ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆಗೆ ದೇಣಿಗೆ ಕೋರಿದ ಕಾಂಗ್ರೆಸ್‌

Public TV
1 Min Read
Bharat Jodo Nyay Yatra 3

– 670 ರೂ. ದೇಣಿಗೆ ಕೊಟ್ಟವರಿಗೆ ಸಿಗುತ್ತೆ ರಾಗಾ ಸಹಿಯಿರುವ ಟಿ-ಶರ್ಟ್‌

ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೊ ನ್ಯಾಯ ಯಾತ್ರೆಗಾಗಿ (Bharat Jodo Nyay Yatra) ದೇಣಿಗೆ ನೀಡುವಂತೆ ಕೋರಲಾಗಿದೆ. ಅದಕ್ಕಾಗಿ ‘ನ್ಯಾಯಕ್ಕಾಗಿ ದೇಣಿಗೆ’ ಅಭಿಯಾನ ಆರಂಭಿಸಲಾಗಿದೆ.

6,700 ಕಿಮೀ ಭಾರತ್ ಜೋಡೋ ನ್ಯಾಯ ಯಾತ್ರೆಗೆ 670 ರೂ. ದೇಣಿಗೆ ಕೊಟ್ಟವರಿಗೆ ರಾಹುಲ್‌ ಗಾಂಧಿ ಸಹಿ ಇರುವ ಟಿ-ಶಿಟ್ ನೀಡಲಾಗುವುದು. 67,000 ರೂ. ಅಥವಾ ಅದಕ್ಕಿಂತ ಹೆಚ್ಚು ದೇಣಿಗೆ ನೀಡುವವರಿಗೆ ಟಿ-ಶರ್ಟ್, ಬ್ಯಾಗ್, ಬ್ಯಾಂಡ್, ಬ್ಯಾಡ್ಜ್ ಮತ್ತು ಸ್ಟಿಕ್ಕರ್ ಒಳಗೊಂಡಿರುವ ‘ನ್ಯಾಯ ಕಿಟ್’ ಎಂದು ಕಾಂಗ್ರೆಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ಗೆ  75 ವರ್ಷದ ಸಂಭ್ರಮ- ಪ್ರಧಾನಿಯಿಂದ ಜ.28ಕ್ಕೆ ವಜ್ರ ಮಹೋತ್ಸವ ಉದ್ಘಾಟನೆ

 Bharat Jodo Nyay Yatra 1 1

ಯಾರಾದರೂ ದಾನ ಮಾಡುವ ಯಾವುದೇ ವಿಷಯಕ್ಕೆ, ಅವರು ರಾಹುಲ್ ಜಿಯವರ ಸಹಿ ಇರುವ ಪತ್ರ ಮತ್ತು ದೇಣಿಗೆ ಪ್ರಮಾಣಪತ್ರವನ್ನು ಪಡೆಯುತ್ತಾರೆ. ದೇಣಿಗೆ ಸಂಗ್ರಹವು, ಚುನಾವಣಾ ಪ್ರಚಾರವನ್ನು ಬೆಂಬಲಿಸಲು ಕಳೆದ ವರ್ಷ ಪ್ರಾರಂಭಿಸಿದ ಕ್ರೌಡ್‌ಫಂಡಿಂಗ್ ಅಭಿಯಾನದ ಭಾಗವಾಗಿದೆ.

ಘೋಷಣೆಯಾದ ಎರಡು ಗಂಟೆಗಳಲ್ಲಿ 2 ಕೋಟಿ ರೂಪಾಯಿ ದೇಣಿಗೆ ಹರಿದುಬಂದಿತ್ತು. ಕ್ರೌಡ್‌ಫಂಡಿಂಗ್ ಅಭಿಯಾನವು ಇಲ್ಲಿಯವರೆಗೆ 20 ಕೋಟಿ ಮೌಲ್ಯದ ಹಣವನ್ನು ಗಳಿಸಿದೆ ಎಂದು ಪಕ್ಷ ಹೇಳಿದೆ. ರಾಹುಲ್ ಗಾಂಧಿಯವರು ಉತ್ತರ-ದಕ್ಷಿಣ ಭಾರತ ಜೋಡೊ ಯಾತ್ರೆ ನಡೆಸಿದದ್ದರು. ಈಗ ಮತ್ತೆ ಜನವರಿಯಲ್ಲಿ ಪೂರ್ವ-ಪಶ್ಚಿಮ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: Loksabha Elections: ಬಿಜೆಪಿ ರಾಜ್ಯವಾರು ಚುನಾವಣಾ ಉಸ್ತುವಾರಿಗಳ ಪಟ್ಟಿ ಪ್ರಕಟ

ಕಾಂಗ್ರೆಸ್ ಖಜಾಂಚಿ ಅಜಯ್ ಮಾಕನ್, ಜನರು ತಮ್ಮ ಕೈಲಾದಷ್ಟು ಕೊಡುಗೆ ನೀಡುವಂತೆ ಕೋರಿದ್ದಾರೆ. ಕೆಲವು ನಾಯಕರು ಪ್ರತಿ ಕಿಮೀಗೆ 20-100 ರೂ. ದೇಣಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Share This Article