ಬೆಂಗಳೂರು: ಶುಕ್ರವಾರ ಮಂಗಳೂರಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ರು. ಆದ್ರೆ ಇಂದು ಬೆಂಗಳೂರು ವಲಕ್ಕೆ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.
ಪ್ರತ್ಯೇಕ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನಗರಕ್ಕೆ ಸಾಕಷ್ಟು ಭರವಸೆಗಳನ್ನು ನೀಡಿದೆ. ನಗರದ ಜ್ಞಾನ ಜ್ಯೋತಿ ಸಂಭಾಗಣದಲ್ಲಿ ವೀರಪ್ಪ ಮೊಯ್ಲಿ, ಬಿಕೆ ಹರಿಪ್ರಸಾದ್, ಮಾಜಿ ಪ್ರಧಾನಿಗಳ ಸಲಹೆಗಾರ ಶ್ಯಾಮ್ ಪೀತ್ರೋಡ್, ಕೆಜೆ ಜಾರ್ಜ್, ದಿನೇಶ್ ಗೂಂಡುರಾವ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ರು.
Advertisement
ಪ್ರಣಾಳಿಕೆಯ ಪ್ರಮುಖ ಭರವಸೆಗಳು ಹೀಗಿವೆ.
* ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಕ್ಕೆ ಒಂದು ಲಕ್ಷ ಕೋಟಿ ವಿಶೇಷ ಪ್ಯಾಕೇಜ್.
* ಟೆಂಡರ್ ಶ್ಯೂರ್ ರಸ್ತೆಗಳ ವ್ಯಾಪ್ತಿ ವಿಸ್ತರಣೆ.
* ಮೆಟ್ರೊ ಸೌಲಭ್ಯ ವಿಸ್ತರಣೆ.
* ಜನದಟ್ಟಣೆ ಪ್ರದೇಶದಲ್ಲಿ ಸ್ಕೈವಾಕ್ ನಿರ್ಮಾಣ.
* ಹಸಿರು ಮನೆಗಳ ಉತ್ತೇಜನಕ್ಕೆ ಉದ್ಯಾನವನಗಳ ನವೀಕರಣ.
* ಲಕ್ಷ್ಮಣರಾವ್ ವರದಿ ಪ್ರಕಾರ ಕೆರೆಗಳ ಜೀರ್ಣೋದ್ಧಾರ
* ನಗರ ಪ್ರಮುಖ ರಸ್ತೆಗಳಲ್ಲಿ ವೈಟ್ ಟ್ಯಾಪಿಂಗ್ ಪೂರ್ಣ.
* ಬೆಂಗಳೂರಿನ ಪಕ್ಕದ ಜಿಲ್ಲೆಗಳಿಗೆ ಮೆಟ್ರೊ ವಿಸ್ತರಣೆ.
* ಖಾಸಗಿ ಬಸ್‍ಗಳು ನಗರ ಪ್ರವೇಶಿಸದಂತೆ ನಿರ್ಬಂಧ.
* ಬೆಂಗಳೂರು ಹೊರವಲಯದಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ.
* ಡೆಲ್ಲಿ ಮೆಟ್ರೊ ಅಂಡರ್ ಗ್ರೌಂಡ್ ಮಾದರಿಯಲ್ಲಿ ಅಂಡರ್ ಗ್ರೌಂಡ್ ಪಥ ನಿರ್ಮಾಣ.
* ಎಲ್ಲಾ ಪ್ರಮುಖ ಜಂಕ್ಷನ್‍ಗಳಲ್ಲಿ ಸಿಸಿಟಿವಿ.
* ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನಗಳಿಗೆ ಪ್ರತ್ಯೇಕ ಪಥ.
* ಘನತ್ಯಾಜ್ಯ ಬೇರ್ಪಡಿಸುವಿಕೆ ಕಡ್ಡಾಯ.
* ಮೇಕೆದಾಟು ಅಣೆಕಟ್ಟು ನಿರ್ಮಾಣ – ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ರಾಮನಗರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ.
* ಬೆಂಗಳೂರು ಅಭಿವೃದ್ಧಿಗಾಗಿ ಮೆಟ್ರೊಪಾಲಿಟಿನ್ ಯೋಜನೆ.
* ಪ್ರತಿ ಮನೆಗಳಿಗೆ 125 ಎಮ್‍ಎಲ್‍ಡಿ ನೀರು ನೀಡುವುದು.
* ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ.
* ಸಾರಿಗೆ ಅನೂಕಲಕ್ಕೆ ಹೆಚ್ಚಿನ ಫ್ಲೈ ಓವರ್ ನಿರ್ಮಾಣ.
* ಹೆಚ್ಚಿನ ತಂತ್ರಜ್ಞಾನದ ಒಳಚರಂಡಿ, ನೀರು ಶುದ್ದೀಕರಣ ಘಟಕ, ಕೆರೆಗಳ ಅಭಿವೃದ್ಧಿ.
Advertisement
ಒಟ್ಟಿನಲ್ಲಿ ಕಾಂಗ್ರೆಸ್ ಬೆಂಗಳೂರಿನ ಎಲ್ಲಾ ಕ್ಷೇತ್ರಗಳನ್ನು ಪಾರುಪತ್ಯ ಸಾಧಿಸಲು ಭರಪೂರ ಭರವಸೆಗಳನ್ನ ನೀಡಿದೆ.