ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಮತ್ತೆ ಸಚಿವ ಸಂಪುಟ ವಿಸ್ತರಣೆ (Cabinet Expansion) ಕೂಗು ಜೋರಾಗಿದೆ. 2 ರಿಂದ 3 ಬಾರಿ ಗೆದ್ದಿರುವ 20 ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು ಅಂತ ಒತ್ತಾಯಿಸಲು ಹಿರಿಯ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಪ್ರಸಾದ್ ಅಬ್ಬಯ್ಯ, ಶಾಂತನಗೌಡ, ಬಿ.ಆರ್.ಪಾಟೀಲ್, ಷಡಕ್ಷರಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ಗೆ ಸ್ವಪಕ್ಷೀಯರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಸಿದ್ದರಾಮಯ್ಯ ಬಜೆಟ್‌ಗೆ ರಾಮನಗರದ ಕಾಂಗ್ರೆಸ್ ಶಾಸಕ, ಡಿಕೆ ಆಪ್ತ ಇಕ್ಬಾಲ್ ಹುಸೇನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಜೆಟ್ ನನಗೆ ಸಮಾಧಾನ ತಂದಿಲ್ಲ. ನನ್ನ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಿಎಂಗೆ ಮನವಿ ಮಾಡಿದ್ದೆ. ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದೆ. ಆದರೆ, ಸಿಎಂ ಏನೂ ಮಾಡಲಿಲ್ಲ. ನನಗೆ ನೋವಾಗಿದೆ ಅಂತ ಹೇಳಿದ್ದಾರೆ. ಕಷ್ಟವೋ ಸುಖವೋ ನಾವು ಡಿಸಿಎಂ ಹಿಂದೆಯೇ ಹೋಗಬೇಕು ಅಂದಿದ್ದಾರೆ. ಯುಗಾದಿ ನಂತರ ನಮ್ಮ ಗುರುಗಳು ಸಿಎಂ ಆಗುವ ವಿಶ್ವಾಸ ಇದೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದ 50 ವರ್ಷಗಳ ಹಳೆಯ ಎಲ್ಲಾ ಜಲಾಶಯಗಳ ಗೇಟ್ ಬದಲಾವಣೆಗೆ ನಿರ್ಧಾರ: ಡಿ.ಕೆ ಶಿವಕುಮಾರ್
ಈ ಮಧ್ಯೆ, ನಿನ್ನೆ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಡಿಸಿ ಹಾಗೂ ಎಸ್ಪಿ ವರ್ಗಾವಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ ಅಂತ ದೂರಿದ್ದಾರೆ. ಕೆಲವು ಉಸ್ತುವಾರಿ ಸಚಿವರು ತಮಗೆ ಇಷ್ಟಬಂದಂತೆ ವರ್ಗಾವಣೆಯಲ್ಲಿ ತೊಡಗಿದ್ದಾರೆ ಅಂತ ಸಿಎಂ ಎದುರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಸಿಎಂ ಬಜೆಟ್ ಪ್ರತಿಯ ಮುಖಪುಟದಲ್ಲಿ ಮಲೇಷ್ಯಾದ ಟ್ವಿನ್ ಟವರ್ ಇದ್ದು, ಮೊದಲು ಅದನ್ನು ಬದಲಿಸಿ ಅಂತ ಬಿಜೆಪಿಯ ಮೇಲ್ಮನೆ ಸದಸ್ಯ ನವೀನ್ ಸಲಹೆ ಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯ ಬಜೆಟ್ ಬಗ್ಗೆ ʻಕೈʼ ಶಾಸಕ ಇಕ್ಬಾಲ್ ಹುಸೇನ್ ಅಸಮಾಧಾನ

