ಬೆಂಗಳೂರು: ಹೆಚ್‌ಡಿಕೆ Vs ಡಿಕೆಶಿ ವಾರ್ ವೈಯುಕ್ತಿಕ ನಿಂದನೆ ಮಟ್ಟಕ್ಕೆ ತಲುಪುತ್ತಿದ್ದು, ಜೆಡಿಎಸ್ (JDS) ಟ್ವೀಟ್ ಗೆ ಕಾಂಗ್ರೆಸ್ ಎದುರೇಟು ನೀಡಿದೆ. ಬ್ಲೂಫಿಲಂ ಮಟ್ಟಕ್ಕೆ ಟ್ವೀಟ್ ಸಮರ ಹೋಗಿದ್ದು, ಜೆಡಿಎಸ್ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ʻಅಟಕಟಾ.. ನಿಮ್ಮದು ಸೆಕ್ಯೂರ್ಡ್ ʻಬ್ಲೂ ಬಾಯ್ಸ್ʼ ಪಾರ್ಟಿ ಅನ್ನೋದು ಮರೆತು ಹೋಯ್ತೆ..?! ಅದೂ ಇಷ್ಟು ಬೇಗ..? ಶಾಂತಂ ಪಾಪಂ ಎಂದು ಕಾಂಗ್ರೆಸ್ (Congress) ಲೇವಡಿ ಮಾಡಿದೆ. ಕಾಂಗ್ರೆಸ್ ಟ್ವೀಟ್ ಸಾರಾಂಶ ಹೀಗಿದೆ. ಇದನ್ನೂ ಓದಿ: ಮಾರ್ಗಸೂಚಿ ಅನ್ವಯ ಸರಿಪಡಿಸಿದ್ರೆ ಆರ್‌ಸಿಬಿ ಮ್ಯಾಚ್‌ಗೆ ಅನುಮತಿ: ಪರಮೇಶ್ವರ್
ಅಟಕಟಾ.. ನಿಮ್ಮದು ಸೆಕ್ಯೂರ್ಡ್ “ಬ್ಲೂ ಬಾಯ್ಸ್” ಪಾರ್ಟಿ ಅನ್ನೋದು ಮರೆತು ಹೋಯ್ತೆ..?! ಅದೂ ಇಷ್ಟು ಬೇಗ..? ಶಾಂತಂ ಪಾಪಂ..!!
ನಿಮ್ಮಲ್ಲಿ ಬ್ಲೂ ಫಿಲಂ ನಿರ್ಮಾಪಕರು, ನಿರ್ದೇಶಕರು, ಎಲ್ಲಕ್ಕಿಂತ ಮಿಗಿಲಾಗಿ ಪಾತ್ರಧಾರಿಗಳು ತುಂಬಿ ತುಳುಕುತಿದ್ದಾರೆ.
ನಿಮ್ಮ ಹುಡುಗ ನಿರ್ಮಿಸಿ, ನಟಿಸಿದ ‘ಹಾಸನ್ ಬ್ಲೂ’ ಚಿತ್ರ ವರ್ಲ್ಡ್ ಫೇಮಸ್! ಕರ್ನಾಟಕದ… https://t.co/uc3Vpdskml
— Karnataka Congress (@INCKarnataka) January 10, 2026
ಜೆಡಿಎಸ್‌ಗೆ ಕಾಂಗ್ರೆಸ್ ಟ್ವೀಟ್ ಏಟು ಏನು?
ನಿಮ್ಮಲ್ಲಿ ʻಬ್ಲೂ ಫಿಲಂʼ ನಿರ್ಮಾಪಕರು, ನಿರ್ದೇಶಕರು, ಎಲ್ಲಕ್ಕಿಂತ ಮಿಗಿಲಾಗಿ ಪಾತ್ರಧಾರಿಗಳು ತುಂಬಿ ತುಳುಕುತಿದ್ದಾರೆ. ನಿಮ್ಮ ಹುಡುಗ ನಿರ್ಮಿಸಿ, ನಟಿಸಿದ ‘ಹಾಸನ್ ಬ್ಲೂ’ (Hassan Blue) ಚಿತ್ರ ವರ್ಲ್ಡ್ ಫೇಮಸ್! ಕರ್ನಾಟಕದ ಕೀರ್ತಿ ಪತಾಕೆಯನ್ನ ಹಾಲಿವುಡ್ ವರೆಗೂ ಹಾರಾಡಿಸಿದೆ. ಅವರು ಈಗಲೂ ಜೈಲಲ್ಲಿ ʻನೀಲ ಮೇಘ ಶ್ಯಾಮ..ʼ ಹಾಡುತ್ತಿದ್ದಾರೆ. ನಿಮ್ಮ ಇನ್ನೊಬ್ಬ ಲಿಂಬಿಯ ಬನದ ನಾಯಕರು ʻಲಿಂಬೆ ಹಣ್ಣಿನಂತ…ʼ ಹಾಡು ಹೇಳಲು ಹೋಗಿ ಜೈಲಲ್ಲಿ ಮುದ್ದೆ ಮುರಿದು ಬಂದಿದ್ದಾರೆ. ಇನ್ನೊಬ್ಬ ʻರಾಧಾ ಮಾಧವ ಮನೋ ವಿಲಾಸ..ʼ ನಾಯಕರು ಜಸ್ಟ್ ಎಸ್ಕೇಪ್ ಆಗಿದ್ದಾರೆ. ನಿಮ್ಮ ನಾಯಕರೇ ನಿರ್ಮಿಸಿ, ನಿರ್ದೇಶಿಸಿ, ನಟಿಸಿ ಸಿನಿಮಾ ತೆಗೆದು ಜಗತ್ತಿಗೆ ತೋರಿಸಿರುವಾಗ ಬೇರೆಯವರಿಗೆ ಟೆಂಟಲ್ಲಿ ತೋರಿಸುವ ಅವಕಾಶವೆಲ್ಲಿದೇ? ನಿಜಕ್ಕೂ ನಿಮ್ಮ ಸಿನಿಮಾ ಚೆನ್ನಾಗಿದೆ. ಅದರ ಮೇಲೆ ಮತ್ತೊಂದು ಕತೆ ಕಟ್ಟಲು ಹೋಗಬೇಡಿ. ಸುಮ್ಮನೇ ಆಕಾಶಕ್ಕೆ ಉಗುಳಿ ಮುಖಕ್ಕೆ ಸಿಂಪಡಿಸಿಕೊಳ್ಳಬೇಡಿ ಅಂತ ಲೇವಡಿ ಮಾಡಿದೆ. ಇದನ್ನೂ ಓದಿ: ಶೂಟೌಟ್ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ – ವಿಡಿಯೋನಲ್ಲಿದ್ದ ಬಹುತೇಕರು ಬಳ್ಳಾರಿಯವರೇ ಅಲ್ವಾ?

