Loksabha Elections 2024- ಕಾಂಗ್ರೆಸ್‌ನಿಂದ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Public TV
3 Min Read
KC VENUGOPAL

ನವದೆಹಲಿ: ಲೋಕಸಭಾ ಚುನಾವಣೆಗೆ (Loksabha Elections 2024) ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು, ಬಿಜೆಪಿಯಿಂದ (BJP First List) ಈಗಾಗಲೇ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಇದೀಗ ಮಹಾಶಿವರಾತ್ರಿ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಈ ಶುಭದಿನದಂದು ಕಾಂಗ್ರೆಸ್‌ ಕೂಡ ತನ್ನ ಅಭ್ಯರ್ಥಿಗಳ ಫಸ್ಟ್‌ ಲಿಸ್ಟ್‌ (Congress First List) ಬಿಡುಗಡೆ ಮಾಡಿದೆ.

ಗುರುವಾರ ರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೇತೃತ್ವದಲ್ಲಿ ನವದೆಹಲಿಯಲ್ಲಿ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ (CEC) ಸಭೆ ನಡೆದಿತ್ತು. ಈ ಸಭೆಯಲ್ಲಿ 60 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಇಂದು (ಶುಕ್ರವಾರ) ಸಂಜೆ 7 ಗಂಟೆಗೆ ದೆಹಲಿಯ ಕೆಪಿಸಿಸಿ ಕಚೇರಿಯಲ್ಲಿ ಅಜಯ್‌ ಮಾಕೇನ್‌ ಹಾಗೂ ಕೆ.ಸಿ ವೇಣುಗೋಪಾಲ್‌ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಅವರು ಮಾತನಾಡಿ ಮೊದಲು ಶಿವರಾತ್ರಿ ಮತ್ತು ಮಹಿಳಾ ದಿನದ ಶುಭಾಶಯಗಳನ್ನು ತಿಳಿಸಿದರು. ಭಾರತ್ ಜೋಡೋ ಯಾತ್ರೆ ಮುಂಬೈನಲ್ಲಿ ಅಂತ್ಯವಾಗಲಿದೆ. ಇಂಡಿಯಾ ಒಕ್ಕೂಟದ ಎಲ್ಲ ಪಕ್ಷಗಳಿಗೆ ಆಹ್ವಾನ ನೀಡಿದೆ. ಯುವ ನ್ಯಾಯ ಕಾಂಗ್ರೆಸ್ ಪಕ್ಷದ ಅತಿದೊಡ್ಡ ಗ್ಯಾರಂಟಿಯಾಗಿದೆ ಎಂದರು.

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದಲ್ಲಿ ಖಾಲಿಯಾಗಿರುವ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪರೀಕ್ಷೆ ಪತ್ರಿಕೆ ಲೀಕ್ ತಡೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಗುರುವಾರ ಸಿಇಸಿ ಸಭೆ ನಡೆಯಿತು. 39 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿದೆ. ರಾಹುಲ್ ಗಾಂಧಿ (Rahul Gandhi) ಹೆಸರು ಪಟ್ಟಿಯಲ್ಲಿದೆ. 39ರಲ್ಲಿ  15 ಜನರಲ್ ಕ್ಯಾಟಗರಿ, 24 ಮೈನಾರಿಟಿ, 12 ಮಂದಿ (50 ವರ್ಷದೊಳಗಿನ ಅಭ್ಯರ್ಥಿ)ಗಳು ಪಟ್ಟಿಯಲ್ಲಿದ್ದಾರೆ ಎಂದರು.

congress list

ಮೊದಲ ಪಟ್ಟಿಯಲ್ಲಿರುವ ಪ್ರಮುಖರು ?: ರಾಹುಲ್ ಗಾಂಧಿ (ವಯನಾಡ್, ಕೇರಳ), ಭೂಪೇಶ್ ಬಘೇಲ್ (ರಾಜನಂದಗಾಂವ್, ಛತ್ತೀಸ್‌ಗಢ), ತಾಮ್ರಧ್ವಜ್ ಸಾಹು (ಮಹಾಸಮುಂಡ್, ಛತ್ತೀಸ್‌ಗಢ), ಶಶಿ ತರೂರ್ (ತಿರುವನಂತಪುರ, ಕೇರಳ), ಹೈಬಿ ಈಡನ್ (ಎರ್ನಾಕುಲಂ, ಕೇರಳ), ಡಿಕೆ ಸುರೇಶ್ (ಬೆಂಗಳೂರು ಗ್ರಾಮಾಂತರ, ಕರ್ನಾಟಕ)ದಿಂದ ಸ್ಪರ್ಧಿಸಲಿದ್ದಾರೆ.

ಯಾರೆಲ್ಲ ಇದ್ದಾರೆ:  ಅನಂತ ಸ್ವಾಮಿ ಗಡ್ಡದೇವರಮಠ  (ಹಾವೇರಿ), ಎಸ್​ಪಿ ಮುದ್ದಹನುಮೇಗೌಡ (ತುಮಕೂರು), ಡಿ.ಕೆ.ಸುರೇಶ್ (ಬೆಂಗಳೂರು ಗ್ರಾಮಾಂತರ), ವೆಂಕಟರಮಣೇ ಗೌಡ  (ಸ್ಟಾರ್ ಚಂದ್ರು) (ಮಂಡ್ಯ), ಗೀತಾ ಶಿವರಾಜ್ ಕುಮಾರ್ (ಶಿವಮೊಗ್ಗ), ಶ್ರೇಯಸ್ ಪಟೇಲ್ (ಹಾಸನ), ರಾಜು​ ಅಲಗೂರು (ವಿಜಯಪುರ)ಗೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಅಖಾಡಕ್ಕೆ ಇಳಿಯುವ ಅಭ್ಯರ್ಥಿಗಳಾಗಿದ್ದಾರೆ.

ಕೇರಳದಿಂದ 15 ಅಭ್ಯರ್ಥಿಗಳ ಹೆಸರನ್ನು ಘೊಷಣೆ ಮಾಡಲಾಗಿದೆ. ರಾಜಮೋಹನ್ ಉನ್ನಿಥಾನ್ (ಕಾಸರಗೋಡು), ಕೆ.ಸುಧಾಕರನ್ (ಕಣ್ಣೂರು), ಶಾಫಿ ಪರಂಬಿಲ್ (ವಡಕರ), ರಾಹುಲ್ ಗಾಂಧಿ (ವಯನಾಡ್), ಎಂ.ಕೆ. ರಾಘವನ್ (ಕೋಳಿಕೋಡ್), ವಿ.ಕೆ. ಶ್ರೀಕಂದನ್ (ಪಾಲಕ್ಕಾಡ್), ರಮ್ಯಾ ಹರಿದಾಸ್ (ಆಲತ್ತೂರ್ (SC), ಕೆ. ಮುರಳೀಧರನ್ (ತ್ರಿಶೂರ್), ಬೆನ್ನಿ ಬಹನನ್ (ಚಾಲಕುಡಿ), ಹೈಬಿ ಈಡನ್ (ಎರ್ನಾಕುಲಂ), ಡೀನ್ ಕುರಿಯಾಕೋಸ್ (ಇಡುಕ್ಕಿ), ಕೋಡಿಕುನ್ನಿಲ್ ಸುರೇಶ್ (ಮಾವೇಲಿಕ್ಕರ (SC), ಆಂಟೊ ಆಂಟೋನಿ (ಪತ್ತನಂತಿಟ್ಟ), ಅಡೂರ್ ಪ್ರಕಾಶ್ (ಅಟ್ಟಿಂಗಲ್), ಡಾ. ಶಶಿ ತರೂರ್ (ತಿರುವನಂತಪುರಂ) ಇವರುಗಳನ್ನು ಈ ಬಾರಿ ಕಣಕ್ಕಿಳಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

ಛತ್ತೀಸ್​ಗಢದಲ್ಲಿ ಮಾಜಿ ಸಿಎಂ ಭೂಪೇಶ್​ ಬಘೇಲ್​ ಸೇರಿ 6 ಮಂದಿಗೆ ಟಿಕೆಟ್ ನೀಡಲಾಗಿದೆ. ಡಾ. ಶಿವಕುಮಾರ್ ದಹರಿಯಾ (ಜಂಜಗಿರ್ – ಚಂಪಾ (SC), ಜ್ಯೋತ್ಸ್ನಾ ಮಹಂತ್ (ಕೊರ್ಬಾ), ರಾಜೇಂದ್ರ ಸಾಹು (ದುರ್ಗ್), ವಿಕಾಸ್ ಉಪಾಧ್ಯಾಯ (ರಾಯ್ಪುರ), ತಾರಧ್ವಜ್ ಸಾಹು (ಮಹಾಸಮುಂಡ)ಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ.

ತೆಲಂಗಾಣದಿಂದ 4 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಾಗಿದೆ. ಸುರೇಶ್ ಕುಮಾರ್ ಶೆಟ್ಕರ್ (ಜಹೀರಾಬಾದ್), ಸುನೀತಾ ಮಹೇಂದರ್ ರೆಡ್ಡಿ (ಚೇವೆಲ್ಲಾ), ಕುಂದೂರು ರಘುವೀರ್ (ನಲ್ಗೊಂಡ), ಪೋರಿಕ ಬಲರಾಮ್ ನಾಯಕ್ (ಮಹಬೂಬಾಬಾದ್-ST)ಗೆ ಟಿಕೆಟ್ ಘೋಷಿಸಲಾಗಿದೆ. ಜೊತೆಗೆ ಮೊಹಮ್ಮದ್‌ ಹಮ್ದುಲ್ಲಾ ಸೈಯದ್‌ (ಲಕ್ಷದ್ವೀಪ-ST), ವಿನ್ಸೆಂಟ್‌ ಹೆಚ್‌ ಪಾಲಾ (ಶಿಲ್ಲಾಂಗ್-‌ ST, ಮೇಘಾಲಯ), ಸಲೆಂಗ್‌ ಎ ಸಂಗ್ಮಾ (ತುರಾ-ST, ಮೇಘಾಲಯ), ಎಸ್‌ ಸಪಾಂಗ್‌ಮೆರೆನ್‌ ಜಮಿರ್‌ (ನಾಗಾಲ್ಯಾಂಡ್), ಗೋಪಾಲ್‌ ಚೆಟ್ರಿ (ಸಿಕ್ಕಿಂ) ಕಣದಲ್ಲಿದ್ದಾರೆ.

Share This Article