ಕೇಂದ್ರ ಸಚಿವ ಖೂಬಾಗೆ ಬಿಗ್‌ ಶಾಕ್‌ – ಕಿರಿಯ ವಯಸ್ಸಿನ ಸಾಗರ್ ಖಂಡ್ರೆ ವಿರುದ್ಧ ಸೋಲು

Public TV
1 Min Read
Bidart

ಬೀದರ್: ಹ್ಯಾಟ್ರಿಕ್ ಗೆಲುವಿನ ನೀರಿಕ್ಷೆಯಲ್ಲಿದ್ದ ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ಮುಖಭಂಗ ಅನುಭವಿಸಿದ್ದಾರೆ. ಕಿರಿಯ ವಯಸ್ಸಿನ ಸಾಗರ್‌ ಖಂಡ್ರೆ (Sagar Khandre) ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ.

1.28 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಹಾಲಿ ಸಂಸದ ಭಗವಂತ್ ಖೂಬಾರನ್ನು ಸಾಗರ್‌ ಸೋಲಿಸಿದ್ದಾರೆ. ಕಳೆದ ಬಾರಿಯ ಸೋಲಿನ ಸೇಡನ್ನು ಈಶ್ವರ್ ಖಂಡ್ರೆ ಮಗನ ಮುಖಾಂತರ ತೀರಿಸಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ʻಕೈʼ ಹಿಡಿದ ಚಿಕ್ಕೋಡಿ – ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಮುಗಿಲುಮುಟ್ಟಿದ ಸಂಭ್ರಮ

sagar khandre

ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಂಸತ್ತಿನಲ್ಲಿ ನಾನು ಧ್ವನಿ ಎತ್ತುತ್ತೇನೆ. ನಮ್ಮ ತಂದೆ ವರ್ಚಸ್ಸು, ಗ್ಯಾರಂಟಿಯ ಅನುಷ್ಠಾನದಿಂದಾಗಿ ಜನ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಜಯದ ಬಗ್ಗೆ ಸಾಗರ್‌ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.

ಬೀದರ್‌ ಕ್ಷೇತ್ರದಲ್ಲಿ ಭಗವಂತ್‌ ಖೂಬಾ ವಿರುದ್ಧದ ಅಲೆ ಇತ್ತು. ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ಖೂಬಾ ವಿರುದ್ಧ ಜನ ಅಸಮಾಧಾನ ಹೊರಹಾಕಿದ್ದರು. ಹೊಸ ಹಾಗೂ ಯುವ ನಾಯಕನಿಗೆ ಜನ ಅವಕಾಶ ನೀಡಿದ್ದಾರೆ. ಇದನ್ನೂ ಓದಿ: ಚಾಮರಾಜನಗರ: ಕಾಂಗ್ರೆಸ್‌ ಸಚಿವರ ಪುತ್ರನಿಗೆ ಚೊಚ್ಚಲ ಜಯ

Share This Article