ಚಂಢೀಗಡ: ಕಾಂಗ್ರೆಸ್ ದೇಶದಲ್ಲಿ ವಿಭಜನೆಯ ಬೀಜ ಬಿತ್ತಿದೆ. ಹಿಂದೂ-ಮುಸ್ಲಿಂ ಹೆಸರಿನಲ್ಲಿ ದೇಶವನ್ನು ವಿಭಜಿಸಿದೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇಶ ವಿಭಜನೆಗೆ ಕಾರಣವಾದ ಕಾಂಗ್ರೆಸ್ ಹೊಡೆದು ಆಳುವ ನೀತಿಯನ್ನು ಬಿತ್ತಿದ್ದು, ಇಂದು ಈ ವಿಭಜನೆ ಭಯೋತ್ಪಾದನೆಯ ರೂಪದಲ್ಲಿ ಮತ್ತು ಕೆಲವೊಮ್ಮೆ ಹಿಜಬ್ ರೂಪದಲ್ಲಿ ದೇಶದಲ್ಲಿ ಎದುರಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್, ರಾಘವ್ ಚಡ್ಡಾ ಪಂಜಾಬ್ ಲೂಟಿ ಮಾಡಲು ಬಂದಿದ್ದಾರೆ: ಚರಣ್‍ಜಿತ್ ಸಿಂಗ್ ಚನ್ನಿ
Advertisement
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಿತ್ತಿದ ವಿಭಜನೆ ಬೀಜದಿಂದಾಗಿ ದೇಶದಲ್ಲಿ ಇಂದಿಗೂ ಶಾಂತಿಯಿಂದ ಬದುಕಲು ಆಗುತ್ತಿಲ್ಲ. ಕೆಲವೊಮ್ಮೆ ಭಯೋತ್ಪಾದಕರ ರೂಪದಲ್ಲಿ, ಕೆಲವೊಮ್ಮೆ ಹಿಜಬ್‍ಗಳ ರೂಪದಲ್ಲಿ, ಹಿಂದೂ-ಮುಸ್ಲಿಂ ಹೆಸರಿನಲ್ಲಿ ದೇಶವನ್ನು ವಿಭಜನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
#WATCH | It’s because of the divisive seed sown by Congress that the country doesn’t live in peace even today, ‘sometimes in the form of terrorists, sometimes in the form of Hijabs’. They got the country partitioned in the name of Hindus, Muslims:Haryana Minister Anil Vij (12.2) pic.twitter.com/IqQPzkoUPY
— ANI (@ANI) February 13, 2022
Advertisement
ಕರ್ನಾಟಕದ ಉಡುಪಿ ಜಿಲ್ಲೆಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಫೆಬ್ರವರಿ 4 ರಂದು ಹಿಜಬ್ ಪ್ರತಿಭಟನೆ ಪ್ರಾರಂಭವಾಯಿತು. ಕೆಲವು ವಿದ್ಯಾರ್ಥಿಗಳು ಹಿಜಬ್ (ಮುಸ್ಲಿಂ ಮಹಿಳೆಯರು ಧರಿಸುವ ಸ್ಕಾರ್ಫ್) ಧರಿಸಿ ತರಗತಿಗಳಿಗೆ ಹಾಜರಾಗದಂತೆ ನಿರ್ಬಂಧಿಸಲಾಗಿದೆ ಎಂದು ಆರೋಪಿಸಿದರು. ತಿಂಗಳ ಆರಂಭದಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಹಿಜಬ್ ಧರಿಸಿ ಕಾಲೇಜಿಗೆ ಬಂದಿದ್ದರಿಂದ ಪ್ರವೇಶ ನಿರಾಕರಿಸಲಾಯಿತು. ಇದರಿಂದ ಕರ್ನಾಟಕದ ಕೆಲವು ಭಾಗಗಳಲ್ಲಿ ಗದ್ದಲ ಆರಂಭವಾಯಿತು. ಇದೀಗ ಈ ವಿವಾದ ರಾಜಸ್ಥಾನಕ್ಕೂ ಹರಡಿದೆ.
ಕರ್ನಾಟಕದಲ್ಲಿ ಹಿಜಬ್ ಸಾಲಿಗೆ ಸಂಬಂಧಿಸಿದ ತುರ್ತು ಅರ್ಜಿಗಳನ್ನು ಆಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಇದನ್ನೂ ಓದಿ: ಸಂವಿಧಾನದ ಆಶಯದಲ್ಲಿ ದೇಶ ಮುನ್ನಡೆಸಲಾಗ್ತಿದೆ, ಷರಿಯಾ ಕಾನೂನಿನಿಂದಲ್ಲ: ಹಿಜಬ್ ಕುರಿತು ಯೋಗಿ ಪ್ರತಿಕ್ರಿಯೆ