್ಯವಸ್ಥೆ ಮಾಡಲಾಗಿತ್ತು. ಧರಣಿ ಹಿನ್ನೆಲೆಯಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಅವರು ಟ್ರಾಕ್ ಪ್ಯಾಂಟ್ ಹಾಗೂ ಟೀ ಶರ್ಟ್ ಧರಿಸಿ ಆಗಮಿಸಿದ್ದರು.
ಆಹೋರಾತ್ರಿ ಧರಣಿ ಹಿನ್ನೆಲೆಯಲ್ಲಿ ಧರಣಿ ನಿರತ ಕಾಂಗ್ರೆಸ್ ನಾಯಕರು ಹಾಗೂ ಶಾಸಕರಿಗೆ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸ್ಪೀಕರ್ ಸೂಚನೆ ಮೇರೆಗೆ ವಿಧಾನಸಭೆ ಸಚಿವಾಲಯದಿಂದ ಊಟ ವ್ಯವಸ್ಥೆ ಮಾಡಿದ್ದರು. ರೇಸ್ ಕೋರ್ಸ್ ರಸ್ತೆಯಲ್ಲಿರುವ ಸೌತ್ ರುಚಿ ಹೋಟೆಲ್‍ನಿಂದ 120 ಜನರಿಗಾಗಿ ವೆಜ್ ಊಟದ ವ್ಯವಸ್ಥೆ ಮಾಡಲಾಗಿತ್ತು.
Advertisement
Advertisement
ಊಟದ ಮೆನು!: ಊಟದಲ್ಲಿ 15 ಬಗೆಯ ಪದಾರ್ಥಗಳಿದ್ದವು. ಚಪಾತಿ, ಮುದ್ದೆ, ಫ್ರೂಟ್ ಸಲಾಡ್, ಅನ್ನ ರಸಂ, ಸಾಂಬಾರ್, ತರಕಾರಿ ಸಲಾಡ್, ಪಲ್ಯ, ರೈಸ್ ಬಾತ್, ಮೊಸರು, ಡ್ರೈ ಜಾಮೂನ್ ಸೇರಿದಂತೆ ಒಟ್ಟು 15 ತರಹದ ಪದಾರ್ಥಗಳು ಇಂದಿನ ಊಟದ ಮೆನುವಿನಲ್ಲಿತ್ತು.
Advertisement
ಸಂಧಾನ ಯತ್ನ!: ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಸಂಧಾನ ಯತ್ನ ನಡೆಸಿದರು. ಸ್ಪೀಕರ್ ಕಾಗೇರಿ ಅವರ ಸಮ್ಮುಖದಲ್ಲೇ ಸಂಧಾನ ಮಾತುಕತೆ ನಡೆದರೂ ಕಾಂಗ್ರೆಸ್ ನಾಯಕರು ಒಪ್ಪಲಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಈಶ್ವರಪ್ಪ ರಾಜೀನಾಮೆ ಪಡೆಯಿರಿ, ಇಲ್ಲ ಅಮಾನತು ಮಾಡಿ ಎಂದು ಕೈ ನಾಯಕರು ಪಟ್ಟು ಹಿಡಿದರು. ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗಕ್ಕೆ ಸಮಿತಿ ರಚನೆ: ಬೊಮ್ಮಾಯಿ
Advertisement
ರಾತ್ರಿ ಇಲ್ಲಿ ಮಲಗೋದು ಬೇಡ ಅಂದ್ವಿ!: ಸಂಧಾನ ಯತ್ನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಅಶೋಕ್ ಸೇರಿ ಎರಡು ಗಂಟೆಗಳ ಕಾಲ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಿಕೆಶಿ, ಹಾಗೂ ಕಾಂಗ್ರೆಸ್ ಮುಖಂಡರಲ್ಲಿ ವಿನಂತಿ ಮಾಡಿದ್ದೇವೆ. ರಾತ್ರಿ ಇಲ್ಲಿ ಧರಣಿ ಮಾಡುವುದು ಬೇಡ, ಆ ರೀತಿ ವಿಶೇಷವಾದ ಘಟನೆ ನಡೆದಿಲ್ಲ ಎಂದಿದ್ದೇವೆ. ರಾತ್ರಿ ಮಾತ್ರ ಇಲ್ಲಿ ಮಲಗೋದು ಬೇಡ, ಇದು ಒಳ್ಳೆಯ ಪದ್ಧತಿ ಆಗಲ್ಲ ಎಂದು ಮನವೊಲಿಕೆ ಮಾಡಿದ್ದೇವೆ. ಆದರೆ ಅವರು ಮನಸ್ಸಿನಲ್ಲಿ ತೀರ್ಮಾನ ಮಾಡಿ ಆಗಿದೆ, ರಾತ್ರಿ ಇಲ್ಲೇ ಇರುತ್ತೇವೆ ಎಂದು ಹೇಳಿದರು. ಸ್ಪೀಕರ್ ಕೂಡಾ ಮನವೊಲಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ. ನಾಳೆ ಧರಣಿ ಮುಂದುವರಿಸಿ ಎಂದರೂ ಯಾವುದಕ್ಕೂ ಒಪ್ಪಿಗೆ ಕೊಡಲಿಲ್ಲ. ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ನಾಳೆ ಮತ್ತೆ ಮನವೊಲಿಕೆಗೆ ಮಾತನಾಡುತ್ತೇವೆ ಎಂದು ಹೇಳಿದರು.
ಪರಿಷತ್‍ನಲ್ಲಿ ಕೂಡಾ ಕಾಂಗ್ರೆಸ್ ಸದಸ್ಯರ ಅಹೋರಾತ್ರಿ ಧರಣಿ ನಡೆಯುತ್ತಿದೆ. ಪರಿಷತ್‍ನಲ್ಲಿ ಧರಣಿ ನಿರತರನ್ನು ಸಭಾಪತಿ ಬಸವರಾಜ್ ಹೊರಟ್ಟಿ ಭೇಟಿಯಾದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ರಾಮಲಿಂಗರೆಡ್ಡಿ ಅವರು ವಿಧಾನ ಪರಿಷತ್ತಿಗೆ ಭೇಟಿ ನೀಡಿ ವಿಪಕ್ಷ ನಾಯಕ ಹರಿಪ್ರಸಾದ್ ಹಾಗೂ ಧರಣಿ ನಿರತ ಸದಸ್ಯರ ಜೊತೆ ಮಾತುಕತೆ ನಡೆಸಿದರು. ಇದನ್ನೂ ಓದಿ: ಅವನು ನಮ್ಮ ಅಪ್ಪನ ಮೀಟ್ ಮಾಡಬೇಕು ಅಂತಿದಾನೆ, ನಾನೇ ಅವನನ್ನ ಎಲ್ಲಿ, ಹೇಗೆ, ಯಾವಾಗ ಮೀಟ್ ಮಾಡಬೇಕೋ ಮಾಡ್ತೀನಿ!