ಬೆಂಗಳೂರು: ಬಿಜೆಪಿ (BJP) ಎಂದರೆ ಕಳ್ಳ, ಮಳ್ಳ, ಸುಳ್ಳರ ಪಕ್ಷ ಎನ್ನಲು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಯತ್ನಾಳ್ ಬಿಜೆಪಿ ಪಕ್ಷದ ನಾಯಕರಲ್ಲ ಎಂದಿರುವ ಅರುಣ್ ಸಿಂಗ್ (Arun Singh) ಅವರ ಹೇಳಿಕೆಯನ್ನು ಬಿಜೆಪಿ ಪಕ್ಷ ಅನುಮೋದಿಸುತ್ತದೆಯೇ? ಇನ್ನೂ ಏಕೆ ಪಕ್ಷದಿಂದ ಯತ್ನಾಳರನ್ನು ಉಚ್ಚಾಟಿಸಿಲ್ಲ? ಇದೇ ಹೇಳಿಕೆಯನ್ನು ಬೊಮ್ಮಾಯಿ (Basvaraj Bommai) ಅವರೂ ಹೇಳುವರೇ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಬಿಜೆಪಿಗೆ ಪ್ರಶ್ನಿಸಿದೆ.
Advertisement
ಟ್ವೀಟ್‍ನಲ್ಲಿ ಏನಿದೆ?
ಕೃಷಿ-ಸಂಸ್ಕರಣಾ ಕ್ಲಸ್ಟರ್‍ಗಳನ್ನು ನೀಡುತ್ತೇವೆ ಎಂದವರು ಕೃಷಿಕರಿಗೆ ಕಷ್ಟಗಳನ್ನು ನೀಡುತ್ತಿದ್ದಾರೆ! ಹಣ್ಣು ಮತ್ತು ತರಕಾರಿ ಕೃಷಿ-ಸಂಸ್ಕರಣಾ ಕ್ಲಸ್ಟರ್‍ಗಳನ್ನು ಸ್ಥಾಪಿಸುತ್ತೇವೆ ಎಂದಿತ್ತು ಬಿಜೆಪಿ. ಮಳೆಗೆ ಬೆಳೆ ಕೊಚ್ಚಿಕೊಂಡು ಹೋಗುತ್ತಿದ್ದರೂ ನೀವೇ ಕೊಟ್ಟಿದ್ದ ಭರವಸೆ ನೆನಪಾಗಲಿಲ್ಲವೇ? ಮುದ್ರಾ ಯೋಜನೆ ಲೂಟಿಗೆಂದೇ ಮಾಡಿದ್ದು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಮುದ್ರಾ ಸಾಲದಿಂದ ಎನ್‍ಪಿಎ ಏರಿಕೆಯಾದ ವರದಿಯಾಗಿತ್ತು, ಈಗ ನಕಲಿ ಅಕೌಂಟ್‍ಗಳಿಗೆ ಮುದ್ರಾ ಹಣ ಸೇರುತ್ತಿದೆ. ಲೂಟಿಕೊರರಿಗೆ ಅನುಕೂಲ ಮಾಡಿಕೊಡುವುದೇ ಮೋದಿಯವರ (Narendra Modi) ಸಾಧನೆಯೇ? ಇದನ್ನೂ ಓದಿ: ಸಿಸೋಡಿಯಾಗೆ CBI ಸಮನ್ಸ್ – ಬಂಧಿಸುವ ಹುನ್ನಾರ ನಡೆದಿದೆ: AAP ಆರೋಪ
Advertisement
Advertisement
ಇಂತಹ ಭ್ರಷ್ಟಾಚಾರ ತೊಲಗಿಸಲೆಂದೇ ನಮ್ಮ ಭಾರತ್ ಜೋಡೋ ಯಾತ್ರೆ. ಬಿತ್ತನೆ ಬೀಜ, ಗೊಬ್ಬರದ ಬೆಲೆ, ವಿಮೆ ಮೋಸ, ಯಂತ್ರೋಪಕರಣಗಳಿಗೆ ಜಿಎಸ್‍ಟಿ, ನೀಡದ ಬೆಂಬಲ ಬೆಲೆ, ಅವೈಜ್ಞಾನಿಕ ಕೃಷಿ ಕಾಯ್ದೆಗಳು, ಹೀಗೆ ಬಿಜೆಪಿ ಸರ್ಕಾರವು ರೈತರಿಗೆ ಮಾಡಿರುವ ಅನ್ಯಾಯಗಳು ಒಂದೆರಡಲ್ಲ. ರೈತರು ಈ ಬಿಜೆಪಿ ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ. ಕಾಂಗ್ರೆಸ್ ಆಡಳಿತಕ್ಕಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ನಾನು ರಾಹುಲ್ ರೀತಿ ಪೆದ್ದನಲ್ಲ, ಸಿದ್ದರಾಮಯ್ಯ ಒಬ್ಬ ರಾಕ್ಷಸ – ಶ್ರೀರಾಮುಲು ತಿರುಗೇಟು
Advertisement
ಬಿಜೆಪಿ ಎಂದರೆ ಕಳ್ಳ, ಮಳ್ಳ, ಸುಳ್ಳರ ಪಕ್ಷ ಎನ್ನಲು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ?
ಯತ್ನಾಳ್ ಬಿಜೆಪಿ ಪಕ್ಷದ ನಾಯಕರಲ್ಲ ಎಂದಿರುವ @ArunSinghbjp ಅವರ ಹೇಳಿಕೆಯನ್ನು @BJP4Karnataka ಅನುಮೋದಿಸುತ್ತದೆಯೇ?
ಇನ್ನೂ ಏಕೆ ಪಕ್ಷದಿಂದ ಯತ್ನಾಳರನ್ನು ಉಚ್ಛಾಟಿಸಿಲ್ಲ?
ಇದೇ ಹೇಳಿಕೆಯನ್ನು @BSBommai ಅವರೂ ಹೇಳುವರೇ?#BJPvsBJP pic.twitter.com/jAVqdjroYl
— Karnataka Congress (@INCKarnataka) October 16, 2022
ಬಿಜೆಪಿ ಎಂದರೆ ಕಳ್ಳ, ಮಳ್ಳ, ಸುಳ್ಳರ ಪಕ್ಷ ಎನ್ನಲು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಯತ್ನಾಳ್ ಬಿಜೆಪಿ ಪಕ್ಷದ ನಾಯಕರಲ್ಲ ಎಂದಿರುವ ಅರುಣ್ ಸಿಂಗ್ ಅವರ ಹೇಳಿಕೆಯನ್ನು ಬಿಜೆಪಿ ಪಕ್ಷ ಅನುಮೋದಿಸುತ್ತದೆಯೇ? ಇನ್ನೂ ಏಕೆ ಪಕ್ಷದಿಂದ ಯತ್ನಾಳರನ್ನು ಉಚ್ಚಾಟಿಸಿಲ್ಲ? ಇದೇ ಹೇಳಿಕೆಯನ್ನು ಬೊಮ್ಮಾಯಿ ಅವರೂ ಹೇಳುವರೇ? ಬಿಜೆಪಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Live Tv
[brid partner=56869869 player=32851 video=960834 autoplay=true]