ಬೆಂಗಳೂರು: ನಿಮ್ಮ ತೆವಲಿಗೆ ಮುಖ್ಯಮಂತ್ರಿ ಹುದ್ದೆಗೆ ಅವಮಾನ ಮಾಡಿದ್ದೀರಿ. ಹೀಗಾಗಿ ಕಾಂಗ್ರೆಸ್ ಪಕ್ಷ ಭೇಷರತ್ ಕ್ಷಮೆ ಕೋರಬೇಕು ಎಂದು ಕುಡುಚಿ ಶಾಸಕ ಪಿ.ರಾಜೀವ್ ಆಗ್ರಹಿಸಿದರು.
ವಿಧಾನಸೌಧದ ಕೆಂಗಲ್ ಗೇಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ತನ್ನದೇ ತತ್ವ, ಮೌಲ್ಯ, ರಾಜಕೀಯ ಬದ್ಧತೆಗೆ ಹೆಸರು ಹೊಂದಿರುವ ರಾಜ್ಯವಾಗಿದೆ. ಕಾಂಗ್ರೆಸ್ ಸಂವಿಧಾನ ಹುದ್ದೆಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ ಎಂದರು. ಇದನ್ನೂ ಓದಿ: ʼPAY CMʼ ಪೋಸ್ಟರ್ ಅಂಟಿಸಿದ ಪ್ರಕರಣ ಸಿಸಿಬಿಗೆ ವರ್ಗಾವಣೆ
Advertisement
Advertisement
ಕಾಂಗ್ರೆಸ್ ಅಧಃಪತನದ ಹಿನ್ನೆಲೆ ಪಲಾಯನ ಮಾಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಶಾಸಕ ರಿಜ್ವಾನ್ ಹರ್ಷದ್ ಅವರೇ ಸ್ವತಃ ಪೇಸಿಎಂ ಅಭಿಯಾನ ಅವರೇ ಮಾಡಿದ್ದು ಎಂದು ಹೇಳಿದರು. ಇದು ಕಾಂಗ್ರೆಸ್‍ನ ನೀಚತನದ ಕಿಮ್ಮಕ್ಕು ಎಂದು ಸಾಬೀತಾಗಿರುವುದಾಗಿ ರಾಜೀವ್ ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್ ಗಂಜಿ ಗಿರಾಕಿಗಳಿಂದ ದೂರವಿರಿ – ಬಿಜೆಪಿಯಿಂದ ರಿಡೂ ಸಿದ್ದರಾಮಯ್ಯ, ಇಡಿ ಡಿಕೆಶಿ ಅಭಿಯಾನ
Advertisement
Advertisement
ಗುತ್ತಿಗೆದಾರರಿಂದ 40 % ಕಮಿಷನ್ ಪಡೆಯುವ ಆರೋಪ ಹೊತ್ತಿರುವ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಭ್ರಷ್ಟಾಚಾರ ಆರೋಪ ಹೊತ್ತಿರುವ ಸರ್ಕಾರ ಅಣಕಿಸುವ ಪೋಸ್ಟರ್ ಅನ್ನು ನಗರದ ಹಲವೆಡೆ ಅಂಟಿಸಲಾಗಿತ್ತು. ಪೇಟಿಎಂ ಮಾದರಿಯಲ್ಲೇ ಪೇ ಸಿಎಂ ಎಂಬ ಪೋಸ್ಟರ್ ವೈರಲ್ ಆಗಿದ್ದು, ಇದಕ್ಕೆ ಬಿಜೆಪಿ ಕೂಡ ತಿರುಗೇಟು ನೀಡಿತ್ತು. ಇದನ್ನೂ ಓದಿ: PayCM ಪೋಸ್ಟರ್‌ಗೆ ಸಿಎಂ ಗರಂ – ಎಫ್‌ಐಆರ್ ದಾಖಲು