Connect with us

Karnataka

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಿಂದ ದಿಗ್ವಿಜಯ್ ಸಿಂಗ್‍ಗೆ ಕೊಕ್

Published

on

– ಗೋವಾ ಖುರ್ಚಿಯಿಂದಲೂ ಕಿಕ್‍ಔಟ್
– ಕರ್ನಾಟಕಕ್ಕೆ ಬಂದ್ರು ಕೆ.ಸಿ. ವೇಣುಗೋಪಾಲ್

ನವದೆಹಲಿ: ರಾಜ್ಯ ಕಾಂಗ್ರೆಸ್‍ನಲ್ಲಿ ಎಲೆಕ್ಷನ್ ಹೊಸ್ತಿಲಲ್ಲೇ ದೊಡ್ಡ ಬದಲಾವಣೆ ಮಾಡಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸ್ಥಾನದಿಂದ ದಿಗ್ವಿಜಯ್ ಸಿಂಗ್‍ಗೆ ಕೊಕ್ ಕೊಡಲಾಗಿದೆ. ಗೋವಾ ಉಸ್ತುವಾರಿಯಿಂದಲೂ ಕೊಕ್ ನೀಡಲಾಗಿದೆ.

ದಿಲ್ಲಿ ಮಟ್ಟದ ಕೆಲ ನಾಯಕರು ಹಾಗೂ ರಾಜ್ಯ ಮಟ್ಟದ ಕೆಲ ನಾಯಕರಿಂದಲೂ ದಿಗ್ವಿಜಯ್ ಉಸ್ತುವಾರಿಗೆ ವಿರೋಧ ಇತ್ತು. ಇದೇ ಕಾರಣದಿಂದ ಹೈಕಮಾಂಡ್, ದಿಗ್ವಿಜಯ್ ಸಿಂಗ್ ಅವರನ್ನು ಉಸ್ತುವಾರಿ ಸ್ಥಾನದಿಂದ ಕೆಳಗಿಳಿಸಿದೆ ಎನ್ನಲಾಗಿದೆ. ದಿಗ್ವಿಜಯ್ ಸಿಂಗ್ ಸ್ಥಾನಕ್ಕೆ ಕೇರಳ ಮೂಲದ ಹಾಲಿ ಸಂಸದ, 48 ವರ್ಷದ ಕೆ.ಸಿ. ವೇಣುಗೋಪಾಲ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ಇವರ ಜೊತೆ ಮಾಣಿಕಂ ಠಾಗೂರ್, ಪಿ.ಸಿ. ವಿಶ್ವನಾಥ್, ಮಧು ಯಕ್ಷಿಗೌಡ್, ಡಾ. ಸಾಯಿಲಿಂಗನಾಥ್ ಅವರನ್ನು ಕಾರ್ಯದರ್ಶಿಗಳನ್ನಾಗಿ ನೇಮಿಸಿದೆ. ಇನ್ನು ಗೋವಾ ಉಸ್ತುವಾರಿಯನ್ನಾಗಿ ಡಾ. ಚಲ್ಲಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

ಕೆಸಿ ವೇಣುಗೋಪಾಲ್ ಯಾರು?
ಕಾಲೇಜು ದಿನಗಳಲ್ಲೇ ಎನ್‍ಎಸ್‍ಯುಐ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟ ವೇಣುಗೋಪಾಲ್ 1992 ರಿಂದ 8 ವರ್ಷ ಕೇರಳದ ಯೂಥ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಮಾಡಿರುವ ಇವರು 1996, 2001, ಹಾಗೂ 2006ರಲ್ಲಿ ಆಲ್ಲಪುಜ್ಜಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2004 – 2006 ಕೇರಳದ ಯುಡಿಎಫ್ ಸರ್ಕಾರದಲ್ಲಿ ಸಚಿವರಾಗಿದ್ದ ವೇಣುಗೋಪಾಲ್ 2009ರಲ್ಲಿ ಮೊದಲ ಬಾರಿ ಆಲ್ಲಪುಜ್ಜಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿದ್ದರು. ಯುಪಿಎ 2ನೇ ಅವಧಿಯಲ್ಲಿ ಕೇಂದ್ರದಲ್ಲಿ ರಾಜ್ಯಖಾತೆ ವಿಮಾನಯಾನ ಸಚಿವ 2014ರಲ್ಲಿ ಸಂಸದರಾಗಿ ಮರು ಆಯ್ಕೆ ಆಗಿದ್ದರು. ಸಚಿವರಾಗಿದ್ದ ವೇಳೆ ವಿಮಾನದಲ್ಲಿ ಟಿಕೆಟ್ ಹಗರಣವನ್ನು ಪತ್ತೆ ಮಾಡಿದ್ರು.

Click to comment

Leave a Reply

Your email address will not be published. Required fields are marked *