-ಎರಡು ಪ್ರಶ್ನೆಗೆ ಉತ್ತರ ಬೇಕೆಂದ ಕಾಂಗ್ರೆಸ್
ಬೆಂಗಳೂರು: ಆಪರೇಷನ್ ಕಮಲ ನಡೆಸುತ್ತಿರೋದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಒಪ್ಪಿಕೊಂಡ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಬಿಜೆಪಿ ಮೇಲೆ ಮುಗಿಬಿದ್ದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಯಡಿಯೂರಪ್ಪ ಅವರೇ ನುಡಿದಂತೆ ನಡೆಯಿರಿ, ನಿವೃತ್ತಿ ದಿನಾಂಕ ಘೋಷಿಸಿ ಎಂದು ಆಗ್ರಹಿಸಿದೆ.
ಕಾಂಗ್ರೆಸ್ ಟ್ವೀಟ್: ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ ಆಡಿಯೋದಲ್ಲಿ ಧ್ವನಿ ನನ್ನದೇ ಎಂದು ಬಿಎಸ್ವೈ ಒಪ್ಪಿಕೊಂಡಿದ್ದಾರೆ. ಯಡಿಯೂರಪ್ಪ ಅವರೇ ನುಡಿದಂತೆ ನಡೆಯಿರಿ, ನಿವೃತ್ತಿ ದಿನಾಂಕ ಘೋಷಿಸಿ. ನರೇಂದ್ರ ಮೋದಿ ಅವರೇ ಉತ್ತರಿಸಿ, ನ್ಯಾಯಾಧೀಶರ ಬುಕ್ಕಿಂಗ್ ಕೂಡ ನಿಜವೇನು? ಭ್ರಷ್ಟಾಚಾರದ ಹಣದಿಂದ ಸರ್ಕಾರ ಅಸ್ಥಿರ ಯತ್ನವೂ ನಿಮ್ಮ ಕುತಂತ್ರವೇನು? ಎಂದು ಬರೆದುಕೊಂಡು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಟ್ಯಾಗ್ ಮಾಡಲಾಗಿದೆ.
Advertisement
Advertisement
ಕುತಂತ್ರ ಮಾಡಿ ನನ್ನ ಬಳಿ ಶಾಸಕ ನಾಗನಗೌಡ ಪುತ್ರ ಶರಣಗೌಡರನ್ನು ಕಳಿಸಿಕೊಟ್ಟಿದ್ದರು. ನಾನು ಅವರ ಜೊತೆ ಮಾತನಾಡಿದ್ದು ನಿಜ. ಆದರೆ ಕೆಲ ಸತ್ಯಗಳನ್ನು ಮರೆ ಮಾಚಿದ್ದಾರೆ. ಕುಮಾರಸ್ವಾಮಿ ಥರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡ್ತಿದ್ದಾರೆ ಎಂದು ಹೇಳುವ ಮೂಲಕ ಬಿಎಸ್ ಯಡಿಯೂರಪ್ಪ ಆಪರೇಷನ್ ಕಮಲ ನಡೆಸುತ್ತಿರುವ ಸತ್ಯವನ್ನು ಇಂದು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಶಾಸಕನ ಮಗನನ್ನು ಕಳಿಸಿಕೊಟ್ಟು ಕುತಂತ್ರ- ತಪ್ಪೊಪ್ಪಿಕೊಂಡ್ರು ಬಿಎಸ್‍ವೈ
Advertisement
ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರಾಜಕೀಯ ನಿವೃತ್ತಿಗೆ ಪಡೆದುಕೊಳ್ಳಲಿ ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಆಗ್ರಹಿಸಿದ್ದಾರೆ. ಇತ್ತ ತನ್ನ ತಪ್ಪೊಪ್ಪಿಕೊಂಡ ಬಿಎಸ್‍ವೈ ಅವರನ್ನು ಸಚಿವ ಡಿಕೆ ಶಿವಕುಮಾರ್ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಮಂಜುನಾಥನೇ ತಪ್ಪೊಪ್ಪಿಕೊಳ್ಳಲು ಬುದ್ಧಿಕೊಟ್ಟಿರಬಹುದು- ಎಚ್‍ಡಿಕೆ
Advertisement
' @CMofKarnataka ಬಿಡುಗಡೆ ಮಾಡಿದ ಆಡಿಯೋದಲ್ಲಿ ಧ್ವನಿ ನನ್ನದೇ ಎಂದು ಬಿಎಸ್ವೈ ಒಪ್ಪಿಕೊಂಡಿದ್ದಾರೆ.@BSYBJP ನುಡಿದಂತೆ ನಡೆಯಿರಿ, ನಿವೃತ್ತಿ ದಿನಾಂಕ ಘೋಷಿಸಿ.@narendramodi ಅವರೇ ಉತ್ತರಿಸಿ, ನ್ಯಾಯಾದೀಶರ ಬುಕ್ಕಿಂಗ್ ಕೂಡ ನಿಜವೇನು?
ಭ್ರಷ್ಟಾಚಾರದ ಹಣದಿಂದ ಸರ್ಕಾರ ಅಸ್ಥಿರ ಯತ್ನವು ನಿಮ್ಮ ಕುತಂತ್ರವೇನು?#GoBackModi
— Karnataka Congress (@INCKarnataka) February 10, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv