ಬೆಂಗಳೂರು: ಡಕೋಟಾ ಇಂಜಿನ್‍ನಂತಿರುವ 40% ಸರ್ಕಾರ ನಂಬಿದವರಿಗೆ ಮಸಣವೇ ಗತಿ. ಆಸ್ಪತ್ರೆಯಲ್ಲಿ ವಿದ್ಯುತ್, ವೆಂಟಿಲೇಟರ್, ಬೆಡ್, ಔಷಧಗಳ ಕೊರತೆಯ ನಂತರ ಈಗ 108 ಅಂಬುಲೆನ್ಸ್ (108 Ambulance) ಸೇವೆ ಸ್ಥಗಿತವಾಗಿದೆ. ಸಿಡಿಗೆ ತಡೆಯಾಜ್ಞೆ ತರುವಲ್ಲಿ ತೋರಿದ ಆಸಕ್ತಿಯನ್ನು ಇಲಾಖೆಯ ಕೆಲಸದಲ್ಲಿ ತೋರಿದ್ರೆ ಈ ಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ ಸುಧಾಕರ್ (Dr.K Sudhakar) ಅವರೇ? ನಿಮ್ಮ ದುರಾಡಳಿತದಿಂದ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿ ಪರಿವರ್ತನೆಯಾಗಿದೆ ಎಂದು ಬಿಜೆಪಿ (BJP) ವಿರುದ್ಧ ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ (Congress) ವಾಗ್ದಾಳಿ ನಡೆಸಿದೆ.
Advertisement
ಟ್ವೀಟ್‍ನಲ್ಲಿ ಏನಿದೆ?
ಡಕೋಟಾ ಇಂಜಿನ್‍ನಂತಿರುವ 40% ಸರ್ಕಾರ ನಂಬಿದವರಿಗೆ ಮಸಣವೇ ಗತಿ. ಆಸ್ಪತ್ರೆಯಲ್ಲಿ ವಿದ್ಯುತ್, ವೆಂಟಿಲೇಟರ್, ಬೆಡ್, ಔಷಧಗಳ ಕೊರತೆಯ ನಂತರ ಈಗ 108 ಅಂಬುಲೆನ್ಸ್ ಸೇವೆ ಸ್ಥಗಿತವಾಗಿದೆ. ಸಿಡಿಗೆ ತಡೆಯಾಜ್ಞೆ ತರುವಲ್ಲಿ ತೋರಿದ ಆಸಕ್ತಿಯನ್ನು ಇಲಾಖೆಯ ಕೆಲಸದಲ್ಲಿ ತೋರಿದ್ರೆ ಈ ಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ ಸುಧಾಕರ್ ಅವರೇ? ಇದನ್ನೂ ಓದಿ: ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆಯಿಂದ ಕ್ರಮ: ಸುಧಾಕರ್
Advertisement
ಡಕೋಟಾ ಇಂಜಿನ್‌ನಂತಿರುವ#40PercentSarkara ನಂಬಿದವರಿಗೆ ಮಸಣವೇ ಗತಿ.
ಆಸ್ಪತ್ರೆಯಲ್ಲಿ ವಿದ್ಯುತ್, ವೆಂಟಿಲೇಟರ್, ಬೆಡ್, ಔಷಧಗಳ ಕೊರತೆಯ ನಂತರ ಈಗ 108 ಆಂಬುಲೆನ್ಸ್ ಸೇವೆ ಸ್ಥಗಿತವಾಗಿದೆ.
ಸಿಡಿಗೆ ತಡೆಯಾಜ್ಞೆ ತರುವಲ್ಲಿ ತೋರಿದ
ಆಸಕ್ತಿಯನ್ನು ಇಲಾಖೆಯ ಕೆಲಸದಲ್ಲಿ ತೋರಿದ್ರೆ ಈ ಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ @mla_sudhakar ಅವರೇ?
— Karnataka Congress (@INCKarnataka) September 25, 2022
Advertisement
ಇದೇನಾ ಪೇಸಿಎಂ (PayCM) ಎಫೆಕ್ಟ್! ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕೊರತೆಯಿಂದಾಗಿದ್ದ ಅವಘಡದ ನಂತರ 108 ಅಂಬುಲೆನ್ಸ್ ಸೇವೆ ಸ್ಥಗಿತವಾಗಿದ್ದು 40% ಸರ್ಕಾರದ ಅಯೋಗ್ಯತನಕ್ಕೆ ಸಾಕ್ಷಿ. ಸುಧಾಕರ್ ಅವರೇ, ನಿಮ್ಮ ದುರಾಡಳಿತದಿಂದ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿ ಪರಿವರ್ತನೆಯಾಗಿದೆ. ಜನ ಮತ್ತೊಮ್ಮೆ ಹಾದಿಬೀದಿಯಲ್ಲಿ ಸಾಯಲಿ ಎಂದು ಬಯಸುತ್ತಿರುವಿರಾ? ಕೊಲೆಗಡುಕರು, ಅತ್ಯಾಚಾರಿಗಳು, ಭ್ರಷ್ಟರು ಸೇರಿಕೊಂಡಿರುವ ಕೂಟಕ್ಕೆ ಇರುವ ಹೆಸರೇ ಬಿಜೆಪಿ. ಇದನ್ನೂ ಓದಿ: ಆ ಭಾಗ್ಯ ಈ ಭಾಗ್ಯ ಅಂತಾ ರಾಜ್ಯಕ್ಕೆ ದೌರ್ಭಾಗ್ಯ ಕೊಟ್ಟರು: ಸಿದ್ದುಗೆ ಬೊಮ್ಮಾಯಿ ಟಾಂಗ್
Advertisement
ಬೇಟಿ ಬಚಾವ್ ಆಗಬೇಕಿರುವುದು ಬಿಜೆಪಿಗರಿಂದ ಎಂಬುದು ಕರ್ನಾಟಕದಿಂದ, ಉತ್ತರ ಪ್ರದೇಶ, ಉತ್ತರಖಾಂಡದವರೆಗೂ ಬಿಜೆಪಿಗರು ನಿರೂಪಿಸಿದ್ದಾರೆ. ಹೆಣ್ಣುಮಕ್ಕಳನ್ನು ಪೀಡಿಸುವ ಬಿಜೆಪಿಗೆ ಕೀಚಕ, ದುಶ್ಯಾಸನರು ಆದರ್ಶ ಪುರುಷರೇ ಹೊರತು ರಾಮನಲ್ಲ. ‘ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ ಕಂಪ್ಯೂಟರ್ ಸಾಕ್ಷರತಾ ಕೇಂದ್ರ ಸ್ಥಾಪಿಸುತ್ತೇವೆ’ ಎಂದಿದ್ದ ಬಿಜೆಪಿ ಈಗ ತಾವು ಸ್ಥಾಪಿಸಿದ ಕಂಪ್ಯೂಟರ್ ಕೇಂದ್ರಗಳನ್ನು ತೋರಿಸಲು ಸಾಧ್ಯವೇ? ಬಿಜೆಪಿ ಹಳ್ಳಿ ಹಳ್ಳಿಗೂ ತಲುಪಿಸಿದ್ದು ಭ್ರಷ್ಟಾಚಾರವನ್ನು ಮಾತ್ರ! ನಿಮ್ಮ ಪ್ರಣಾಳಿಕೆ ಅಂದ್ರೆ ಸುಳ್ಳಿನ ಗಂಟು ಅಲ್ಲವೇ. ಭ್ರಷ್ಟಾಚಾರ ರಹಿತವಾಗಿ ಬದುಕುವುದು ಸುಲಭವಲ್ಲ, ಭ್ರಷ್ಟಾಚಾರ ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ ಎಂದಿದ್ದ ಸಚಿವ ಮಾಧುಸ್ವಾಮಿ. ಈ ಮೂಲಕ ಭ್ರಷ್ಟಾಚಾರವಿಲ್ಲದೆ ಬಿಜೆಪಿ ಸರ್ಕಾರವಿಲ್ಲ ಎಂಬುದನ್ನ ಒಪ್ಪಿದಂತಾಗಿದೆ! ಕಡಿಮೆ ಮಾಡಲು ಯತ್ನಿಸುತ್ತೇವೆ ಎಂದರೆ ಕಮಿಷನ್ ಪರ್ಸೆಂಟೇಜ್ ಕಡಿಮೆ ಮಾಡ್ಕೊತಿವಿ ಅಂತನಾ ಎಂದು ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ಕಾಲೆಳೆದಿದೆ.