ಬೆಂಗಳೂರು: ಲೋಕಸಭಾ ಚುನಾವಣೆ ಸಿದ್ಧತೆಗಳು ಆರಂಭಿಸಿರುವ ಕಾಂಗ್ರೆಸ್ ಪಕ್ಷ ರಾಜ್ಯದ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಕಾಂಗ್ರೆಸ್ಸಿನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಮೈತ್ರಿ ರಾಜಕಾರಣದ ನಡುವೆಯೇ ಕ್ಷೇತ್ರಗಳ ಸಂಭಾವ್ಯ ಪಟ್ಟಿ ರಚನೆಯಾಗಿದ್ದು, ಹೈ ಕಮಾಂಡ್ ಮಟ್ಟದಲ್ಲಿ ಈ ಪಟ್ಟಿಗೆ ರಾಹುಲ್ ಗಾಂಧಿ ಸಮ್ಮತಿ ಸೂಚಿಸುತ್ತುರಾ ಎನ್ನುವುದನ್ನು ಕಾದು ನೋಡಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ ಕಳೆದ ಭಾರೀ ಗೆದ್ದು ಬಂದಿದ್ದ, 10 ಸಂಸದರಿಗೆ ಟಿಕೆಟ್ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.
Advertisement
Advertisement
ಇತ್ತ ತೀವ್ರ ಕುತುಹೂಲ ಮೂಡಿಸಿರುವ ಸಂಭಾವ್ಯ ಪಟ್ಟಿಯಲ್ಲಿ ಮೈಸೂರಿನಿಂದ ಸಿದ್ದರಾಮಯ್ಯ ಅವರ ಬೆಂಬಲಿಗ ವಿಜಯ್ ಶಂಕರ್ ಅಥವಾ ಸೂರಜ್ ಹೆಗ್ಡೆ ಹೆಸರನ್ನು ಕಳುಹಿಸಲಾಗಿದೆ. ಇಂದು ನಡೆದ ಸಭೆಯಲ್ಲಿ ಜೆಡಿಎಸ್ ಗೆ ಹೆಚ್ಚು ಸ್ಥಾನ ಕೊಡುವುದಕ್ಕೆ ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದೆ ಎನ್ನಲಾಗಿದ್ದು, ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಬಿಟ್ಟು ಕೊಟ್ಟರೆ ಪಕ್ಷದ ಮೇಲೆ ಪರಿಣಾಮ ಬೀರುತ್ತೆ. ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಕಾಂಗ್ರೆಸ್ ಬಿಟ್ಟು ಕೊಡುವುದರಿಂದ ನಷ್ಟವೇ ಜಾಸ್ತಿ ಆಗಲಿದೆ ಎಂಬುವುದು ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಈ ಬಗ್ಗೆ ಹೈಕಮಾಂಡ್‍ಗೆ ಅರ್ಥವಾಗುವಂತೆ ಮನವರಿಗೆ ಮಾಡಿಕೊಡಿ ಎಂದು ರಾಜ್ಯ ನಾಯಕರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
Advertisement
ಇಂದು ಬೆಂಗಳೂರಿನ ರ‌್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದೆ.@INCKarnataka pic.twitter.com/nNiA2z47aK
— Siddaramaiah (@siddaramaiah) March 7, 2019
Advertisement
ಹಾಲಿ ಸಂಸದರ ಕ್ಷೇತ್ರಗಳನ್ನ ಯಾವುದೇ ಕಾರಣಕ್ಕೂ ಬಿಟ್ಟು ಕೊಡಲು ಸಾಧ್ಯವಿಲ್ಲ ಎನ್ನುವುದು ಕೂಡ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಮಂಡ್ಯ ಮತ್ತು ಹಾಸನ ನಾವು ಕೇಳಿಲ್ಲ. ಆದರೆ ಜೆಡಿಎಸ್ ತುಮಕೂರು, ಚಿಕ್ಕಬಳ್ಳಾಪುರ, ರಾಯಚೂರು ಕೇಳುತ್ತಿರುವುದು ಸರಿಯಲ್ಲ ಎಂದಿದ್ದಾರೆ. ಮೈತ್ರಿ ಮಾಡಿಕೊಳ್ಳುತ್ತಿರುವುದು ಬಿಜೆಪಿ ಸೋಲಿಸುವುದಕ್ಕೆ ಹೊರತು, ಕಾಂಗ್ರೆಸ್ ಶಕ್ತಿ ಕಡಿಮೆ ಮಾಡಿಕೊಳ್ಳುವುದಕ್ಕಲ್ಲ ಎಂಬುವುದು ಹಲವು ನಾಯಕರ ಅಭಿಪ್ರಾಯವಾಗಿದೆ. ಅಲ್ಲದೇ ಇದು ಬಿಜೆಪಿಗೆ ಸಹಾಯಕವಾಗುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ.
ಇದರ ನಡುವೆಯೇ ಕಾಂಗ್ರೆಸ್ ಪಕ್ಷ ಮುಸ್ಲಿಂ ಮುಖಂಡರು ಕೂಡ ತಮ್ಮ ಸಮುದಾಯಕ್ಕೆ 3 ಕ್ಷೇತ್ರಗಳನ್ನ ನೀಡುವ ಬಗ್ಗೆ ಒತ್ತಡ ಹಾಕಿದ್ದಾರೆ ಎನ್ನಲಾಗಿದ್ದು, ಬೆಂಗಳೂರು ಕೇಂದ್ರ, ಬೀದರ್, ಹಾವೇರಿ ಬಿಟ್ಟು ಕೊಡುವಂತೆ ಒತ್ತಾಯ ಹಾಕಿದ್ದಾರೆ. ಉಳಿದಂತೆ ಚಿಕ್ಕಬಳ್ಳಾಪುರ, ಮೈಸೂರು, ರಾಯಚೂರು, ತುಮಕೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕೂಡ ಕುತೂಹಲ ಮೂಡಿಸಿದೆ.
ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಭೆಯಲ್ಲಿ ಹಾಲಿ ಸಂಸದರಾಗಿ ಇರುವ 12 ಕ್ಷೇತ್ರಗಳನ್ನು ಬಿಟ್ಟು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸಲಾಗಿದೆ. ಒಂದೊಂದು ಕ್ಷೇತ್ರದಲ್ಲಿ ಇಬ್ಬರು, ಮೂವರು, 10 ಮಂದಿ ಆಕಾಂಕ್ಷಿಗಳು ಇದ್ದಾರೆ. ಮತ್ತೊಮ್ಮೆ ಚರ್ಚಿಸಿ ಮೂವರನ್ನ ಆಯ್ಕೆ ಮಾಡ್ತೇವೆ. ಆ ಬಳಿಕಷ್ಟೇ ಹೈಕಮಾಂಡ್ ಸ್ಕ್ರೀನಿಂಗ್ ಕಮಿಟಿಗೆ ಕಳಿಸುತ್ತೇವೆ ಎಂದರು. ಅಲ್ಲದೇ ಮಾರ್ಚ್ 10ರ ಒಳಗೆ ಅಂತಿಮ ಮೈತ್ರಿ ಪಟ್ಟಿ ಬಿಡುಗಡೆ ಆಗಲಿದೆ ಎಂದರು.
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಂತಿದೆ:
ಬೀದರ್ – ಈಶ್ವರ್ ಖಂಡ್ರೆ, ಸಿಎಂ ಇಬ್ರಾಹಿಂ, ವಿಜಯ್ ಸಿಂಗ್
ಬಾಗಲಕೋಟೆ – ಬಾಯಕ್ಕ ಮೇಟಿ, ವೀಣಾ ಕಾಶಪ್ಪನವರ್, ಅಜಯ್ ಕುಮಾರ್ ಸ್ನಾಯಕ್
ವಿಜಯಪುರ – ರಾಜು ಅಲಗೂರು, ಪ್ರಕಾಶ್ ರಾಠೋಡ್, ಕಾಂತಾ ನಾಯಕ್
ಕೊಪ್ಪಳ – ಬಸನಗೌಡ ಬಾದರ್ಲಿ, ಬಸವರಾಜ್ ಹಿಟ್ನಾಳ್, ವಿರುಪಾಕ್ಷಪ್ಪ
ಬೆಳಗಾವಿ – ಅಂಜಲಿ ನಿಂಬಾಳ್ಕರ್, ಚನ್ನರಾಜ್ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ, ವಿವೇಕ್ ರಾವ್ ಪಾಟೀಲ್
ಧಾರವಾಡ – ವಿನಯ್ ಕುಲಕರ್ಣಿ, ಶಾಖಿರ್ ಸನದಿ (ಐ ಜಿ ಸನದಿ ಪುತ್ರ), ವೀರಣ್ಣ ಮತ್ತಿಕಟ್ಟಿ
ಹಾವೇರಿ – ಬಸವರಾಜ್ ಶಿವಣ್ಣವರ, ಸಲೀಂ ಅಹಮದ್, ಡಿ. ಆರ್. ಪಾಟೀಲ್
ದಾವಣಗೆರೆ – ಎಸ್.ಎಸ್. ಮಲ್ಲಿಕಾರ್ಜುನ, ಹೆಚ್.ಎಂ.ರೇವಣ್ಣ
ಉತ್ತರ ಕನ್ನಡ – ಪ್ರಶಾಂತ್ ದೇಶಪಾಂಡೆ, ನಿವೇದಿತ್ ಆಳ್ವಾ, ಭೀಮಣ್ಣ ನಾಯ್ಕ್
ಉಡುಪಿ – ಚಿಕ್ಕಮಗಳೂರು – ಆರತಿ ಕೃಷ್ಣ, ವಿಜಯಕುಮಾರ್, ಪ್ರಮೋದ್ ಮಧ್ವರಾಜ್, ಬಿ.ಕೆ.ಹರಿಪ್ರಸಾದ್
ಮಂಗಳೂರು – ರಮಾನಾಥ ರೈ, ಐವಾನ್ ಡಿಸೋಜಾ, ಮೋಯುದ್ದೀನ್ ಬಾವಾ, ವಿನಯ ಕುಮಾರ್ ಸೊರಕೆ
ಬೆಂಗಳೂರು ಕೇಂದ್ರ – ರಿಜ್ವಾನ್ ಅರ್ಷದ್, ಬಿ.ಕೆ. ಹರಿಪ್ರಸಾದ್, ರೋಷನ್ ಬೇಗ್, ಎಚ್.ಟಿ. ಸಾಂಗ್ಲಿಯಾನಾ,ಸಲೀಂ ಅಹಮದ್
ಬೆಂಗಳೂರು ದಕ್ಷಿಣ – ಪ್ರಿಯಕೃಷ್ಣ, ರಾಮಲಿಂಗರೆಡ್ಡಿ
ಬೆಂಗಳೂರು ಉತ್ತರ – ಸಿ. ನಾರಾಯಣ ಸ್ವಾಮಿ, ಎಂ. ಆರ್. ಸೀತಾರಾಂ, ಬಿ.ಎಲ್. ಶಂಕರ್
ಮೈಸೂರು – ವಿಜಯ್ ಶಂಕರ್, ಸೂರಜ್ ಹೆಗ್ಡೆ
ಹಾಲಿ ಕಾಂಗ್ರೆಸ್ ಸಂಸದರು:
ಚಿಕ್ಕೋಡಿ – ಪ್ರಕಾಶ್ ಹುಕ್ಕೇರಿ
ಕಲಬುರಗಿ – ಮಲ್ಲಿಕಾರ್ಜುನ ಖರ್ಗೆ
ರಾಯಚೂರು – ಬಿ ವಿ ನಾಯಕ್
ಬಳ್ಳಾರಿ – ವಿ ಎಸ್ ಉಗ್ರಪ್ಪ
ಚಿತ್ರದುರ್ಗ – ಚಂದ್ರಪ್ಪ
ತುಮಕೂರು – ಮುದ್ದ ಹನುಮೇಗೌಡ
ಚಾಮರಾಜನಗರ – ಆರ್ ಧ್ರುವ ನಾರಾಯಣ್
ಚಿಕ್ಕಬಳ್ಳಾಪುರ – ಡಾ ಎಂ ವೀರಪ್ಪ ಮೊಯಿಲಿ
ಕೋಲಾರ – ಕೆ ಎಚ್ ಮುನಿಯಪ್ಪ
ಬೆಂಗಳೂರು ಗ್ರಾಮಾಂತರ – ಡಿ ಕೆ ಸುರೇಶ್
ಪಟ್ಟಿಯಲ್ಲಿ ಬಹು ಮುಖ್ಯವಾಗಿ ಮಾಜಿ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಸ್ಥಾನ ನೀಡಿ ರಾಷ್ಟ್ರ ರಾಜಕಾರಣಕ್ಕೆ ಕಳುಹಿಸುವ ಚಿಂತನೆ ಮಾಡಲಾಗಿದೆ. ಅಲ್ಲದೇ ಮಾಜಿ ಸಚಿವ ರಮೇಶ್‍ಜಾರಕಿ ಹೊಳಿ ಹಾಗೂ ಪ್ರಶಾಂತ್ ದೇಶಪಾಂಡೆ ಅವರ ಹೆಸರು ಸಂಭಾವ್ಯ ಪಟ್ಟಿಯಲ್ಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv