ನವದೆಹಲಿ: ಎಐಸಿಸಿ (AICC) ಅಧ್ಯಕ್ಷ ಸ್ಥಾನಕ್ಕೆ ಮತದಾನ (President Election) ನಡೆದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ ಸಂಜೆ ವೇಳೆಗೆ ದೇಶದ ಅತಿ ಹಳೆಯ ಪಕ್ಷಕ್ಕೆ ಹೊಸ ನಾಯಕನ ಘೋಷಣೆಯಾಗಲಿದೆ.
Advertisement
137 ವರ್ಷಗಳಲ್ಲಿ ಕಾಂಗ್ರೆಸ್ (Congress) ಪಕ್ಷದಲ್ಲಿ ಈವರೆಗೂ ಕೇವಲ ಆರು ಬಾರಿ ಚುನಾವಣೆ ನಡೆದಿದ್ದು, ಇದರಲ್ಲಿ ಒಮ್ಮೆ ಮಾತ್ರ ಗಾಂಧಿ ಪರಿವಾರ (Gandhi Family) ಸದಸ್ಯರು ನೇರವಾಗಿ ಚುನಾವಣೆ ಸ್ಪರ್ಧಿಸಿದ್ದಾರೆ. 1939ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೊದಲ ಬಾರಿ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಪಿ ಸೀತರಾಮಯ್ಯ ಮತ್ತು ಸುಭಾಷ್ ಚಂದ್ರ ಬೋಸ್ (Subhas Chandra Bose) ಸ್ಪರ್ಧಿಸಿದ್ದರು. ಸುಭಾಷ್ ಚಂದ್ರ ಬೋಸ್ ಸೋಲು ಕಂಡಿದ್ದರು. ಸ್ವಾತಂತ್ರ್ಯ ಭಾರತದ ಬಳಿಕ ಮೊದಲ ಬಾರಿಗೆ 1950 ರಲ್ಲಿ ಚುನಾವಣೆ ನಡೆದಿತ್ತು, ಪುರುಷೋತ್ತಮ್ ದಾಸ್ ಮತ್ತು ಆಚಾರ್ಯ ಕೃಪಲಾನಿ ನಡುವೆ ನಡೆದ ಹಣಾಹಣಿಯಲ್ಲಿ ಪುರುಷೋತ್ತಮ್ ದಾಸ್ ಜಯಗಳಿಸಿದ್ದರು. ಇದನ್ನೂ ಓದಿ: ಸಿದ್ದು ಸೋಲಿಸಲು BJP ರಣತಂತ್ರ – ವರುಣಾದಲ್ಲಿ ವಿಜಯೇಂದ್ರ ಕಣಕ್ಕಿಳಿಸಲು ಪ್ಲ್ಯಾನ್
Advertisement
Advertisement
1977 ರಲ್ಲಿ ಮೂರನೇ ಬಾರಿಗೆ ನಡೆದ ಚುನಾವಣೆಯಲ್ಲಿ ಕೆ.ಬ್ರಹ್ಮಾನಂದ ರೆಡ್ಡಿ, ಸಿದ್ದಾರ್ಥ ಶಂಕರ್ ರೈ ಮತ್ತು ಕರಣ್ ಸಿಂಗ್ ಸ್ಪರ್ಧಿಸಿದ್ದರು. ಈ ಸ್ಪರ್ಧೆಯಲ್ಲಿ ಕೆ.ಬ್ರಹ್ಮಾನಂದ ರೆಡ್ಡಿ ಗೆಲುವು ಸಾಧಿಸಿದ್ದರು. ಇದಾದ ಬಳಿಕ ಇಪ್ಪತ್ತು ವರ್ಷಗಳ ಕಾಲ ಚುನಾವಣೆ ನಡೆದಿರಲಿಲ್ಲ. 1997 ನಾಲ್ಕನೇ ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ಶರದ್ ಪವಾರ್, ಸೀತರಾಮ್ ಕೇಸರಿ ಮತ್ತು ರಾಜೇಶ್ ಪೈಲಟ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು, ಸೀತರಾಮ್ ಕೇಸರಿ ಈ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದರು. ಇದನ್ನೂ ಓದಿ: ಮಳವಳ್ಳಿ ಬಾಲಕಿ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಿಸಿದ ಜಮೀರ್
Advertisement
ಐದನೇ ಅಧ್ಯಕ್ಷೀಯ ಚುನಾವಣೆ 2000 ರಲ್ಲಿ ನೆಡೆಯಿತು. ಈ ಚುನಾವಣೆಯಲ್ಲಿ ಸೋನಿಯಾ ಗಾಂಧಿ (Sonia Gandhi) ಮತ್ತು ಜಿತೇಂದ್ರ ಪ್ರಸಾದ್ ಸ್ಪರ್ಧೆ ಮಾಡಿದ್ದರು. ಗಾಂಧಿ ಪರಿವಾರದ ಸದಸ್ಯರೊಬ್ಬರು ಮೊದಲ ಬಾರಿಗೆ ಚುನಾವಣೆ ಸ್ಪರ್ಧೆ ಮಾಡಿದ್ದು ಈ ಚುನಾವಣೆಯ ವಿಶೇಷವಾಗಿತ್ತು, ಜಿತೇಂದ್ರ ಪ್ರಸಾದ್ ವಿರುದ್ಧ 7,400 ಮತಗಳು ಪಡೆಯುವ ಮೂಲಕ ಸೋನಿಯಾ ಗಾಂಧಿ ಗೆಲುವು ಸಾಧಿಸಿದ್ದರು.