ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯ ಭದ್ರತೆಗೆ ನಿಯೋಜನೆಗೊಂಡಿದ್ದ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್(ಎಸ್‍ಪಿಜಿ) ಕಮಾಂಡೋ ಸೆಪ್ಟೆಂಬರ್ 3ರಿಂದ ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದಾರೆ.
ಸೆಪ್ಟೆಂಬರ್ 1ರಂದು ಜನ್‍ಪತ್‍ನ ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸದಲ್ಲಿ ಕಮಾಂಡೋ ರಾಕೇಶ್ ಕುಮಾರ್ ಕರ್ತವ್ಯಕ್ಕೆ ಹಾಜರಾಗಿದ್ದರು. ಆದ್ರೆ ಅಂದು ಅವರಿಗೆ ರಜೆ ನೀಡಲಾಗಿತ್ತು. ಹೀಗಿದ್ದರೂ ಅವರು ಯಾಕೆ ಸಮವಸ್ತ್ರ ಧರಿಸಿ ಕೆಲಸಕ್ಕೆ ಬಂದಿದ್ದರು ಎಂಬುದು ಇದೀಗ ಪೊಲೀಸ್ ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ.
Advertisement
ಸೆಪ್ಟೆಂಬರ್ 1ರಂದು 31 ವರ್ಷದ ರಾಕೇಶ್ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ತನ್ನ ಸ್ನೇಹಿತರನ್ನು ಭೇಟಿಯಾಗಿ ಬೆಳಿಗ್ಗೆ ಸುಮಾರು 11 ಗಂಟೆ ವೇಳೆಗೆ ಹೊರಟರು ಎಂದು ಪೊಲೀಸರು ಹೇಳಿದ್ದಾರೆ. ಆದ್ರೆ ರಾಕೇಶ್ ತಮ್ಮ ಸರ್ವೀಸ್ ರಿವಾಲ್ವರ್ ಹಾಗೂ ಮೊಬೈಲ್ ಫೋನ್ ಬಿಟ್ಟುಹೋಗಿದ್ದಾರೆ. ಹೀಗಾಗಿ ಪೊಲೀಸರು ಹಾಗೂ ಕುಟುಂಬದವರ ಸಂಪರ್ಕಕ್ಕೆ ಸಿಕ್ಕಿಲ್ಲ. ರಾಕೇಶ್ ಅವರು ದ್ವಾರಕಾದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು.
Advertisement
ಸೆಪ್ಟೆಂಬರ್ 2ರಂದು ರಾಕೇಶ್ ಸಂಪರ್ಕಕ್ಕೆ ಸಿಗದಿದ್ದಾಗ ಬಹುಶಃ ಕೆಲಸದ ಸಮಯವನ್ನ ಒಂದು ದಿನದ ಮಟ್ಟಿಗೆ ವಿಸ್ತರಿಸಿರಬಹುದು ಎಂದು ಕುಟುಂಬಸ್ಥರು ಅಂದುಕೊಂಡಿದ್ದರು. ಆದ್ರೆ ಸೆಪ್ಟೆಂಬರ್ 3ರಂದು ಕೂಡ ಸಂಪರ್ಕಕ್ಕೆ ಸಿಗದಿದ್ದಾಗ ಯಾವುದೋ ದೂರದ ಪ್ರದೇಶಕ್ಕೆ ಹೋಗಿರಬಹುದು. ಅಲ್ಲಿ ಮೊಬೈಲ್ ಸಂಪರ್ಕ ಸಿಗದ್ದಿರಬಹುದು ಎಂದು ಊಹಿಸಿದ್ದರು. ಯಾವಾಗ 2 ದಿನಗಳಾದ್ರೂ ರಾಕೇಶ್ ಬಗ್ಗೆ ಮಾಹಿತಿ ಸಿಗಲಿಲ್ಲವೋ ಕುಟುಂಬಸ್ಥರು ಗಾಬರಿಯಾಗಿದ್ದು, ಅವರು ಎಲ್ಲಿದ್ದಾರೆಂದು ತಿಳಿಯಲು ಜನ್‍ಪತ್‍ನ ಸೋನಿಯಾ ಗಾಂಧಿ ನಿವಾಸಕ್ಕೆ ಬಂದಿದ್ದಾರೆ.
Advertisement
ರಾಕೇಶ್ ಕಾಣೆಯಾಗಿರುವ ಬಗ್ಗೆ ಈಗಾಗಲೇ ಅವರ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.