ಬೆಂಗಳೂರು: ಇಂದು ಮಧ್ಯಾಹ್ನ 3.30ಕ್ಕೆ ಕಾಂಗ್ರೆಸ್‍ನಿಂದ ಪ್ರತಿಭಟನೆ (Congress Protest) ನಡೆಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ಪ್ರಜಾಪ್ರಭುತ್ವಕ್ಕೆ ಕಪ್ಪು ದಿನ ನಮ್ಮ ನಾಯಕ ರಾಹುಲ್ ಗಾಂಧಿ (Rahul Gandhi) ಮೇಲೆ ಕೋಲಾರದಲ್ಲಿ ಕೇಸು ಹಾಕಿ ಅವರ ಸಂಸದ ಸ್ಥಾನ ವಜಾ ಆಗಿತ್ತು. ಅದನ್ನ ಪ್ರಶ್ನಿಸಿ ಮೇಲ್ಮನವಿ ಹೋಗಿದ್ದು, ಇಂದು ಡಿಸ್‍ಮಿಸ್ ಮಾಡಲಾಗಿದೆ ಎಂದು ಹೇಳಿದರು.
Advertisement
Advertisement
ಬಿಜೆಪಿಯ (BJP) ಕುತಂತ್ರವನ್ನು ನಾವು ತೀವ್ರವಾಗಿ ಕಂಡಿಸುತ್ತಿದ್ದೇವೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವುದನ್ನ ಕಾರ್ಯಕರ್ತರ ಮೂಲಕ ಮೊಟಕುಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಈ ದೇಶದ ಐಕ್ಯತೆಗೆ, ಈ ದೇಶದ ಸಮಗ್ರತೆಗೆ ಭಾರತ್ ಜೋಡೋ ಯಾತ್ರೆ ಮಾಡಿದರು. ಇಂದು ಮಧ್ಯಾಹ್ನ 3.30ಕ್ಕೆ ಎಲ್ಲಾ ಕಾಂಗ್ರೆಸ್ ಶಾಸಕರು ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು. ಇದನ್ನೂ ಓದಿ: 8 ತಿಂಗಳು ಎಲ್ಲಾ ಶಾಸಕರು ಸಹಕರಿಸಿ- ಸಿದ್ದರಾಮಯ್ಯ ಮನವಿ
Advertisement
Advertisement
ಮಧ್ಯಾಹ್ನ 3.30ಕ್ಕೆ ಎಲ್ಲಾ ಜಿಲ್ಲಾ ಹೆಡ್ ಕ್ವಾರ್ಟಸ್ ಗಳಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಬೇಕು. ಸಿಎಲ್‍ಪಿ ಸಭೆಯಲ್ಲಿ ನುಡಿದಂತೆ ನಡೆದಿದ್ದೇವೆ 5 ಗ್ಯಾರಂಟಿಗಳು ಜಾರಿ ಬಗ್ಗೆ ಮಾತನಾಡಿದ್ದೇವೆ ಎಲ್ಲಾ ವಿಚಾರ ಚರ್ಚೆ ಮಾಡಿದ್ದೇವೆ. ಈ ವರ್ಷದೊಳಗೆ ಎಲ್ಲಾ 5 ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದರು.
Web Stories