ಬೆಂಗಳೂರು: ಅಂದು ಭಾಗ್ಯಗಳ ಯೋಜನೆ. ಈಗ ಜ್ಯೋತಿ, ಲಕ್ಷ್ಮಿ ಯೋಜನೆಯಂತಹ ಹೊಸ ಭರವಸೆಗಳಿಂದ ಕರ್ನಾಟಕದ ಕಾಂಗ್ರೆಸ್ (Karnataka Congress) ಅದೃಷ್ಟ ಬದಲಾಗುತ್ತಾ? ಎಂಬ ಪ್ರಶ್ನೆಗಳು ಹರಿದಾಡುತ್ತಿವೆ. ಬಿಜೆಪಿಯ ಉತ್ತರ ಪ್ರದೇಶ (Uttar Pradesh) ಮಾಡೆಲ್‌ಗೆ ಟಕ್ಕರ್ ಕೊಡಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.
ಉತ್ತರ ಪ್ರದೇಶದ ಚುನಾವಣೆಯಲ್ಲಿ ಮಹಿಳಾ ಮತದಾರರೇ (Women Voters) ಬಿಜೆಪಿ ಕೈಹಿಡಿದಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು. ಕೆಲ ಖಾಸಗಿ ಸರ್ವೇಗಳಲ್ಲಿ ಶೇ.54ಕ್ಕೂ ಹೆಚ್ಚು ಮಹಿಳೆಯರು ಬಿಜೆಪಿಗೆ ಮತದಾನ ಮಾಡಿದ್ದಾರೆ ಎಂಬ ವರದಿಗಳಿವೆ. ಮಹಿಳೆಯರಿಗೆ ಸಂಬಂಧಿತ ಹಲವು ಯೋಜನೆ ಜಾರಿಗೆ ತಂದಿದ್ದ ಯೋಗಿ ಆದಿತ್ಯನಾಥ್ ನಡೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಮಹಿಳಾಪರ ಯೋಜನೆಗಳ ಜಾರಿಯಿಂದಾಗಿಯೇ ಬಿಜೆಪಿ ಪರ ಒಲವು ಹೆಚ್ಚಿತ್ತು ಎಂದು ಸಮೀಕ್ಷೆಗಳು ತಿಳಿಸಿದ್ದವು. ಇದನ್ನೂ ಓದಿ: ಕಾಂಗ್ರೆಸ್ ‘ಗೃಹಲಕ್ಷ್ಮಿ’ಗೆ ಬೊಮ್ಮಾಯಿ ಬಜೆಟ್ ಕೌಂಟರ್?
Advertisement
Advertisement
ಈಗ ಕರ್ನಾಟಕದಲ್ಲಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಯೋಜನೆ ಭರವಸೆಗಳ ಸುರಿಮಳೆ ಶುರುವಾಗಿದೆ. ವಾರದೊಳಗೆ ಎರಡು ಪ್ರಮುಖ ಭರವಸೆಗಳನ್ನ ಘೋಷಣೆ ಮಾಡಿದೆ ಕಾಂಗ್ರೆಸ್. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಅನ್ನ ಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ ಹೀಗೆ ಹಲವು ಯೋಜನೆ ಜಾರಿ ಮಾಡಿದ್ದರು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗೃಹಜ್ಯೋತಿ, ಗೃಹಲಕ್ಷ್ಮೀ ಜಾರಿಗೆ ಎಂಬ ಹೊಸ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಇನ್ನಷ್ಟು ಗೃಹ ಸಂಬಂಧಿತ ಯೋಜನೆಗಳ ಜಾರಿ ಮಾಡುವ ಭರವಸೆಗಳನ್ನ ಘೋಷಣೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
Advertisement
ಈ ಭರವಸೆಗಳೇ 2023ರ ಕಾಂಗ್ರೆಸ್ ಅದೃಷ್ಟ ಬದಲಾವಣೆಗೆ ಮುನ್ನುಡಿ ಬರೆಯಲು ಸಾಧ್ಯವೇ ಎಂಬ ಚರ್ಚೆ ನಡೆಯುತ್ತಿದೆ. ಯೋಜನೆಗಳ ಸ್ವರೂಪ, ವ್ಯಾಪ್ತಿಯ ಬಗ್ಗೆ ಸ್ಪಷ್ಟವಾಗಿ ತಿಳಿಸದೇ ಕಾಂಗ್ರೆಸ್ ಯೋಜನೆ ಘೋಷಣೆ ಮಾಡಿ ಜಾಣ ನಡೆ ಪ್ರದರ್ಶನ ಮಾಡಿದೆ ಎಂಬ ಮಾತುಗಳಿವೆ. ಕಾಂಗ್ರೆಸ್ ಭರವಸೆಗಳನ್ನೇ ನಂಬಿ ಮಹಿಳಾ ಮತದಾರರು ಕಾಂಗ್ರೆಸ್‌ನತ್ತ ವಾಲುತ್ತಾರಾ ಎಂಬ ಪ್ರಶ್ನೆಗೆ ಮೇ ತಿಂಗಳಿನಲ್ಲಿ ಪ್ರಕಟವಾಗುವ ಚುನಾವಣಾ ಫಲಿತಾಂಶ ಉತ್ತರ ನೀಡಲಿದೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k