ಬಾಗಲಕೋಟೆ: ನಮ್ಮ ಪಕ್ಷದಲ್ಲಿ ಯಾವತ್ತಿಗೂ ಕೂಡ ಜಾತಿ ಆಧಾರದ ಮೇಲೆ ಸಿಎಂ (Chief Minister) ಆಯ್ಕೆ ಮಾಡಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ (G Parameshwar) ಹೇಳಿದ್ದಾರೆ.
ಬೀಳಗಿ ತಾಲೂಕಿನ ಅನಗವಾಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಯಾವತ್ತೂ ಕೂಡ ನಮ್ಮ ಪಕ್ಷದಲ್ಲಿ ಜಾತಿ ಆಧಾರದ ಮೇಲೆ ಸಿಎಂ ಆಯ್ಕೆ ಮಾಡಲ್ಲ. ಅವತ್ತಿನ ಸಂದರ್ಭಕ್ಕೆ ಯಾರು ಸಮರ್ಥರಿದ್ದಾರೆಂದು ತಿಳಿದು ಅವರನ್ನ ಸಿಎಂ ಮಾಡ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: `ಹಿಂದೂ’ ಪದ ಅಶ್ಲೀಲ ಅನ್ನೋನು ಸನ್ನಿ ಲಿಯೋನ್ ಮಗನಾ? – ಧನಂಜಯ ಭಾಯ್ ವಿವಾದಿತ ಹೇಳಿಕೆ
Advertisement
Advertisement
ಮೊದಲಿನಿಂದಲೂ ಕಾಂಗ್ರೆಸ್ (Congress) ತನ್ನ ಪದ್ಧತಿ, ಸಂಪ್ರದಾಯವನ್ನ ಪಾಲಿಸಿಕೊಂಡು ಬಂದಿದೆ. ಆದ್ರೆ ಆಯಾ ಸಮುದಾಯಗಳಲ್ಲಿ ನಮ್ಮವರೊಬ್ಬರು ಸಿಎಂ ಆಗ್ಬೇಕು ಅನ್ಕೋತಾರೆ. ಅದನ್ನ ನಾವು ನಿಲ್ಲಿಸೋಕೆ ಆಗುತ್ತಾ? ಅದೇ ರೀತಿ ದಲಿತರೂ (Dalits) ಸಿಎಂ ಆಗಬೇಕು ಅಂದುಕೊಳ್ಳುತ್ತಾರೆ. ಅದನ್ನ ತಡೆಯೋಕೆ ನಾವ್ಯಾರು? ಸದ್ಯ ನಮ್ಮ ಮುಂದಿರೋ ಪ್ರಶ್ನೆ ಅಂದ್ರೆ, ನಾವು 130 ಸ್ಥಾನ ಗೆಲ್ಲಬೇಕು. ಸರ್ಕಾರ ನಡೆಸಲು ನಾವು 113 ಸ್ಥಾನಗಳನ್ನು ಗೆಲ್ಲಬೇಕು. ಅದರ ಲೆಕ್ಕಾಚಾರದಂತೆ ಮುಂದುವರಿಯುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಾಡಬಂದೂಕು ಹಿಡಿದು ಆಡುತ್ತಿದ್ದ ಮಕ್ಕಳು – ಆಕಸ್ಮಿಕವಾಗಿ ಗುಂಡು ಹಾರಿ ಬಾಲಕ ಸಾವು
Advertisement
Advertisement
ಡಿಕೆಶಿ (DK Shivakumar) ಹಾಗೂ ಸಿದ್ದರಾಮಯ್ಯ (Siddaramaiah) ಸಮಾಜದ ಮುಖಂಡರ ಜೊತೆ ಗೌಪ್ಯ ಸಭೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಇದು ದುರ್ದೈವ, ಜಾತಿ ಆಧಾರದಲ್ಲಿ ರಾಜಕಾರಣ ನಡೆಯುತ್ತಿರೋದು ಸರಿಯಲ್ಲ. ಆದ್ರೆ ಸನ್ನಿವೇಶ ಹೀಗಿರುವಾಗ ಅವ್ರನ್ನ ಓಲೈಸಬೇಕಲ್ವಾ? ಅವ್ರ ಕಷ್ಟ-ಸುಖ ಕೇಳಿಕೊಳ್ಳಬೇಕಲ್ವಾ? ಅದಕ್ಕಾಗಿ ಸಭೆಗಳನ್ನ ಮಾಡ್ತಿದ್ದಾರೆ. ನಮಗೆ ಸಹಾಯ ಮಾಡಿ, ನಮ್ಮ ಪರವಾಗಿ ನಿಲ್ಲಿ ಅಂತಾ ಕೇಳೋದ್ರಲ್ಲಿ, ಒಬ್ಬ ಅಧ್ಯಕ್ಷರಾಗಿ ಡಿಕೆ.ಶಿವಕುಮಾರ್ ಅವ್ರದ್ದು ಏನ್ ತಪ್ಪಿದೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ದಲಿತರನ್ನ ಬಳಸಿಕೊಳ್ತಿದೆ ಎಂಬ ಟೀಕೆಗೆ ಉತ್ತರಿಸಿದ ಪರಮೇಶ್ವರ್, ಈ ಸಣ್ಣ ಟೀಕೆ ಟಿಪ್ಪಣಿಗೆ ಉತ್ತರ ಕೊಡೋ ಅಗತ್ಯ ಇಲ್ಲ. ಈ ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರನ್ನ ಸಂವಿಧಾನ ರಚನೆಗೆ ಅಧ್ಯಕ್ಷರನ್ನಾಗಿ ಮಾಡಿದ್ದು ಕಾಂಗ್ರೆಸ್. ಪ್ರಪಂಚದಲ್ಲಿ ಶ್ರೇಷ್ಠವಾದ ಸಂವಿಧಾನ ರಚನೆ ಮಾಡಲು ಕಾಂಗ್ರೆಸ್ ಅವಕಾಶ ಕೊಟ್ಟಿತ್ತು. ಅದಕ್ಕಿಂತ ದೊಡ್ಡದು ಇನ್ನೇನು ಬೇಕಿದೆ ಎಂದಿದ್ದಾರೆ.