ನವದೆಹಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೇಗಾದ್ರೂ ಮಾಡಿ ಮೋದಿ ಮತ್ತೆ ಪ್ರಧಾನಿಯಾಗೋದನ್ನು ತಡೆಯಲು ವಿಪಕ್ಷ ಕಾಂಗ್ರೆಸ್ ಮಹಾ ರಣತಂತ್ರ ರೂಪಿಸಿದೆ.
ಕಾಂಗ್ರೆಸ್ ತಾನು ಗೆಲ್ಲದಿದ್ರೂ ಪರವಾಗಿಲ್ಲ. ಎದುರಾಳಿ ಸೋಲಬೇಕು ಎನ್ನುವ ಮಂತ್ರ ಅಳವಡಿಸಿಕೊಂಡಿದೆ. ವಿಪಕ್ಷಗಳಲ್ಲಿ ಯಾರನ್ನೇ ಆದರೂ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದ್ರೆ ಅದನ್ನು ಒಪ್ಪಲು ಕಾಂಗ್ರೆಸ್ ರೆಡಿಯಾಗಿದೆ ಎನ್ನಲಾಗುತ್ತಿದೆ.
Advertisement
Advertisement
ಕಾಂಗ್ರೆಸ್‍ನ ಒಂದು ಕಂಡೀಷನ್ ಅಂದ್ರೆ ಆ ಅಭ್ಯರ್ಥಿ ಆರ್‍ಎಸ್‍ಎಸ್ ಹಿನ್ನೆಲೆ ಹೊಂದಿರಬಾರದು. ಈ ಮೂಲಕ ಲೋಕಸಮರಕ್ಕೂ ಮುನ್ನವೇ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ರೇಸ್‍ನಿಂದ ಹೊರಬಿದ್ದಂತಾಗಿದೆ.
Advertisement
ಬಿಎಸ್‍ಪಿ ಅಧಿನಾಯಕಿ ಮಾಯಾವತಿ ಮತ್ತು ಟಿಎಂಸಿಯ ಮಮತಾ ಬ್ಯಾನರ್ಜಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಲೋಕಸಭೆಯ ಅರ್ಧಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿ, ಉಳಿದ ಕ್ಷೇತ್ರಗಳನ್ನು ಮಿತ್ರ ಪಕ್ಷಗಳಿಗೆ ಬಿಟ್ಟುಕೊಡಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಕಾಂಗ್ರೆಸ್‍ನ ಈ ಚಿಂತನೆ ರಾಷ್ಟ್ರ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇನ್ನು ಕೇಳಿದಷ್ಟು ಸೀಟ್ ಕೊಟ್ಟರೆ ಮಾತ್ರ ಕಾಂಗ್ರೆಸ್ ಜೊತೆ ದೋಸ್ತಿ ಎಂದು ಮಾಯಾವತಿ ಹೇಳಿದ್ದಾರೆ.