ಮುಂಬೈ: ಕಾಂಗ್ರೆಸ್‍ನ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಶಶಿ ತರೂರ್ ಅವರು ಮತ್ತೆ ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟ್ ಬೀಸಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಅಖಿಲ ಭಾರತ ಕಾರ್ಯನಿರತ ಕಾಂಗ್ರೆಸ್‍ನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ತರೂರ್, ಪ್ರಧಾನಿ ಮೋದಿ ರಾಷ್ಟ್ರದ ಪ್ರತಿನಿಧಿಯಾಗಿದ್ದು, ವಿದೇಶದಲ್ಲಿ ಅವರು ವಿದೇಶದಲ್ಲಿದ್ದಾಗ ಗೌರವಕ್ಕೆ ಅರ್ಹರು. ಹೀಗಾಗಿ ನಾವು ಕೂಡ ಅವರಿಗೆ ಗೌರವ ಕೊಡಬೇಕು. ಆದರೆ ಸ್ವದೇಶದಲ್ಲಿ ಇದ್ದಾಗ ಅವರನ್ನು ಪ್ರಶ್ನಿಸುವ ಹಕ್ಕು ನಮಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಶಿ ತರೂರ್ ಅಪ್ರಬುದ್ಧ ರಾಜಕಾರಣಿ, ಯುಪಿಎ-2 ಅವಧಿಯ ಎಡವಟ್ಟುಗಳಿಗೆ ರಮೇಶ್ ಕಾರಣ: ಮೊಯ್ಲಿ
Advertisement
Delighted to spend Sunday morning at historic CongressBhavan in Pune addressing @incIndia & @ProfCong members on InclusiveIndia &need to support us in the coming state elections. Wonderful audience& terrific enthusiasm, passion & commitment on display: don’t write us off2quickly! pic.twitter.com/B5qiwBjLti
— Shashi Tharoor (@ShashiTharoor) September 22, 2019
Advertisement
ಬಹು ನಿರೀಕ್ಷಿತ ‘ಹೌಡಿ ಮೋದಿ’ ಕಾರ್ಯಕ್ರಮ ಅಮೆರಿಕಾದ ಹ್ಯೂಸ್ಟನ್‍ನಲ್ಲಿ ಭಾನುವಾರ ಸಂಜೆ ನಡೆಯಲಿದೆ. ಎನ್‍ಆರ್‍ಜಿ ಫುಟ್ಬಾಲ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸುಮಾರು 50,000 ಅಮೆರಿಕದ ಭಾರತೀಯ ನಿವಾಸಿಗಳು ಭಾಗಿಯಾಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮಕ್ಕೂ ಮುನ್ನವೇ ಶಶಿ ತರೂರ್ ಅವರು ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
Advertisement
ಕೆಲವು ವಿಚಾರಗಳಿಂದ ನಾನು ಹೊರಗೆ ಒಂದು ಸಂದೇಶವನ್ನು ನೀಡಲು ಬಯಸುತ್ತೇನೆ. ನಮ್ಮ ದೇಶದೊಳಗೆ ನಮಗೆ ವ್ಯತ್ಯಾಸಗಳಿವೆ. ಆದರೆ ಭಾರತದ ಹಿತಾಸಕ್ತಿ ವಿಚಾರ ಬಂದಾಗ ಅದು ಬಿಜೆಪಿಯ ವಿದೇಶಾಂಗ ನೀತಿಯಲ್ಲ ಅಥವಾ ಕಾಂಗ್ರೆಸ್ಸಿನ ವಿದೇಶಾಂಗ ನೀತಿಯೂ ಅಲ್ಲ. ಅದು ಭಾರತೀಯ ವಿದೇಶಾಂಗ ನೀತಿಯಾಗಿರುತ್ತದೆ ಎಂದು ತಿಳಿಸಿದ್ದಾರೆ ಅಂತ ವರದಿಯಾಗಿದೆ.
Advertisement
At the end of my interactive session, joined members of @aipcmaha & @aipcPuneNorth with @JhaSanjay in this celebratory pic! pic.twitter.com/lU7KivqX1O
— Shashi Tharoor (@ShashiTharoor) September 22, 2019
ಇದೇ ವೇಳೆ ದೇಶಾದ್ಯಂತ ಏಕಭಾಷಾ ಸೂತ್ರದ ವಿಚಾರವಾಗಿ ಮಾತನಾಡಿದ ಅವರು, ದೇಶದಲ್ಲಿ ಹಿಂದಿ, ಹಿಂದುತ್ವ ಹೇರಿಕೆ ಹಾಗೂ ಹಿಂದೂಸ್ತಾನ ಪದ ಬಳಕೆ ಅಪಾಯಕಾರಿ. ದೇಶದ ಹಲವೆಡೆ ವರದಿಯಾಗಿರುವ ಗುಂಪು ಹಲ್ಲೆ ಪ್ರಕರಣಗಳು ಹಿಂದುತ್ವ ಹಾಗೂ ಶ್ರೀರಾಮರಿಗೆ ಮಾಡುವ ಅಪಮಾನ.
ದೇಶದ ಶಿಕ್ಷಣವು ತ್ರಿಭಾಷಾ ಸೂತ್ರದಲ್ಲಿ ಇರಬೇಕು ಎನ್ನುವ ವಿಚಾರಕ್ಕೆ ಬದ್ಧನಾಗಿರುವೆ. ಭಾರತೀಯರಲ್ಲಿ ಬಹುಭಾಷಾ ಸಂವಹನ ಸಾಮಥ್ರ್ಯ ಬೆಳೆಯಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.