ಬೀದರ್: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮತ್ತು ಉದ್ಘಾಟನೆಯ ಹೆಸರಿನಲ್ಲಿ ಕಾಂಗ್ರೆಸ್ (Congress) ಪಕ್ಷದ ಬೃಹತ್ ಶಕ್ತಿ ಪ್ರದರ್ಶನಕ್ಕೆ ಬೀದರ್ (Bidar) ಜಿಲ್ಲೆ ಸಾಕ್ಷಿಯಾಗುತ್ತಿದೆ. ಬರೋಬ್ಬರಿ 2025 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಬೀದರ್ ನಗರದ ನೆಹರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಈಗಾಗಲೇ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, 15 ರಿಂದ 20 ಸಾವಿರ ಚೇರ್‌ಗಳನ್ನು ಹಾಕಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದಲ್ಲೆಲ್ಲಾ ಕಾಂಗ್ರೆಸ್ ಪಕ್ಷದ ಬೃಹತ್ ಕಟೌಟ್ ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿದ್ದು, ಎಲ್ಲವೂ ಕಾಂಗ್ರೆಸ್ ಮಯವಾಗಿದೆ.ಇದನ್ನೂ ಓದಿ: ಜಾತಿಗಣತಿ ದೋಷಪೂರಿತ ವರದಿ, ಲಿಂಗಾಯತರಿಗೆ ಅನ್ಯಾಯವಾಗಿದೆ: ಗದಗ ತೋಂಟದಾರ್ಯ ಶ್ರೀ
ಇಂದು ಸಂಜೆ 4 ಗಂಟೆಗೆ ಸಿಎಂ ಸಿದ್ದರಾಮಯ್ಯ ಕಲಬುರಗಿಯಿಂದ (Kalaburagi) ಬೀದರ್ ವಿಮಾನ ನಿಲ್ದಾಣಕ್ಕೆ (Bidar Airport) ಬಂದು, ನಾಳೆ ಬೀದರ್‌ನಿಂದ ಬೆಂಗಳೂರಿಗೆ ತೆರಳಲಿದ್ದು, ಈ ವೇಳೆ ಆಯ್ದ 5 ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡಿ, ವಿಮಾನಯಾನ ಪ್ರಾರಂಭ ಮಾಡಲಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ಸಚಿವ ಸಂಪುಟದ ಹಲವ ಸಚಿವರು ಭಾಗಿಯಾಗಲಿದ್ದು, ಸಿಎಂ ಕಾರ್ಯಕ್ರಮಕ್ಕೆ 30 ರಿಂದ 40 ಸಾವಿರ ಜನ ಭಾಗಿಯಾಗುವ ನಿರೀಕ್ಷೆಯಿದೆ. ನಗರದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಸ್ಟೇಡಿಯಂ ಸೇರಿದಂತೆ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಇದನ್ನೂ ಓದಿ: ಮಚ್ಚು ಹಿಡಿದು ರೀಲ್ಸ್ ಕೇಸ್ – ಬಸವೇಶ್ವರ ನಗರ ಪೊಲೀಸರಿಂದ ರಜತ್‌ಗೆ ಮತ್ತೆ ನೋಟಿಸ್