ಹುಬ್ಬಳ್ಳಿ: ಕಾಂಗ್ರೆಸ್ (Congress) ಭಯೋತ್ಪಾದಕರನ್ನು ಉತ್ಪಾದನೆ ಮಾಡಿ ಬೆಳೆಸಿದೆ. ನರೇಂದ್ರ ಮೋದಿಯವರು (Narendra Modi) ಭಯೋತ್ಪಾದಕರನ್ನು ಹತ್ತಿಕ್ಕಿದ್ದಾರೆ ಎಂದು ಬಿಜೆಪಿಯವರೇ ಭಯೋತ್ಪಾದಕರು ಎಂದ ಕಾಂಗ್ರೆಸ್ ಶಾಸಕ ಅಬ್ಬಯ್ಯಗೆ ಸಂಸದ ಜಗದೀಶ್ ಶೆಟ್ಟರ್ (Jagadish Shettar) ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಭಯೋತ್ಪಾದಕರನ್ನು ಉತ್ಪಾದನೆ ಮಾಡಿ ಅವರನ್ನು ಬೆಳೆಸಿದೆ. ಮೋದಿಯವರು ಭಯೋತ್ಪಾದಕರನ್ನು ಹತ್ತಿಕ್ಕಿದ್ದಾರೆ. ಆದರೆ ನಿಜವಾದ ಭಯೋತ್ಪಾದಕರು ಬೇರೆ ಕಡೆ ಇದ್ದಾರೆ. ಯಾಕೆ ಇಷ್ಟು ಕೆಳಮಟ್ಟಕ್ಕೆ ಸಿದ್ದರಾಮಯ್ಯ ಅವರು ಹೋದರು ಎಂದು ಅರ್ಥ ಆಗುತ್ತಿಲ್ಲ. ಅವರು ಬಳಸುವ ಭಾಷೆ ಬಹಳ ಕೆಳಮಟ್ಟಕ್ಕೆ ಹೋಗಿದೆ. ಮೋದಿ ಅಧಿಕಾರಕ್ಕೆ ಬಂದು ಎಲ್ಲವನ್ನೂ ಹಿಡಿತಕ್ಕೆ ತಂದಿದ್ದಾರೆ. ರಾಜಕೀಯ ನಾಯಕರ ನಡುವೆ ಭಯೋತ್ಪಾದಕ ಜಗಳ ಸರಿ ಅಲ್ಲ ಎಂದರು. ಇದನ್ನೂ ಓದಿ: ಮುಸ್ಲಿಮರ ಋಣ ತೀರಿಸಲು ಕಾಂಗ್ರೆಸ್ ಮುಂದಾಗಿದೆ: ಹುಬ್ಬಳ್ಳಿ ಕೇಸ್ ವಾಪಸ್‌ಗೆ ಅಶೋಕ್ ಕಿಡಿ
Advertisement
ಹಳೇಹುಬ್ಬಳ್ಳಿ ಗಲಭೆ ಕೇಸ್ ಸಂಘಟಿತವಾಗಿತ್ತು. ಲಾಭೂರಾಮ್ ಸುಪ್ರೀಂ ಕೋರ್ಟ್ ತನಕ ಹೋಗಿದ್ದರು. ಆ ಕೇಸ್ ವಾಪಸ್ ಪಡೆದಿರೋದು ಸಂವಿಧಾನಕ್ಕೆ ಅಗೌರವ ಕೊಡೋ ಕೆಲಸವಾಗಿದೆ. ಸಮಾಜದಲ್ಲಿ ಸಂಘರ್ಷಕ್ಕೆ ಇದು ಕಾರಣವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: 2 ವರ್ಷಗಳ ಹಿಂದೆ ಘೋಷಿಸಿದ್ದ ಎಥೆನಾಲ್ ಘಟಕ ಇನ್ನೂ ಆರಂಭವಾಗಿಲ್ಲ: ಸುಮಲತಾ ಆಪ್ತ ಬೇಸರ
Advertisement
Advertisement
ಸಿದ್ದರಾಮಯ್ಯ ( CM Siddaramaiah) ಮೊದಲ ಅವಧಿಯಲ್ಲಿ ಪಿಎಫ್‌ಐ, ಎಸ್‌ಡಿಪಿಐ ಕೇಸ್ ವಾಪಸ್ ಪಡೆದಿದ್ದರು. ಅದರಿಂದ ರಾಜ್ಯದಲ್ಲಿ ಏನಾಯ್ತು ಅನ್ನೋದು ಎಲ್ಲರಿಗೂ ಅರಿವಾಗಿದೆ. ಗೃಹ ಇಲಾಖೆ, ಕಾನೂನು ಇಲಾಖೆಯ ಒಪ್ಪಿಗೆ ಬೇಕು. ಇದನ್ನು ಸಾರ್ವಜನಿಕವಾಗಿ ಸಿಎಂ ಮಂಡನೆ ಮಾಡಲಿ. ಈ ಕೇಸ್ ವಾಪಸ್ ತೆಗೆದುಕೊಳ್ಳಲು ಬರುವುದಿಲ್ಲ. ಈ ಕೇಸ್ ಕೋರ್ಟ್ನಲ್ಲಿ ಸ್ಟ್ಯಾಂಡ್ ಆಗುವುದಿಲ್ಲ. ಬಹುತೇಕ ಕಾಂಗ್ರೆಸ್ ನಾಯಕರು ಕೋರ್ಟ್ ಒಪ್ಪಿಗೆ ಕೊಡಬೇಕು ಎನ್ನುತ್ತಾರೆ. ಅಲ್ಪ ಸಂಖ್ಯಾತರ ಓಲೈಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಸಿಎಂ ಕೂಡಾ ವಕೀಲರಾಗಿದ್ದು ಈ ತರಹ ಕಾನೂನುಬಾಹಿರ ಕೆಲಸ ಯಾಕೆ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: Mumbai | ಲಘು ಮೋಟರ್ ವಾಹನಗಳಿಗೆ ಟೋಲ್ ಫ್ರೀ ಪ್ರವೇಶ: ಸಿಎಂ ಶಿಂಧೆ
Advertisement
ಸಚಿವ ಸಂಪುಟದ ಒಪ್ಪಿಗೆ ಕೂಡಾ ಕಾನೂನುಬಾಹಿರವಾಗಿದೆ. ಬಹುತೇಕ ಕೇಸ್‌ಗಳಲ್ಲಿ ಭಾಗಿಯಾದವರು ಅಮಾಯಕರೇ ಎನ್ನುತ್ತಾರೆ. ಬಲಿಪಶು ಮಾಡಿದ್ದಾರೆ ಅನ್ನೋದು ಸಾಮಾನ್ಯವಾಗಿದೆ. ಲಾಭೂರಾಮ್ ಒಳ್ಳೆ ಆಫೀಸರ್ ಆಗಿದ್ದರು. ಲಾಭೂರಾಮ್ ರಾಜಕೀಯ ಒತ್ತಡಕ್ಕೆ ಮಣಿಯುವವರಲ್ಲ. ಅವರಲ್ಲಿರೋ ವೀಡಿಯೋ ಸಿಎಂ ಮತ್ತು ಡಿಸಿಎಂ ಬಿಡುಗಡೆ ಮಾಡಲಿ ಎಂದರು. ಅಮಾಯಕರೆಂದರೆ ಆ ವೀಡಿಯೋ ಸಿಎಂ ಬಿಡುಗಡೆ ಮಾಡಬೇಕು. ನಿರಪರಾಧಿ ಎಂದು ಯಾಕೆ ಸರ್ಟಿಫಿಕೇಟ್ ಕೊಡುತ್ತೀರಿ? ಡಿಕೆಶಿ ಸಾಬೀತು ಮಾಡೋದು ಅಲ್ಲ, ಡಿಕೆಶಿ ನ್ಯಾಯಾಧೀಶರು ಅಲ್ಲ. ಕಾಂಗ್ರೆಸ್ ಅಧೋಗತಿಗೆ ಹೋಗೋಕೆ ಇದೆಲ್ಲಾ ಕಾರಣವಾಗಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಹಕ್ಕಿಯಂತೆ ಹಾರಬಹುದು, ಆಕಾಶದಿಂದ ನಂದಿಬೆಟ್ಟ ನೋಡಬಹುದು – ನಂದಿಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್ ಆಕರ್ಷಣೆ
ಮಲ್ಲಿಕಾರ್ಜುನ ಖರ್ಗೆ ಬಹಳ ಹಿರಿಯರು. ಅವರಿಗೆ ಯಾಕೆ ಸರ್ಕಾರಿ ಜಮೀನು ಬೇಕು? ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆದ ಬಳಿಕ ಖರ್ಗೆ ಅವರು ಸೈಟ್ ವಾಪಸ್ ಕೊಟ್ಟಿದ್ದಾರೆ. ನೀವು ಸೈಟ್‌ಗೆ ಅರ್ಜಿ ಹಾಕಬಾರದಿತ್ತು. ಮೊದಲೇ ಸೈಟ್ ತಿರಸ್ಕಾರ ಮಾಡಬೇಕಿತ್ತು. ಅವರ ಮೇಲೆ ಆಪಾದನೆ ಮುಂದುವರೆದರೆ ಖರ್ಗೆ ಅವರ ಮೇಲೆ ಪರಿಣಾಮ ಬೀರುತ್ತೆ ಎಂದರು. ಇದನ್ನೂ ಓದಿ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಹೈಫೈ ಆತಿಥ್ಯ