– ಕೇಂದ್ರದ ವಿರುದ್ಧ 3 ಹಂತದಲ್ಲಿ 45 ದಿನ ಹೋರಾಟ
ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೆ ತಂದಿರುವ ವಿಕ್ಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಕಾಯ್ದೆಯ ವಿರುದ್ಧ ಕಾಂಗ್ರೆಸ್ (Congress) ಮೂರು ಹಂತದ ರಾಷ್ಟ್ರವ್ಯಾಪಿ ಆಂದೋಲನವನ್ನು ಪ್ರಕಟಿಸಿದೆ.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ (KC Venugopal), ದೇಶಾದ್ಯಂತ ಕಾಂಗ್ರೆಸ್ ನಡೆಸಲಿರುವ ಹೋರಾಟದ ಬಗ್ಗೆ ಮಾಹಿತಿ ನೀಡಿದರು. ಮನರೇಗಾ (MNREGA) ಬಚಾವೋ ಸಂಗ್ರಾಮ ಹೆಸರಿನ ಈ ಆಂದೋಲನವು ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದುಹಾಕಿ, ಯೋಜನೆಯನ್ನು ಕೇಂದ್ರೀಕೃತಗೊಳಿಸುವ ಸರ್ಕಾರದ ನಡೆಯನ್ನು ವಿರೋಧಿಸುವುದು ಗುರಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕೈಯಲ್ಲಿ ಡಿಗ್ರಿ, ಜೇಬಿನಲ್ಲಿ ಆರ್‌ಡಿಎಕ್ಸ್: ವೈಟ್-ಕಾಲರ್ ಉಗ್ರವಾದ ಬಗ್ಗೆ ರಾಜನಾಥ್ ಸಿಂಗ್ ಕಳವಳ
ಮೋದಿ ಸರ್ಕಾರವು ಮನರೇಗಾ ಯೋಜನೆಯನ್ನು ಕೇಂದ್ರೀಕೃತಗೊಳಿಸಿ, ಗಾಂಧೀಜಿ ಅವರು ಕಾರ್ಮಿಕರ ಘನತೆ, ಗ್ರಾಮ ಸ್ವರಾಜ್ಯ ಮತ್ತು ರಾಷ್ಟ್ರದ ನೈತಿಕ ಜವಾಬ್ದಾರಿಯನ್ನು ನಾಶಪಡಿಸಿದೆ. ಈ ಕಾಯ್ದೆಯನ್ನು ಹಿಂಪಡೆಯಬೇಕು ಮತ್ತು ಮೂಲ ಮನರೇಗಾ ಕಾಯ್ದೆಯನ್ನು ಮರಳಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: IND vs NZ | ಕಿವೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ – ಪಾಂಡ್ಯ, ಶಮಿಗೆ ಕೂಡಿಬಾರದ ಮುಹೂರ್ತ!
ಈ ಆಂದೋಲನದ ಮೂಲಕ ಕಾಂಗ್ರೆಸ್ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕಾಪಾಡುವುದು, ಮಹಿಳಾ ಕಾರ್ಮಿಕರು, ದಲಿತರು, ಆದಿವಾಸಿಗಳು ಮತ್ತು ಗ್ರಾಮೀಣ ಬಡವರ ಪರವಾಗಿ ನಿಲ್ಲುವುದು ಉದ್ದೇಶವಾಗಿದೆ. ಪಕ್ಷವು ಈ ಹೊಸ ಕಾಯ್ದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ ಎಂದು ಜೈರಾಂ ರಮೇಶ್ ತಿಳಿಸಿದರು. ಇದು ಕಾಂಗ್ರೆಸ್‌ನ ಮುಖ್ಯ ಕಾರ್ಯಕ್ರಮವಾದರೂ, ವಿರೋಧ ಪಕ್ಷಗಳೊಂದಿಗೆ ಸಂಪರ್ಕಿಸಿ ಅವರನ್ನು ಸೇರ್ಪಡಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದರು. ಇದನ್ನೂ ಓದಿ: ಸಂಪುಟ ಪುನರ್‌ರಚನೆಯಾದಾಗ ಮಂತ್ರಿ ಸ್ಥಾನ ಸಿಗುತ್ತೆ: ಶಿವಲಿಂಗೇಗೌಡ ವಿಶ್ವಾಸ
ಮೂರು ಹಂತಗಳಲ್ಲಿ ಹೋರಾಟ ನಡೆಯಲಿದೆ. ಮೊದಲ ಹಂತದಲ್ಲಿ ಹೋರಾಟದ ತಯಾರಿ ಸಭೆಗಳು ಮತ್ತು ಉಪವಾಸ ಸತ್ಯಾಗ್ರಹ ನಡೆಯಲಿದೆ. ಜನವರಿ 8ರಿಂದ ಆರಂಭವಾಗಲಿರುವ ಪ್ರತಿಭಟನೆ ಮೊದಲು ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಗಳಲ್ಲಿ ಪೂರ್ಣ ದಿನದ ತಯಾರಿ ಸಭೆಗಳು ನಡೆಯಲಿದೆ. ಜನವರಿ 10ಕ್ಕೆ ಜಿಲ್ಲಾ ಮಟ್ಟದ ಸುದ್ದಿಗೋಷ್ಠಿಗಳು ಮತ್ತು ಜನವರಿ 11ರಂದು ಜಿಲ್ಲಾ ಕೇಂದ್ರಗಳಲ್ಲಿ ಮಹಾತ್ಮ ಗಾಂಧೀಜಿ ಮತ್ತು ಬಿ.ಆರ್.ಅಂಬೇಡ್ಕರ್ ಪ್ರತಿಮೆಗಳ ಬಳಿ ಒಂದು ಉಪವಾಸ ಸತ್ಯಾಗ್ರಹ ನಡೆಯಲಿದೆ. ಇದನ್ನೂ ಓದಿ: ಸುಂಟರಗಾಳಿಗೆ ಕುಸಿದ ಪೆಂಡಾಲ್ – ಸತೀಶ್ ಜಾರಕಿಹೊಳಿ ಅಪಾಯದಿಂದ ಪಾರು
ಎರಡನೇ ಹಂತದಲ್ಲಿ ಕ್ಷೇತ್ರ ಮಟ್ಟದ ಜಾಗೃತಿ ನಡೆಯಲಿದೆ. ಜನವರಿ 12ರಿಂದ 30ರವರೆಗೆ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರ ಪತ್ರ ವಿತರಣೆ, ವಿಧಾನಸಭಾ ಮಟ್ಟದ ಸಭೆಗಳು, ಪತ್ರಿಕೆ ವಿತರಣೆ ಮತ್ತು ಜನವರಿ 30ರ ಶಹೀದ್ ದಿನದಂದು ಮನರೇಗಾ ಕಾರ್ಮಿಕರೊಂದಿಗೆ ಶಾಂತಿಯುತ ಧರಣಿ ನಡೆಯಲಿದೆ. ಇದನ್ನೂ ಓದಿ: 6 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ – ಹತ್ಯೆ ಬಳಿಕ 3 ಅಂತಸ್ತಿನ ಛಾವಣಿಯಿಂದ ಮೃತದೇಹ ಎಸೆದ ಕಿರಾತಕರು
ಮೂರನೇ ಹಂತದಲ್ಲಿ ಧರಣಿ ಮತ್ತು ರ‍್ಯಾಲಿಗಳು ನಡೆಯಲಿವೆ. ಜನವರಿ 31ರಿಂದ ಫೆಬ್ರವರಿ 6ರವರೆಗೆ ಜಿಲ್ಲಾ ಮಟ್ಟದ ಧರಣಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಯಲಿದೆ. ಫೆಬ್ರವರಿ 7ರಿಂದ 15ರವರೆಗೆ ರಾಜ್ಯ ಮಟ್ಟದ ವಿಧಾನಸಭಾ ಘೇರಾವ್ ನಡೆಯಲಿದೆ. ಫೆಬ್ರವರಿ 16ರಿಂದ 25ರವರೆಗೆ ನಾಲ್ಕು ರಾಷ್ಟ್ರ ಮಟ್ಟದ ರ‍್ಯಾಲಿಗಳು ನಡೆಯಲಿವೆ. ಇವುಗಳ ದಿನಾಂಕ ನಂತರ ಪ್ರಕಟಿಸಲಾಗುವುದು ಎಂದು ವೇಣುಗೋಪಾಲ್ ಹೇಳಿದರು. ಇದನ್ನೂ ಓದಿ: ಕಾರವಾರ: ಹೆದ್ದಾರಿಯಲ್ಲಿ ಸ್ಫೋಟಗೊಂಡ ಸಿಲಿಂಡರ್ – ಲಾರಿ ಬೆಂಕಿಗಾಹುತಿ


