LatestMain PostNational

ಮುಂದಿನ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡ್ತೀವಿ: ಗುಲಾಂ ನಬಿ ಅಜಾದ್

ನವದೆಹಲಿ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‍ನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಲು ಚರ್ಚೆ ನಡೆಸಲಾಗಿದೆ. ನಾಯಕತ್ವದ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ತಿಳಿಸಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದರು, ಜಿ-23 ಭಿನ್ನಮತೀಯರ ಕೋರ್ ಗ್ರೂಪ್‍ನಿಂದ, ಚುನಾವಣೆಯಲ್ಲಿ ಕಾಂಗ್ರೆಸ್‍ನ ಹೀನಾಯ ಸೋಲಿನ ನಂತರ ಮೂರನೇ ಸುತ್ತಿನ ಚರ್ಚೆಯನ್ನು ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸೋನಿಯಾ ಗಾಂಧಿಯವರೊಂದಿಗಿನ ಸಭೆಯು ಉತ್ತಮವಾಗಿತ್ತು. ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರು ಅವರು ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಸರ್ವಾನುಮತದಿಂದ ನಿರ್ಧರಿಸಿದ್ದೆವು. ನಾವು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದೇವೆ ಎಂದರು.

ಐದು ರಾಜ್ಯಗಳ ಸೋಲಿನ ಕಾರಣಗಳ ಕುರಿತು ಕಾರ್ಯಕಾರಿ ಸಮಿತಿಗೆ ಸಲಹೆಗಳನ್ನು ಕೇಳಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲು ಚರ್ಚೆ ನಡೆಸಲಾಗಿದೆ ಎಂದು ಭರವಸೆ ನೀಡಿದರು.

ಜಿ-23 ನಾಯಕರಾಗಿರುವ ಅವರು ಸೋನಿಯಾ ಗಾಂಧಿಗೆ ಯಾವ ಬದಲಾವಣೆಗಳನ್ನು ಸೂಚಿಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಒಂದು ಪಕ್ಷ. ಇದರಲ್ಲಿ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾರೆ. ಉಳಿದವರು ನಾಯಕರು. ಆಂತರಿಕವಾಗಿ ಮಾಡಿದ ಶಿಫಾರಸುಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲಾಗುವುದಿಲ್ಲ ಎಂದು ಮಾಹಿತಿ ನೀಡಿದರು.

ಮುಂಬರುವ ವಿಧಾನಸಭಾ ಚುನಾವಣೆಯ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿ, ಪಕ್ಷವು ತನ್ನ ಎದುರಾಳಿಗಳನ್ನು ಹೇಗೆ ಸೋಲಿಸಬಹುದು ಎಂಬುದರ ಕುರಿತು ಇಬ್ಬರೂ ಚರ್ಚಿಸಿದರು. ಇದನ್ನೂ ಓದಿ:  ಗೋವಾದಲ್ಲಿ ಬಿಜೆಪಿ ಸರ್ಕಾರ ರಚಿಸದಂತೆ ಎಲ್ಲಾ ಪ್ರಯತ್ನಕ್ಕೂ ಸಿದ್ಧ: ಕಾಂಗ್ರೆಸ್

ಆಜಾದ್ ಮತ್ತು ಇತರ ಭಿನ್ನಮತೀಯರು ಬುಧವಾರದಿಂದ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಭಾನುವಾರದ ಸಭೆಯಲ್ಲಿ ಗಾಂಧಿ-ಕುಟುಂಬದ ನಿಷ್ಠಾವಂತರ ನಿಲುವಿನಿಂದ ಅಸಮಾಧಾನಗೊಂಡಿದ್ದರು. ಆದರೆ ಕಳೆದ ಸಿಡಬ್ಲ್ಯೂಸಿ ಸಭೆಯಲ್ಲಿ, ಪಕ್ಷದ ಮುಖಂಡರು ಗಾಂಧಿ ಕುಟುಂಬವು ಎಲ್ಲಾ ಹುದ್ದೆಗಳಿಂದ ಕೆಳಗಿಳಿಯುವ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಇದನ್ನೂ ಓದಿ: ಡಿಕೆಶಿ-ರೇಣುಕಾಚಾರ್ಯ ಪಿಸುಮಾತು – ವಿಧಾನಸೌಧದಲ್ಲಿ ಕುಚುಕು ಕುಚುಕು..!

Leave a Reply

Your email address will not be published.

Back to top button