ಕಾಂಗ್ರೆಸ್ 20 ವರ್ಷದಲ್ಲಿ ನಿರ್ನಾಮ ಆಗುತ್ತೆ: ಉಮೇಶ್ ಕತ್ತಿ

Public TV
1 Min Read
UMESH KATTI

ಬೆಳಗಾವಿ: ಕಾಂಗ್ರೆಸ್ 20 ವರ್ಷದಲ್ಲಿ ನಿರ್ನಾಮ ಆಗುತ್ತದೆ, ಈ ಮೂಲಕ ವಾಜಪೇಯಿ ಅವರ ಕನಸು ನನಸಾಗುತ್ತದೆ ಎಂದು ಆಹಾರ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ.

CongressFlags1

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಮೇಶ್ ಕತ್ತಿ, ಕರ್ನಾಟಕದ ಮುಸ್ಲಿಮರು ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕಬೇಕು. ಎಂಐಎಂ ಎಂದರೆ ಅವರು ಪಾಕಿಸ್ತಾನದಿಂದ ಬಂದವರು ಅಲ್ಲ. ಭಾರತದಲ್ಲಿ ಹುಟ್ಟಿರುವ ಮುಸ್ಲಿಮರು, ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ದೂರ ಇಡಲು ಬಿಜೆಪಿ ಪಕ್ಷಕ್ಕೆ ಮತ ಹಾಕಬೇಕು ಎಂದು ಮನವಿಮಾಡಿಕೊಂಡರು. ಇದನ್ನೂ ಓದಿ: ನೀವು ಹೇಳಿದಂತೆಯೇ ಎಲ್ಲವನ್ನೂ ಮಾಡಿದ್ದೀನಿ, ನೀವು ಏನು ಮಾಡಿದ್ರಿ ಹೇಳಿ?: ಸಚಿವ ಗೋಪಾಲಯ್ಯ

UMESH KATTI 1

ಎಂಐಎಂ ಹಾಗೂ ಎಂಇಎಸ್ ಧ್ವಜಗಳು ಚುನಾವಣೆ ಬಂದಾಗ ಮಾತ್ರ ಕಾಣುತ್ತಿವೆ. ಅಭಿವೃದ್ಧಿಗಾಗಿ ನಾವು ನಿರಂತರ ದೇಶ ಆಳುತ್ತಿದ್ದೇವೆ. ಹೀಗಾಗಿ ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಪಕ್ಷಕ್ಕೆ ಅವಕಾಶ ನೀಡಿ. ಎಂಐಎಂ ಬಿಜೆಪಿ ಪಕ್ಷದ ಏಜೆಂಟ್ ಎನ್ನುವ ಆರೋಪ ವಿಚಾರವಾಗಿ ಬಿಜೆಪಿ ಪಕ್ಷ ಜನರ ಹಾಗೂ ಅಭಿವೃದ್ಧಿಯ ಏಜೆಂಟ್. ಬೆಳಗಾವಿ ಪಾಲಿಕೆಯಲ್ಲಿ 35ಕ್ಕೂ ಅಧಿಕ ಸೀಟು ಗೆಲ್ಲುತ್ತೇವೆ. ಎಂಇಎಸ್ ಜೊತೆಗೆ ಯಾವುದೇ ಹೊಂದಾಣಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Modi

ಕಾಂಗ್ರೆಸ್ ಹಾಗೂ ಎಂಇಎಸ್ ಎರಡು ಸೇರಿ ಅಡಳಿತ ಮಾಡುತ್ತಿವೆ. ಜನ ಈ ಎರಡೂ ಪಕ್ಷಗಳಿಗೆ ಬುದ್ಧಿ ಕಲಿಸಬೇಕಿದೆ. ಐದು ವರ್ಷದಲ್ಲಿ ಅಭಿವೃದ್ಧಿ ಮಾಡಲಿಲ್ಲ ಅಂದರೆ ನಮ್ಮನ್ನು ಮನೆಗೆ ಕಳುಹಿಸಿ. ಬೆಳಗಾವಿಗೆ ಕೇಂದ್ರ ಸರ್ಕಾರ ಒಂದು ಸಾವಿರ ಕೋಟಿ ಅನುದಾನ ನೀಡಿದೆ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಪಕ್ಷ ಇನ್ನೂ 20 ವರ್ಷ ಅಧಿಕಾರದಲ್ಲಿರುತ್ತದೆ. ಬೆಳಗಾವಿಯ ಮಹಾನಗರ ಪಾಲಿಕೆಯಲ್ಲೂ 20 ವರ್ಷ ಬಿಜೆಪಿ ಪಕ್ಷ ಅಧಿಕಾರದಲ್ಲಿರಬೇಕು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಮಂಡ್ಯದಲ್ಲಿ ಮನೆ ನಿರ್ಮಾಣಕ್ಕೆ ಸುಮಲತಾ ಗುದ್ದಲಿ ಪೂಜೆ

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಹಾವೀರ ನಿಲಜಗಿ, ಬಿಜೆಪಿ ಮುಖಂಡರಾದ ಪರಗೌಡ ಪಾಟೀಲ್, ಗುರು ಕುಲಕರ್ಣಿ, ರೋಹಿತ ಚೌಗಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *