ಬೆಂಗಳೂರು: ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ (Priyanka Gandhi) ನಾಮಪತ್ರ ಸಲ್ಲಿಸುವ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು (Mallikarjun Kharg) ಅಪಮಾನಿಸಲಾಗಿದೆ ಎಂದು ಬಿಜೆಪಿ (BJP) ಆರೋಪಿಸಿದೆ.
ಖರ್ಗೆಯವರು ಕೊಠಡಿಯ ಬಾಗಿಲು ಹಿಂದೆ ನಿಂತಿರುವ ವಿಡಿಯೋ ಹಂಚಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ. ದಲಿತ ನಾಯಕ ಖರ್ಗೆಗೆ ಅವಮಾನ ಮಾಡಿದ್ದಾರೆ. ಕುಟುಂಬದವರಲ್ಲದ ಕಾರಣ ಅವರನ್ನು ಹೊರಗಿಡಲಾಗಿತ್ತು. ಸೋನಿಯಾ ಕುಟುಂಬದ ಅಹಂಕಾರದ ಎದುರು ಖರ್ಗೆ ಸ್ವಾಭಿಮಾನ, ಘನತೆ ಬಲಿಯಾಗಿದೆ ಎಂದು ವಾಗ್ದಾಳಿ ನಡೆಸಿದೆ.
ಪ್ರಿಯಾಂಕಾ ನಾಮಪತ್ರ ಸಲ್ಲಿಸುವಾಗ ಎಲ್ಲಿದ್ರಿ ಖರ್ಗೆ ಸಾಹೇಬರೇ ಎಂದು ಪ್ರಶ್ನೆ ಕೇಳಿದೆ. ಪ್ರಿಯಾಂಕಾ ವಾದ್ರಾ ನಾಮಪತ್ರ ಸಲ್ಲಿಕೆ ವೇಳೆ ಅಲ್ಲಿಯೇ ಖರ್ಗೆ ಇರೋದು ಹಲವು ಚಿತ್ರಗಳಲ್ಲಿ ಕಂಡುಬಂದಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಇನ್ನೂ ಪ್ರವಾಸಕ್ಕೆ ಕರೆದೊಯ್ಯೋದಾಗಿ ತಿಳಿಸಿ ಬೇರೆ ಬೇರೆ ಜಿಲ್ಲೆಯ ಜನರನ್ನು ರ್ಯಾಲಿಗೆ ಕಾಂಗ್ರೆಸ್ ಕರೆತಂದಿತ್ತು ಎಂದು ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ ಆರೋಪಿಸಿದ್ದಾರೆ.
ವಯನಾಡು ಲೋಕಸಭಾ ಉಪಚುನಾವಣಾ ಕಣದಲ್ಲಿರುವ ಪ್ರಿಯಾಂಕಾ ಗಾಂಧಿ ಬುಧವಾರ ನಾಮಪತ್ರ ಸಲ್ಲಿಕೆ ಮಾಡಿದ್ದರು.