ಬೆಂಗಳೂರು: ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಬಿಜೆಪಿಗೆ ನಾಡಿನ ಮಠಾಧೀಶರಿಗಿಂತ ಸಂಘದ ಆದೇಶವೇ ಮೇಲು ಎಂದು ಟ್ವೀಟ್ ಮಾಡಿ ಕಾಂಗ್ರೆಸ್ ಕಾಲೆಳೆದಿದೆ.
ನಾಡಿನ ಗೌರವಾನ್ವಿತ ಮಠಾಧೀಶರು, ಸಾಹಿತಿಗಳು ಹಲವು ಪತ್ರ ಬರೆದರೂ ಸ್ಪಂದಿಸದ ಶಿಕ್ಷಣ ಸಚಿವರು @karkalasunil ಅವರ ಪತ್ರಕ್ಕೆ ಒಂದೇ ದಿನದಲ್ಲಿ ಸ್ಪಂದಿಸಿದ್ದಾರೆ.
ಸರ್ಕಾರಕ್ಕೆ ಮಠಾಧೀಶರ ಮೇಲೆ ಗೌರವವಿಲ್ಲ, ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇಲ್ಲ ಎಂಬುದಕ್ಕೆ ಈ ಘಟನೆಯೇ ನಿದರ್ಶನ.
ಬಿಜೆಪಿಗೆ ನಾಡಿನ ಮಠಾಧೀಶರಿಗಿಂತ ಸಂಘದ ಅದೇಶವೇ ಮೇಲು. pic.twitter.com/ETDjgBnuOr
— Karnataka Congress (@INCKarnataka) July 13, 2022
Advertisement
ಟ್ವೀಟ್‌ನಲ್ಲೇನಿದೆ?
ನಾಡಿನ ಗೌರವಾನ್ವಿತ ಮಠಾಧೀಶರು, ಸಾಹಿತಿಗಳು ಹಲವು ಪತ್ರ ಬರೆದರೂ ಸ್ಪಂದಿಸದ ಶಿಕ್ಷಣ ಸಚಿವರು ಸುನಿಲ್ ಕುಮಾರ್ ಅವರ ಪತ್ರಕ್ಕೆ ಒಂದೇ ದಿನದಲ್ಲಿ ಸ್ಪಂದಿಸಿದ್ದಾರೆ. ಸರ್ಕಾರಕ್ಕೆ ಮಠಾಧೀಶರ ಮೇಲೆ ಗೌರವವಿಲ್ಲ, ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇಲ್ಲ ಎಂಬುದಕ್ಕೆ ಈ ಘಟನೆಯೇ ನಿದರ್ಶನ. ಬಿಜೆಪಿಗೆ ನಾಡಿನ ಮಠಾಧೀಶರಿಗಿಂತ ಸಂಘದ ಅದೇಶವೇ ಮೇಲು ಎಂದು ವ್ಯಂಗ್ಯವಾಡಿದೆ. ಇದನ್ನೂ ಓದಿ: ನನಗೆ ಯಾವ ಉತ್ಸವವು ಬೇಡ: ಡಿಕೆಶಿ
Advertisement
ಪಠ್ಯ ಪರಿಷ್ಕರಣೆ ವಿರೋಧಿಸಿದ
★ಆದಿಚುಂಚನಗಿರಿ ಶ್ರೀಗಳು
★ಪಂಡಿತಾರಾಧ್ಯ ಶ್ರೀಗಳು
★ಜಯಮೃತ್ಯುಂಜಯ ಶ್ರೀಗಳು
★ಲಿಂಗಾಯತ ಮಠಾಧೀಶರು
★ನಾಡಿನ ಹಲವು ಸಾಹಿತಿಗಳು
ಪತ್ರ ಬರೆದರೂ ಉತ್ತರಿಸದ ಶಿಕ್ಷಣ ಸಚಿವರು ಸಚಿವ ಸುನಿಲ್ ಕುಮಾರ್‌ರ ಪತ್ರಕ್ಕೆ ಒಂದೇ ದಿನದಲ್ಲಿ ಸ್ಪಂಡಿಸಿದ್ದಾರೆ.
ಬಿಜೆಪಿಯ ಗೌರವ ಯಾರ ಮೇಲೆ❓
ಆದ್ಯತೆ ಯಾವುದಕ್ಕೆ❓
— Karnataka Congress (@INCKarnataka) July 13, 2022
Advertisement
ಪಠ್ಯ ಪರಿಷ್ಕರಣೆ ವಿರೋಧಿಸಿದ ಆದಿಚುಂಚನಗಿರಿ ಶ್ರೀಗಳು, ಪಂಡಿತಾರಾಧ್ಯ ಶ್ರೀಗಳು, ಜಯಮೃತ್ಯುಂಜಯ ಶ್ರೀಗಳು, ಲಿಂಗಾಯತ ಮಠಾಧೀಶರು, ನಾಡಿನ ಹಲವು ಸಾಹಿತಿಗಳು ಪತ್ರ ಬರೆದರೂ ಉತ್ತರಿಸದ ಶಿಕ್ಷಣ ಸಚಿವರು, ಸಚಿವ ಸುನಿಲ್ ಕುಮಾರ್‌ರ ಪತ್ರಕ್ಕೆ ಒಂದೇ ದಿನದಲ್ಲಿ ಸ್ಪಂದಿಸಿದ್ದಾರೆ. ಬಿಜೆಪಿಯ ಗೌರವ ಯಾರ ಮೇಲೆ? ಆದ್ಯತೆ ಯಾವುದಕ್ಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Advertisement
ಬ್ರಹ್ಮಶ್ರೀ ನಾರಾಯಣ ಗುರು ಅವರ ಪಠ್ಯವನ್ನು ಕನ್ನಡ ಭಾಷಾ ವಿಷಯದ ಬದಲಾಗಿ ಸಮಾಜ ವಿಜ್ಞಾನ ವಿಷಯದಲ್ಲಿ ಅಳವಡಿಸುವಂತೆ ಕೋರಿ ಸಚಿವ ಸುನಿಲ್ ಕುಮಾರ್ ಅವರು ಪತ್ರ ಬರೆದಿದ್ದರು. ಅದಕ್ಕೆ ತಕ್ಷಣ ಸ್ಪಂದಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸರ್ಕಾರಿ ಆದೇಶ ಕೂಡ ಹೊರಡಿಸಿದ್ದರು. ಈ ಕ್ರಮವನ್ನು ಕಾಂಗ್ರೆಸ್ ಟೀಕಿಸಿದೆ. ಇದನ್ನೂ ಓದಿ: ಕುಮಾರಸ್ವಾಮಿ ಹೊಸ ಹೀರೋಯಿನ್: ಸಿಎಂ ಇಬ್ರಾಹಿಂ