ಬೆಂಗಳೂರು: ಪಠ್ಯಪುಸ್ತಕದಲ್ಲಿ, ಗಣರಾಜ್ಯೋತ್ಸವ ಪರೇಡ್ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನವಾದಾಗ ನಿಮ್ಮೊಳಗಿನ ಸಂಸ್ಕೃತಿ ವೀರ ಹೆಡೆ ಎತ್ತಲಿಲ್ಲವೇಕೆ? ನಿಮ್ಮದು ಸೆಲೆಕ್ಟೆಡ್ ಸಂಸ್ಕೃತಿ ರಕ್ಷಣೆಯೇ? ಕೆಲಸವಿಲ್ಲದವ ಮಂಗನ ಜೊತೆ ಆಡಲು ಹೊರಟಂತೆ ಸಚಿವ ಸುನಿಲ್ ಕುಮಾರ್ (Sunil Kumar) ಅವರು ಇಲ್ಲದ ವಿವಾದ ಸೃಷ್ಟಿಸಿ ಮೈಲೇಜ್ ಪಡೆಯಲು ಹೊರಟಿದ್ದಾರೆ ಎಂದು ಕಾಂಗ್ರೆಸ್ (Congress) ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.
Advertisement
ಟ್ವೀಟ್‍ನಲ್ಲಿ ಏನಿದೆ:
ಹೆಡ್ ಬುಷ್ (Head Bush) ಚಿತ್ರದಲ್ಲಿ ಇಲ್ಲದ ವಿವಾದ ಕಣ್ಣಿಗೆ ಬೀಳುತ್ತಲೇ ಹೆಡೆ ಎತ್ತಿ ಬುಸ್, ಬುಸ್ ಎನ್ನಲು ಹೊರಟಿರುವ ಸುನಿಲ್ ಕುಮಾರ್ ಅವರೇ, ಪಠ್ಯಪುಸ್ತಕದಲ್ಲಿ, ಗಣರಾಜ್ಯೋತ್ಸವ ಪರೇಡ್ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನವಾದಾಗ ನಿಮ್ಮೊಳಗಿನ ಸಂಸ್ಕೃತಿ ವೀರ ಹೆಡೆ ಎತ್ತಲಿಲ್ಲವೇಕೆ? ನಿಮ್ಮದು ಸೆಲೆಕ್ಟೆಡ್ ಸಂಸ್ಕೃತಿ ರಕ್ಷಣೆಯೇ? ಕೆಲಸವಿಲ್ಲದವ ಮಂಗನ ಜೊತೆ ಆಡಲು ಹೊರಟಂತೆ ಸಚಿವ ಸುನಿಲ್ ಕುಮಾರ್ ಅವರು ಇಲ್ಲದ ವಿವಾದ ಸೃಷ್ಟಿಸಿ ಮೈಲೇಜ್ ಪಡೆಯಲು ಹೊರಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸ್ಥಿತಿ `ಮನೆಯೊಂದು ಮೂರು ಬಾಗಿಲು’ ಆಗಿದೆ – ಜೋಶಿ ಲೇವಡಿ
Advertisement
Advertisement
ಪಠ್ಯದಲ್ಲಿ ಸುರಪುರದ ವೀರರಿಗೆ ಅವಮಾನವಾದಾಗ ಎಲ್ಲಿ ಹೋಗಿದ್ದರು? ತಮ್ಮ ಇಂಧನ ಇಲಾಖೆಯ ಅಕ್ರಮಗಳನ್ನು ತಡೆಯಲು, ಅವ್ಯವಸ್ಥೆ ನಿವಾರಿಸಲು ಆಸಕ್ತಿ ಇಲ್ಲವೇಕೆವಿವಾದಗಳಿಗೆ ಮಾತ್ರ ಇವರ ಆಸಕ್ತಿಯೇ ಎಂದು ಪ್ರಶ್ನಿಸಿದೆ.
Advertisement
ಪೊಲೀಸರನ್ನೇ ಕೀಳಾಗಿ ಕಾಣುವ ಗೃಹಸಚಿವರು ಇರುವಾಗ ಪೊಲೀಸರ ಗೋಳು ಕೇಳುವವರು ಯಾರು? ಕ್ಲರಿಕಲ್ ಸಿಬ್ಬಂದಿಗಳಿಂದ ಪೊಲೀಸರಿಗೆ ನಿರಂತರ ಕಿರುಕುಳವಾಗುತ್ತಿದ್ದರೂ, ಈ ಬಗ್ಗೆ ಹಿಂದೆಯೇ ನಾವು ದನಿ ಎತ್ತಿದ್ದರೂ ಸಚಿವರು ಕ್ರಮ ಕೈಗೊಂಡಿಲ್ಲ. ಆರಗ ಜ್ಞಾನೇಂದ್ರ ಅವರೇ (Araga Jnanendra), ಇಲಾಖೆಯೊಳಗಿನ ಈ ಭ್ರಷ್ಟಾಚಾರವನ್ನು ನಿಯಂತ್ರಿಸಿ ನಿಮ್ಮ ಸಾಮರ್ಥ್ಯ ತೋರಿಸಿ. ತಮ್ಮದೇ ಸರ್ಕಾರದ ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಘಾರಸು ಪಟ್ಟಿಯಲ್ಲಿ ಇಲ್ಲದವರನ್ನು ಯಾವ ಅರ್ಹತೆಯ ಮೇಲೆ ನೇಮಿಸಿದ್ದೀರಿ ಬೊಮ್ಮಾಯಿ (Basavaraj Bommai) ಅವರೇ? ಮಕ್ಕಳ ಆಯೋಗವೆಂದರೆ ಮಕ್ಕಳಾಟವೇ? ಬಿಜೆಪಿಯ ಒಂದು ಮೋರ್ಚಾವೇ? ಅಥವಾ ರಾಜಕೀಯ ಆಶ್ರಯತಾಣ ಎಂದು ತಿಳಿದಿರುವಿರಾ? ಮಕ್ಕಳ ಅಭಿವೃದ್ಧಿ ಇಲಾಖೆಯ ಆಕ್ಷೇಪವಿದ್ದರೂ ಈ ಬಂಡತನವೇಕೆ? ಇದನ್ನೂ ಓದಿ: ಪೊಲೀಸರಿಗೆ ಒಂದು ದೇಶ, ಒಂದು ಸಮವಸ್ತ್ರ – ಕಲ್ಪನೆ ಪ್ರಸ್ತಾಪಿಸಿದ ಮೋದಿ
ಹೆಡ್ ಬುಷ್ ಚಿತ್ರದಲ್ಲಿ ಇಲ್ಲದ ವಿವಾದ ಕಣ್ಣಿಗೆ ಬೀಳುತ್ತಲೇ ಹೆಡೆ ಎತ್ತಿ ಬುಸ್ ಬುಸ್ ಎನ್ನಲು ಹೊರಟಿರುವ @karkalasunil ಅವರೇ,
ಪಠ್ಯಪುಸ್ತಕದಲ್ಲಿ, ಗಣರಾಜ್ಯೋತ್ಸವ ಪರೇಡ್ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನವಾದಾಗ ನಿಮ್ಮೊಳಗಿನ ಸಂಸ್ಕೃತಿ ವೀರ ಹೆಡೆ ಎತ್ತಲಿಲ್ಲವೇಕೆ?
ನಿಮ್ಮದು ಸೆಲೆಕ್ಟೆಡ್ ಸಂಸ್ಕೃತಿ ರಕ್ಷಣೆಯೇ?
— Karnataka Congress (@INCKarnataka) October 28, 2022
ಬಿಜೆಪಿಯ 40% ಕಮಿಷನ್ ಸರ್ಕಾರ ಜನರ ಜೀವ ತೆಗೆಯಲೆಂದೇ ಬಂದಿದೆ. ಆಕ್ಸಿಜನ್ ಕೊರತೆಯಿಂದ ಜೀವ ಬಿಟ್ಟರು. ರಸ್ತೆ ಗುಂಡಿಗೆ ಜನ ಬಲಿಯಾದರು. ಕಮಿಷನ್ ಕಿರುಕುಳಕ್ಕೆ ಜೀವ ಬಿಟ್ಟರು. ರೈತರ ಆತ್ಮಹತ್ಯೆ ಏರಿಕೆಯಾಗಿದೆ. ನಿರುದ್ಯೋಗದಿಂದ ಜೀವ ಬಿಟ್ಟರು. ಈಗ ಕುಲುಷಿತ ನೀರು ಕುಡಿದು ಜನ ಸಾಯುತ್ತಿದ್ದಾರೆ. ಇವೆಲ್ಲ ಸಾವುಗಳಿಗೆ ಸರ್ಕಾರವೇ ಹೊಣೆ ಎಂದು ಕಾಂಗ್ರೆಸ್ ಟೀಕಿಸಿದೆ.