BSY ನಂತರ BJP ಮತ್ತೊಬ್ಬ ಲಿಂಗಾಯತ ನಾಯಕನನ್ನ ಮುಗಿಸುತ್ತಿದೆ: ಕಾಂಗ್ರೆಸ್

Public TV
1 Min Read
bsy 123

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ನಂತರ ಬಿಜೆಪಿ (BJP) ಮತ್ತೊಬ್ಬ ಲಿಂಗಾಯತ ನಾಯಕನನ್ನ ಮುಗಿಸಿಹಾಕುತ್ತಿದೆ ಎಂದು ಕಾಂಗ್ರೆಸ್‌ ಎಚ್ಚರಿಸಿದೆ.

ಈ ಕುರಿತು ಟ್ವೀಟ್ (Twitter) ಮೂಲಕ ತಿರುಗೇಟು ನೀಡಿರುವ ಕಾಂಗ್ರೆಸ್ (Congress), ಸಿಎಂ ಹುದ್ದೆಯೂ ಕೊಡಲಿಲ್ಲ, ಸಚಿವ ಸ್ಥಾನವೂ ಸಿಗಲಿಲ್ಲ, ಈಗ ರಾಷ್ಟ್ರಪತಿ (President of India) ಕಾರ್ಯಕ್ರಮದ ವೇದಿಕೆಯಲ್ಲೂ ಸ್ಥಾನವಿಲ್ಲ. ಯಡಿಯೂರಪ್ಪ ನಂತರ ಮತ್ತೊಬ್ಬ ಲಿಂಗಾಯತ ನಾಯಕನನ್ನು ಬಿಜೆಪಿ (BJP) ಮುಗಿಸಿ ಹಾಕುತ್ತಿದೆ. ಉದ್ದೇಶಪೂರ್ವಕವಾಗಿ ಜಗದೀಶ್ ಶೆಟ್ಟರ್ (Jagadish Shettar) ಹೆಸರು ಕೈಬಿಡುವ ಮೂಲಕ ಬಿಜೆಪಿ ಲಿಂಗಾಯತ ವಿರೋಧಿ ಧೋರಣೆ ಅನಾವರಣಗೊಳಿಸಿದೆ ಅಲ್ಲವೇ? ಎಂದು ಕುಟುಕಿದೆ. ಇದನ್ನೂ ಓದಿ: ವಿಧವೆಯ ಹಿಂದೆ ಬಿದ್ದು ಮಸಣ ಸೇರಿದ ವಿಚ್ಚೇದಿತ – ಅವಳು ನನ್ನ ಮಾತು ಕೇಳ್ತಿಲ್ಲ ಅಂತ ಆತ್ಮಹತ್ಯೆಗೆ ಶರಣಾದ

Jagadish Shettar Hubli National Flag Congress Narendra Modi

ಶೆಟ್ಟರ್ ಅವರ ಕ್ಷೇತ್ರದಲ್ಲೇ ರಾಷ್ಟ್ರಪತಿ ಕಾರ್ಯಕ್ರಮ ನಡೆದಿದೆ, ಅಲ್ಲಿನ ಶಾಸಕರೂ ಅವರೇ ಆಗಿದ್ದಾರೆ. ಅಲ್ಲದೇ ಬಿಎಸ್‌ವೈ ಬಿಜೆಪಿ ನಂತರ ಬಿಜೆಪಿಯ ದೊಡ್ಡ ಲಿಂಗಾಯತ ನಾಯಕರು ಮತ್ತು ಮಾಜಿ ಸಿಎಂ ಕೂಡ ಆಗಿದ್ದಾರೆ. ಹೀಗಿದ್ದೂ ಜಗದೀಶ್ ಶೆಟ್ಟರ್ ಹೆಸರು ಕೈಬಿಡಲಾಗಿದೆ. ಬಿಜೆಪಿಯಲ್ಲಿ ಲಿಂಗಾಯತ ವಿರೋಧಿ ಧೋರಣೆ ಅದೆಷ್ಟು ಆಳ, ಅಗಲಕ್ಕೆ ಬೇರು ಬಿಟ್ಟಿದೆ ಎಂದು ಊಹಿಸಬಹುದು ಎಂಬುದನ್ನು ಒತ್ತಿ ಹೇಳಿದೆ. ಇದನ್ನೂ ಓದಿ: ಪಾಕ್ ಆರ್ಥಿಕ ಬಿಕ್ಕಟ್ಟು – 4 ವರ್ಷದಲ್ಲಿ ಐವರು ಹಣಕಾಸು ಸಚಿವರ ರಾಜೀನಾಮೆ

BSY

108 ಸಿಬ್ಬಂದಿಗೆ ವೇತನ ನೀಡದೇ ಸತಾಯಿಸಿದ್ದ ಸರ್ಕಾರ, ಈಗ 108 ಕಾಲ್ ಸೆಂಟರ್ ಸೇವೆ ನಿರ್ವಹಿಸುವುದರಲ್ಲೂ ವಿಫಲವಾಗಿದೆ. ರಾಜಕೀಯ ಹೇಳಿಕೆ ಕೊಡಲು ಅತ್ಯುತ್ಸಾಹದಿಂದ ಓಡೋಡಿ ಬರುವ ಸಚಿವ ಸುಧಾಕರ್ ಅವರಿಗೆ ತಮ್ಮ ಇಲಾಖೆಯ ಕೆಲಸಗಳನ್ನು ನಿರ್ವಹಿಸಲು ಮಾತ್ರ ಸಮಯವೂ ಇಲ್ಲ, ಆಸಕ್ತಿಯೂ ಇಲ್ಲ ಎಂದು ತಿರುಗೇಟು ನೀಡಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *