ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ನೆಹರೂ ಅವರನ್ನು ದೂಷಿಸುವಂತೆ, ಸಿಎಂ ಬಸವರಾಜ ಬೊಮ್ಮಾಯಿಯವರು ಕಾಂಗ್ರೆಸ್ ದೂಷಿಸಿ ಗುರುವಿಗೆ ತಕ್ಕ ಶಿಷ್ಯ ಎನಿಸಿಕೊಳ್ಳಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಕಾಂಗ್ರೆಸ್ ತಿರುಗೇಟು ನೀಡುವ ಜೊತೆಗೆ ಹಲವು ಪ್ರಶ್ನೆಗಳನ್ನು ಸಿಎಂ ಮುಂದಿಟ್ಟಿದೆ. ಇದನ್ನೂ ಓದಿ: ನಿಮ್ಮ ಸರ್ಕಾರದಲ್ಲಿ ದಿಂಬು, ಚೆಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರ ನೆನಪಿಸಿಕೊಳ್ಳಿ- ಸಿದ್ದುಗೆ ಸುನಿಲ್ ತಿರುಗೇಟು
Advertisement
'@BSBommai ಅವರೇ,
ಕಳೆದ ವರ್ಷವೇ ರಾಜಕಾಲುವೆ ಅಭಿವೃದಿಗಾಗಿ ₹1500 ಕೋಟಿ ಘೋಷಿಸಿದ್ದಿರಿ, ಆದರೆ ಕೊಟ್ಟಿದ್ದು ₹400 ಕೋಟಿ ಮಾತ್ರ.
ಅದರಲ್ಲೂ ಈಗ ಟೆಂಡರ್ ಪ್ರಕ್ರಿಯೆ ಶುರು ಮಾಡಿದ್ದೀರಿ.
ಈ ವಿಳಂಬ ಮಾಡಲು ಕಾಂಗ್ರೆಸ್ ಹೇಳಿತ್ತೆ? ಉಳಿದ ₹1100 ಕೋಟಿಯನ್ನು ಏಕೆ ಬಿಡುಗಡೆ ಮಾಡಲಿಲ್ಲ? ರಾಜಕಾಲುವೆ ಅಭಿವೃದ್ಧಿ ನಿಮಗೆ ಬೇಕಿರಲಿಲ್ಲ ಅಲ್ಲವೇ?
— Karnataka Congress (@INCKarnataka) September 6, 2022
Advertisement
ಟ್ವೀಟ್‌ನಲ್ಲಿ ಏನಿದೆ?
ಬೊಮ್ಮಾಯಿ ಅವರೇ, ನಮ್ಮ ಅವಧಿಯಲ್ಲಿ ಐಟಿ ಕಂಪನಿಗಳು ಬೆಂಗಳೂರಿಗೆ ಬಂದವು. ನಿಮ್ಮ ಆಡಳಿತದಲ್ಲಿ ಬೆಂಗಳೂರು ತೊರೆಯಲು ಸಜ್ಜಾಗಿವೆ. ಬಿಬಿಎಂಪಿ ಚುನಾವಣೆ ನಡೆಸದೇ ಬೆಂಗಳೂರನ್ನು ಅನಾಥವಾಗಿಸಿದ್ದು ನೀವಲ್ಲವೇ? ಅಧಿಕಾರದಲ್ಲಿದ್ದು ಕಾಂಗ್ರೆಸ್ ದೂಷಣೆ ಮಾಡುವ ಬದಲು ನಿಮ್ಮವರು ಏನು ಮಾಡ್ತಿದಾರೆ ನೋಡಿಕೊಳ್ಳಿ. ಒಬ್ಬ ಸಚಿವರು ಪ್ರವಾಹ ಪರಿಹಾರ ಸಭೆಯಲ್ಲಿ ನಿದ್ದೆ ಮಾಡ್ತಿದ್ದಾರೆ. ಮತ್ತೊಬ್ಬ ಸಂಸದರು ಬೆಣ್ಣೆದೋಸೆ ತಿನ್ನುತ್ತಿದ್ದಾರೆ. ಇನ್ನುಳಿದ ಸಚಿವರು ನಾಪತ್ತೆಯಾಗಿದ್ದಾರೆ. ಇದನ್ನೆಲ್ಲ ಮಾಡಲು ಕಾಂಗ್ರೆಸ್ ಹೇಳಿತ್ತಾ? ಇದನ್ನೂ ಓದಿ: 2024ರಲ್ಲಿ ಬಿಜೆಪಿಯೇತರ ಸರ್ಕಾರ ಬಂದ್ರೆ ರೈತರಿಗೆ ಉಚಿತ ವಿದ್ಯುತ್ – ಕೆಸಿಆರ್ ಭರವಸೆ
Advertisement
ಬೆಂಗಳೂರಿನ ಅವಾಂತರಕ್ಕೆ ಕಾಂಗ್ರೆಸ್‌ನ್ನು ದೂಷಿಸುವ ಸಿಎಂ ಮಾತು 'ಕುಣಿಲಾರದವರು ನೆಲ ಡೊಂಕು' ಎನ್ನುವಂತಿದೆ.
ಬೆಂಗಳೂರಿಗೆ ಐಟಿ ಸಿಟಿ, ಸಿಲಿಕಾನ್ ವ್ಯಾಲಿ ಎಂಬ ವಿಶೇಷಣಗಳು ಸಿಕ್ಕಿದ್ದು ಕಾಂಗ್ರೆಸ್ ಶ್ರಮದಿಂದ, ಇದ್ದನ್ನು ಸಿಎಂ ಅರ್ಥ ಮಾಡಿಕೊಳ್ಳಲಿ.
ಇಂತಹ ಭವ್ಯ ಬೆಂಗಳೂರನ್ನು ನೀರಲ್ಲಿ ಮುಳುಗಿಸಿದ್ದು ನಿಮ್ಮ 50% ಕಮಿಷನ್ ದಾಹ ಅಲ್ಲವೇ.
— Karnataka Congress (@INCKarnataka) September 6, 2022
Advertisement
ಬೆಂಗಳೂರಿನ ಅವಾಂತರಕ್ಕೆ ಕಾಂಗ್ರೆಸ್‌ನ್ನು ದೂಷಿಸುವ ಸಿಎಂ ಮಾತು ‘ಕುಣಿಲಾರದವರು ನೆಲ ಡೊಂಕು’ ಎನ್ನುವಂತಿದೆ. ಬೆಂಗಳೂರಿಗೆ ಐಟಿ ಸಿಟಿ, ಸಿಲಿಕಾನ್ ವ್ಯಾಲಿ ಎಂಬ ವಿಶೇಷಣಗಳು ಸಿಕ್ಕಿದ್ದು ಕಾಂಗ್ರೆಸ್ ಶ್ರಮದಿಂದ, ಇದನ್ನು ಸಿಎಂ ಅರ್ಥ ಮಾಡಿಕೊಳ್ಳಲಿ. ಇಂತಹ ಭವ್ಯ ಬೆಂಗಳೂರನ್ನು ನೀರಲ್ಲಿ ಮುಳುಗಿಸಿದ್ದು ನಿಮ್ಮ 50 ಪರ್ಸೆಂಟ್ ಕಮಿಷನ್ ದಾಹ ಅಲ್ಲವೇ?
'@BSBommai ಅವರೇ,
ಅಧಿಕಾರದಲ್ಲಿದ್ದು ಕಾಂಗ್ರೆಸ್ ದೂಷಣೆ ಮಾಡುವ ಬದಲು ನಿಮ್ಮವರು ಏನು ಮಾಡ್ತಿದಾರೆ ನೋಡಿಕೊಳ್ಳಿ.
ಒಬ್ಬ ಸಚಿವರು ಪ್ರವಾಹ ಪರಿಹಾರ ಸಭೆಯಲ್ಲಿ ನಿದ್ದೆ ಮಾಡ್ತಿದ್ದಾರೆ,
ಮತ್ತೊಬ್ಬ ಸಂಸದರು ಬೆಣ್ಣೆದೋಸೆ ತಿನ್ನುತ್ತಿದ್ದಾರೆ.
ಇನ್ನುಳಿದ ಸಚಿವರುಗಳು ನಾಪತ್ತೆಯಾಗಿದ್ದಾರೆ,
ಇದನ್ನೆಲ್ಲ ಮಾಡಲು ಕಾಂಗ್ರೆಸ್ ಹೇಳಿತ್ತಾ?
— Karnataka Congress (@INCKarnataka) September 6, 2022
ಬೊಮ್ಮಾಯಿ ಅವರೇ, ಕಳೆದ ವರ್ಷವೇ ರಾಜಕಾಲುವೆ ಅಭಿವೃದ್ಧಿಗಾಗಿ 1,500 ಕೋಟಿ ಘೋಷಿಸಿದ್ದಿರಿ, ಆದರೆ ಕೊಟ್ಟಿದ್ದು 400 ಕೋಟಿ ಮಾತ್ರ. ಅದರಲ್ಲೂ ಈಗ ಟೆಂಡರ್ ಪ್ರಕ್ರಿಯೆ ಶುರು ಮಾಡಿದ್ದೀರಿ. ಈ ವಿಳಂಬ ಮಾಡಲು ಕಾಂಗ್ರೆಸ್ ಹೇಳಿತ್ತೆ? ಉಳಿದ 1,100 ಕೋಟಿಯನ್ನು ಏಕೆ ಬಿಡುಗಡೆ ಮಾಡಲಿಲ್ಲ? ರಾಜಕಾಲುವೆ ಅಭಿವೃದ್ಧಿ ನಿಮಗೆ ಬೇಕಿರಲಿಲ್ಲ ಅಲ್ಲವೇ? ಬಿಬಿಎಂಪಿ ಗುತ್ತಿಗೆದಾರರ ಬಿಲ್ ಬಾಕಿ ಇಟ್ಟುಕೊಂಡು ಸತಾಯಿಸುತ್ತಿರುವುದು ನಿಮ್ಮ ಆಡಳಿತವಲ್ಲವೇ? ಫೈಲ್‌ಗಳನ್ನು ಕ್ಲಿಯರ್ ಮಾಡದೇ ರಾಶಿ ಹಾಕಿಕೊಂಡಿರುವುದು ನೀವಲ್ಲವೇ? ಬಿಬಿಎಂಪಿ ಗುತ್ತಿಗೆದಾರರ ಕಮಿಷನ್ 50 ಪರ್ಸೆಂಟ್‌ಗೆ ಏರಿಸಿದ್ದು ನಿಮ್ಮ ಸರ್ಕಾರ ಅಲ್ಲವೇ? ರಸ್ತೆ ಗುಂಡಿ ಮುಚ್ಚದಿರುವುದು ನೀವಲ್ಲವೇ ಎಂದು ಸರಣಿ ಪ್ರಶ್ನೆಗಳನ್ನ ಕಾಂಗ್ರೆಸ್ ಮುಂದಿಟ್ಟಿದೆ.