ಯಡಿಯೂರಪ್ಪ ಜನದ್ರೋಹಿ: ಕಾಂಗ್ರೆಸ್ ಕಿಡಿ

Public TV
1 Min Read
congress Session BSy

ಬೆಂಗಳೂರು: ಅಧಿವೇಶನಕ್ಕೂ ಮುನ್ನ ನಾವು ಆಪರೇಷನ್ ಕಮಲ ಮಾಡಲ್ಲ ಎಂದು ಹೇಳಿದ್ದ ಮಾಜಿ ಸಿಎಂ ಯಡಿಯೂರಪ್ಪ ಜನದ್ರೋಹಿಯಾಗಿದ್ದಾರೆ ಎಂದು ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ.

ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರು ಭಾಷಣ ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಭಾವಿಗೆ ಇಳಿದು ಸರ್ಕಾರಕ್ಕೆ ಸದಸ್ಯರ ಬೆಂಬಲ ಇಲ್ಲ ಎಂದು ಹೇಳಿ ಪ್ರತಿಭಟನೆಗೆ ಇಳಿದರು. ಪ್ರತಿಭಟನೆ ಜೋರಾಗುತ್ತಿದ್ದಂತೆ ರಾಜ್ಯಪಾಲರು ಅರ್ಧದಲ್ಲೇ ಭಾಷಣವನ್ನು ಮೊಟಕುಗೊಳಿಸಿದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಆಕ್ರೋಶ ಹೊರಹಾಕಿದೆ.

ಕಾಂಗ್ರೆಸ್ ಟ್ವೀಟ್:
ಆಪರೇಷನ್? ಕಮಲ ಮಾಡಲ್ಲ, ಅಧಿವೇಶನಕ್ಕೂ ಅಡ್ಡಿಪಡಿಸೊಲ್ಲ ಎಂದು ಹೇಳಿದ್ದ ಯಡಿಯೂರಪ್ಪ ಅಧಿವೇಶನ ಆರಂಭದಲ್ಲೇ ಗಲಾಟೆ ಆರಂಭಿಸುವ ಮೂಲಕ ಜನದ್ರೋಹಿಯಾಗಿದ್ದಾರೆ. ಬಿಜೆಪಿ ಶಾಸಕರು ಗದ್ದಲದಿಂದ ರಾಜ್ಯಪಾಲರಿಗೂ, ಸದನಕ್ಕೂ ಅಗೌರವವನ್ನು ತೋರಿದ್ದಾರೆ. ಇದು ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಯ ಹತಾಶ ಮನಃಸ್ಥಿತಿಯ ಪ್ರತೀಕವಾಗಿದೆ.

ಒಟ್ಟು ಕಾಂಗ್ರೆಸ್‍ನ 10 ಶಾಸಕರು ಅಧಿವೇಶನಕ್ಕೆ ಗೈರಾಗಿದ್ದು, ಸರ್ಕಾರ ಉಳಿಯುತ್ತಾ? ಉರುಳುತ್ತಾ? ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಕಾಂಗ್ರೆಸ್‍ನ 12 ಮಂದಿ ಮತ್ತು ಬಿಜೆಪಿಯ ಐವರು ಶಾಸಕರು ಅಧಿವೇಶನಕ್ಕೆ ಗೈರಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *