ಬೆಂಗಳೂರು: ಕರ್ನಾಟಕ ಪೊಲಿಟಿಕಲ್ ಲೀಗ್ ನಲ್ಲಿ ಕುದುರೆ ವ್ಯಾಪಾರ ಜೋರಾಗಿದ್ದು, ಬಿಜೆಪಿ ಪರವಾಗಿ ಸ್ವತಃ ಜನಾರ್ದನ ರೆಡ್ಡಿ ಅಖಾಡಕ್ಕೆ ಇಳಿದಿದ್ದಾರೆ.
ಕಾಂಗ್ರೆಸ್ ನಾಯಕರಾದ ವಿಎಸ್ ಉಗ್ರಪ್ಪ ಮತ್ತು ಪ್ರೊ ರಾಜೀವ್ ಗೌಡ ಜಂಟಿ ಸುದ್ದಿಗೋಷ್ಠಿ ನಡೆಸಿ ಜನಾರ್ದನ ರೆಡ್ಡಿ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ಅವರಿಗೆ ಕರೆ ಮಾಡಿ ಆಫರ್ ನೀಡಿರುವ ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
Advertisement
ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆಯಲು ನೂರು, ನೂರೈವತ್ತು ಕೋಟಿ ರೂ. ಆಮಿಷವೊಡ್ಡುತ್ತಿದ್ದಾರೆ. ಅಮಿತ್ ಶಾ ಕೂಡ ಆಮಿಷವೊಡ್ಡಿದ್ದಾರೆ. ನೂರು ಕೋಟಿ ರೂ. ಜೊತೆಗೆ ಕ್ಯಾಬಿನೆಟ್ ಸಚಿವ ಸ್ಥಾನದ ಆಮಿಷ ನೀಡಿದ್ದಾರೆ. ನಮ್ಮ ಶಾಸಕರ ಕುಟುಂಬದವರನ್ನ ಸಂಪರ್ಕಿಸಿ ಹಣ ನೀಡುವ ಕೆಲಸ ಮಾಡಿ, ಶಾಸಕರ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಉಗ್ರಪ್ಪ ಹೇಳಿದರು.
Advertisement
ಮಾತುಕತೆಯ ವೇಳೆ ಜನಾರ್ದನ ರೆಡ್ಡಿ ನೇರವಾಗಿ ಅಮಿತ್ ಶಾ ಅವರೊಂದಿಗೆ ಕೂತು ಮಾತನಾಡಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದು, ಒನ್ ಟು ಓನ್ ನಾನೇ ಅಮಿತ್ ಶಾ ಬಳಿ ಮಾತನಾಡಿಸುತ್ತೇನೆ. ಈಗಿರುವ ಆಸ್ತಿಯ ನೂರರಷ್ಟು ಆಸ್ತಿಯನ್ನು ಮಾಡಿಕೊಳ್ಳಬಹುದು. ನಿನಗೆ ಒಳ್ಳೆಯ ಸಮಯ ಬಂದಿದೆ ಎಂದು ಆಫರ್ ನೀಡಿದ್ದಾರೆ.
Advertisement
ರೆಡ್ಡಿ ಅಮಿಷಕ್ಕೆ ಒಳಗಾಗದ ಬಸನಗೌಡ ಅವರು, ಕಾಂಗ್ರೆಸ್ ಕಷ್ಟದ ಸಮಯದಲ್ಲಿ ನನ್ನ ಕೈ ಹಿಡಿದಿದೆ. ಆದರೆ ನಿಮ್ಮ ಮೇಲೆ ಗೌರವವಿದೆ. ಆದರೆ ತಾನು ಪಕ್ಷಕ್ಕೆ ಮೋಸ ಮಾಡಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ.
Advertisement
ಕಾಂಗ್ರೆಸ್ ಸುದ್ದಿಗೋಷ್ಠಿ ವೇಳೆ ಅಮಿತ್ ಶಾ ಅವರು ಸಹ ನಮ್ಮ ಶಾಸಕರಿಗೆ ಆಮಿಷ ನೀಡಿದ್ದಾರೆ. ಈ ವಿಡಿಯೋ ಸಹ ನಮ್ಮ ಬಳಿ ಇದೆ. ಅದನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮಾತುಕತೆಯಲ್ಲಿ ಏನಿತ್ತು?
ಜನಾರ್ದನ ರೆಡ್ಡಿ ಪಿಎ – ಹಲೋ
ಬಸವನಗೌಡ – ಹಲೋ..
ಜನಾರ್ದನ ರೆಡ್ಡಿ ಪಿಎ – ಹಲೋ, ಫ್ರೀ ಆದ್ರೆ ಸರ್, ಜನಾರ್ದನ್ ರೆಡ್ಡಿ ಸರ್ ಹತ್ತಿರ ಮಾತನಾಡಬೇಕು ಅಂದ್ರು?
ಬಸವನಗೌಡ – ಕೊಡಿ ಕೊಡಿ..
ಜನಾರ್ದನ್ ರೆಡ್ಡಿ – ಬಸವನಗೌಡ,
ಬಸವನಗೌಡ -ಸರ್ ಹೇಳಿ ಸರ್ ಹೇಳಿ, ನಮಸ್ಕಾರ
ಜನಾರ್ದನ ರೆಡ್ಡಿ – ಫ್ರೀ ಇದಿಯಾ..?
ಬಸವನಗೌಡ – ಹೇಳಿ ಸರ್ ನಮಸ್ಕಾರ, ಫ್ರೀ ಇದ್ದೇನೆ.. ಹೇಳಿ
ಜನಾರ್ದನ ರೆಡ್ಡಿ – ಏನೇ ಇದ್ರು, ಕೆಟ್ಟ ಘಳಿಗೆಯನ್ನ ಮರೆತು ಹೋಗಿಬಿಡಿ. ನಾನ್ ನಿನಗೆ ಅರ್ಧ ರಾತ್ರಿಯಲ್ಲಿ ಹೇಳ್ತಾ ಇದ್ದೇನೆ. ನಿನ್ನ ಟೈಂ ಚೆನ್ನಾಗಿ ಶುರುವಾಗಿದೆ. ಮತ್ತೆ ನಿನ್ನ ಹತ್ತಿರ ನೇರವಾಗಿ ದೊಡ್ಡವ್ರು, ರಾಷ್ಟ್ರೀಯ ಅಧ್ಯಕ್ಷರು ಮಾತನಾಡುತ್ತಾರೆ. ನಿಮಗೆ ಏನ್ ಪದವಿ ಬೇಕು, ಏನ್ ಬೇಕು, ಒನ್ ಟು ಒನ್ ಕುತುಕೊಂಡು ಮಾತನಾಡಿ ಮುಂದಿನ ಹೆಜ್ಜೆ ಇಡೋಣ.
ಬಸವನಗೌಡ – ಇಲ್ಲ ಸರ್ ಇಲ್ಲ. ಯಾಕಂದ್ರೆ ಪರಿಸ್ಥಿತಿ ಚೆನ್ನಾಗಿಲ್ಲದಾಗ ಅವರು ನನ್ ಕೈ ಹಿಡಿದು ಮಾಡಿದ್ದಾರೆ.
ಜನಾರ್ದನ ರೆಡ್ಡಿ – ನಾನ್ ನಿನಗೆ ಒಂದೇ ಪಾಯಿಂಟ್ ಹೇಳ್ತೇನೆ, ಬಿಎಸ್‍ಆರ್ ಕಾಂಗ್ರೆಸ್ ಪಕ್ಷ ಮಾಡೋವಾಗ ತುಂಬ ಕೆಟ್ಟ ಸಂದರ್ಭದಲ್ಲಿ ಶ್ರೀರಾಮುಲು ಪಾರ್ಟಿ ಮಾಡಿದ್ದು, ತುಂಬ ವಿರೋಧದ ನಡುವೆ ಮಾಡಿದ್ದು, ನೀವೆಲ್ಲ ನಂಬಿಕೊಂಡು ಆಸ್ತಿ ಕಳೆದುಕೊಂಡಿದ್ದೀರಿ ಅನ್ನೋದ್ರಲ್ಲ ಎರಡನೇ ಮಾತೇ ಇಲ್ಲ.
ಜನಾರ್ದನ ರೆಡ್ಡಿ – ನಾನ್ ಹೇಳ್ತೇನೆ, ನೀನು ಅದಕ್ಕಿಂತ ನೂರಷ್ಟು ಬೆಳೆಯಬೇಕು. ಶಿವನಗೌಡ ನಾಯ್ಕ್ ಅವತ್ತು ನಾನ್ ಮಾತ್ ಕೇಳಿ ಬಂದು ಮಂತ್ರಿ ಆಗಿ ಉದ್ದಾರ ಆಗಿದ್ದು, ಇವತ್ತು ಎಂಎಲ್‍ಎಗೆ ಉಳಿದುಕೊಂಡು ತನ್ನಷ್ಟಕ್ಕೆ ತಾನು ಎಂಎಲ್‍ಎಗೆ ದುಡಿದುಕೊಂಡು ಶಕ್ತಿವಂತನಾಗಿದ್ದಾನಾ ಇಲ್ವಾ?
ಜನಾರ್ದನ ರೆಡ್ಡಿ – ನನ್ನಿಂದನೇ ಆಗಿದ್ದಲ್ವಾ? ರಾಜುಗೌಡ ನನ್ನಿಂದನೇ ಅಲ್ವಾ ಆಗಿದ್ದು?
ಬಸವನಗೌಡ – ಹು.. ಹೌದು..
ಜನಾರ್ದನ ರೆಡ್ಡಿ – ನಿನಗೆ ತಿಳಿಸುವುದು ಇಷ್ಟೇ. ನಮ್ಮ ಬ್ಯಾಡ್ ಟೈಂನಲ್ಲಿ ನಿಂದು ಮ್ಯಾಚ್ ಆಗಿಲ್ಲ. ನನಗೆ ನಿಂಗೆ. ಇವತ್ತು ಶಿವನಗೌಡ ನಾಯ್ಕ್ ಗೆದ್ದು ಪ್ರಯೋಜನವಿಲ್ಲ. ಇವತ್ತು ನೀನ್ ಮಂತ್ರಿ ಆಗ್ತಿಯಾ.
ಜನಾರ್ದನ ರೆಡ್ಡಿ – ನಾನು ಹೇಳೋದು ಇನ್ನೊಂದಲ್ಲ.ನೇರವಾಗಿ ದೊಡ್ಡವರ ಹತ್ತಿರನೇ ಒನ್ ಟು ಒನ್ ಕುರಿಸಿ ಮಾತನಾಡಿಸುತ್ತೇನೆ. ನಾನೇ ಸ್ವತಃ ಮಾತನಾಡಿಸುತ್ತೇನೆ. ಏನ್ ದೇಶದಲ್ಲಿ ಅವರು ಆಡಳಿತ ಮಾಡುತ್ತಿದ್ದಾರೆ. ಆ ಮಾತು ಉಳಿಸಿಕೊಳ್ಳದಕ್ಕೆ ಆಗುತ್ತಾ ಇರೋದು. ನಾನು ಹೇಳುತ್ತೇನೆ. ನಿನ್ನ ಆಸ್ತಿ ಮಾಡಿಕೊಳ್ತಿಯಲ್ಲ. ಅದಕ್ಕಿಂತ ನೂರರಷ್ಟು ಮಾಡಿಕೊಳ್ತಿಯ ಬಸವನಗೌಡ.
ಬಸವನಗೌಡ – ಇಲ್ಲ ಸರ್ ಸಾರಿ. ಏಕೆಂದರೆ ಲಾಸ್ಟ್ ಪರಿಸ್ಥಿತಿಯಲ್ಲಿ ಕರೆದುಕೊಂಡು ಹೋಗಿ ಟಿಕೆಟ್ ಕೊಡಿಸಿ, ಎಲೆಕ್ಷನ್ ಅವರೇ ಮಾಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ದ್ರೋಹ ಮಾಡುವುದು ಅರ್ಥವಿಲ್ಲ. ನಿಮ್ಮ ಮೇಲೆ ಗೌರವವಿದೆ. ಕ್ಷಮಿಸಿ.