ಚಿಕ್ಕಬಳ್ಳಾಪುರ: ಜಿಲ್ಲೆಯ ನಗರಸಭೆ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಚಿಕ್ಕಬಳ್ಳಾಪುರ ನಗರಸಭೆ ಕಾಂಗ್ರೆಸ್ ಪಕ್ಷದ ಪಾಲಾಗಿದೆ.
31 ವಾರ್ಡುಗಳ ನಗರಸಭೆಯಲ್ಲಿ 16 ವಾರ್ಡುಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ. 9 ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದು, ಉಳಿದಂತೆ 2 ರಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಹಾಗೂ 4 ವಾರ್ಡುಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಹೀಗಾಗಿ ಉಪಚುನಾವಣೆಯಲ್ಲಿ ಬಿಜೆಪಿಯ ಕಮಲ ಆರಳಿಸಿ ಗೆದ್ದು ಬೀಗಿ ಶಾಸಕರಾಗಿದ್ದ ಸುಧಾಕರ್ ಸದ್ಯ ಸಚಿವರಾಗಿ ಚಿಕ್ಕಬಳ್ಳಾಪುರ ನಗರಸಭೆಯಲ್ಲೂ ಬಿಜೆಪಿಯ ಕಮಲ ಅರಳಿಸೋಕೆ ಪ್ಲಾನ್ ಮಾಡಿದ್ದರು.
Advertisement
Advertisement
ಬಿಜೆಪಿ ಅಭ್ಯರ್ಥಿಗಳ ಪರ ಬಿರುಸಿನ ಚುನಾವಣಾ ಪ್ರಚಾರ ನಡೆಸಿ, 20 ರಿಂದ 22 ಸ್ಥಾನಗಳನ್ನ ಗೆಲ್ಲುವ ನೀರಿಕ್ಷೆ ಹೊಂದಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದ್ದು, ಚಿಕ್ಕಬಳ್ಳಾಪುರ ನಗರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 16 ಸ್ಥಾನಗಳನ್ನ ಗಳಿಸುವ ಮೂಲಕ ಸರಳ ಬಹುಮತ ಪಡೆದು ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಹೊಂದಿದೆ. ನಗರಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ನೂತನ ಸದಸ್ಯರು, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದೇ ವೇಳೆ ಸಚಿವ ಸುಧಾಕರ್‌ಗೆ ಕಾಂಗ್ರೆಸ್ ಮುಖಂಡ ಹಾಗೂ ನೂತನ ನಗರಸಭಾ ಸದಸ್ಯ ಟಾಂಗ್ ನೀಡಿದರು.
Advertisement
ಸತತ 7 ನೇ ಬಾರಿಗೆ ಗೆದ್ದ ನಗರಸಭಾ ಸದಸ್ಯ:
ನಗರದ 17ನೇ ವಾರ್ಡಿನಿಂದ ಸ್ಪರ್ಧಿಸಿದ್ದ ಮಾಜಿ ನಗರಸಭಾ ಸದಸ್ಯ ಎಸ್.ಎಂ.ರಫೀಕ್ ಈ ಬಾರಿಯೂ ಗೆಲ್ಲುವ ಮೂಲಕ ಸತತ 7ನೇ ಬಾರಿಗೆ ಗೆದ್ದು ನಗರಸಭಾ ಸದಸ್ಯರಾಗಿ ಮರು ಆಯ್ಕೆಯಾಗಿದ್ದಾರೆ. 801 ಮತಗಳನ್ನ ಪಡೆದು ಗೆದ್ದು ಬೀಗಿದರೆ, ಅವರ ಸಮೀಪ ಪ್ರತಿಸ್ಪರ್ಧಿ ಪಕ್ಷೇತರ ಆಭ್ಯರ್ಥಿ ಶ್ರೀನಿವಾಸ್ 747 ಮತಗಳನ್ನ ಪಡೆದುಕೊಂಡಿದ್ದಾರೆ.
Advertisement
ಮಾಜಿ ನಗರಸಭಾ ಅಧ್ಯಕ್ಷರಿಗೆ ಸೋಲು:
ಕಳೆದ ಬಾರಿ ನಗರಸಭಾ ಅಧ್ಯಕ್ಷರಾಗಿದ್ದ ಲೀಲಾವತಿ ಶ್ರೀನಿವಾಸ್ ಹಾಗೂ ಮುನಿಕೃಷ್ಣ ಸೋಲು ಅನುಭವಿಸಿದ್ದಾರೆ. 31 ವಾರ್ಡಿನಿಂದ ಸ್ಪರ್ಧೆ ಮಾಡಿದ್ದ ಮಾಜಿ ನಗರಸಭಾ ಅಧ್ಯಕ್ಷೆ ಸುಧಾಕರ್ ಬೆಂಬಲಿಗರಾದ ಲೀಲಾವತಿ ಶ್ರೀನಿವಾಸ್ ಹಾಗೂ ಮತ್ತೊಬ್ಬ ಬೆಂಬಲಿಗರಾದ ಮುನಿಕೃಷ್ಣ ಸೋಲು ಅನುಭವಿಸಿದ್ದಾರೆ. 9ನೇ ವಾರ್ಡಿನಲ್ಲಿ ಸ್ಪರ್ಧಿಸಿದ್ದ ಮುನಿಕೃಷ್ಣ ರವರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್‍ನ ಅಭ್ಯರ್ಥಿ ವಕೀಲ ಮಠಮಪ್ಪ ಎದುರು ಸೋಲು ಅನುಭವಿಸಿದ್ದಾರೆ. ಮತ್ತೊಂದಡೆ 16ನೇ ವಾರ್ಡಿನಿಂದ ಸ್ಪರ್ಧೆ ಮಾಡಿದ್ದ ಎಂ.ವಿ.ಭಾಸ್ಕರ್ ಸಹ ಸೋಲುಂಡಿದ್ದಾರೆ.