ನೆಲಮಂಗಲ: ರಾಜ್ಯಾದ್ಯಂತ ಪ್ರಚಾರಕ್ಕಾಗಿ ಕಾಂಗ್ರೆಸ್ ಪಕ್ಷ (Congress Party) ಜನರನ್ನ ಸೆಳೆಯಲು, ತಮ್ಮ ಪಕ್ಷದ ಪ್ರಣಾಳಿಕೆಯನ್ನ ಜನರ ಬಳಿ ತಲುಪಿಸಲು ಪ್ರಜಾಧ್ವನಿ ಬಸ್ (Prajadwani Yatra) ಯಾತ್ರೆಯ ಮೂಲಕ ಮುಂದಾಗಿದ್ದು, ಇದೀಗ ಈ ಬಸ್ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡು ಜನರ ಅಚ್ಚರಿಗೆ ಕಾರಣವಾಗಿದೆ.
Advertisement
ಬೆಂಗಳೂರು ಹೊರವಲಯ ನೆಲಮಂಗಲ (Nelamangala) ನಗರದ ಕುಣಿಗಲ್ ಬೈಪಾಸ್‍ನ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಗೆ ಬಸ್ ಆಗಮಿಸಿದೆ. ಈ ಬಸ್ ಬಂದ ವೇಳೆ ಕೆಲಕಾಲ ಮದುವೆ ಮನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಸೇರಿದಂತೆ ನಾಯಕರು ಬಂದ್ರಾ ಎಂದು ಜನರು ಜೋಶ್ ನಲ್ಲಿದ್ದರು ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯಕ್ಕೆ ಟಿಪ್ಪು ಬೇಕಾ? ರಾಮಭಕ್ತರು ಬೇಕಾ?: ಕಟೀಲ್
Advertisement
Advertisement
ಕಾಂಗ್ರೆಸ್ ಒಂದು ತಿಂಗಳ ಹಿಂದೆ ಚಾಲನೆ ನೀಡಿದ್ದ ಪ್ರಜಾಧ್ವನಿಯ ಕೆಎ 02 ಎಜಿ 0855 ಬಸ್ ಬಾಡಿಗೆಗೆ ಬಂದಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಚ್ಚರಿಗೆ ಕಾರಣವಾಗಿದೆ. ಈ ಬಸ್ಸಿನಲ್ಲಿ ಮದುವೆಗೆ ಕಾಂಗ್ರೆಸ್ ಪಕ್ಷದ ನಾಯಕರು ಬಂದ್ರಾ ಎಂಬ ಸಂಶಯದಲ್ಲಿ ಯಾರು ಕೂಡ ಇರಲ್ಲಿಲ್ಲ. ಈ ಬಸ್ ಮದುವೆ ದಿಬ್ಬಣಕ್ಕೆ ಹಾಜರಾಗಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
Advertisement
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (D.K Shivakumar) ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನವರು ಜೋಡೆತ್ತುಗಳಂತೆ ಆರಂಭಿಸಿದ ಬಸ್ ಯಾತ್ರೆ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಸಂಚಾರ ಮಾಡಿದೆ. ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಸಮಾರಂಭ ಮಾಡಲು ದಿನಾಂಕ ನಿಗದಿಯಾಗಿದೆ. ಆದರೆ ಕಾಂಗ್ರೆಸ್ ಪ್ರಜಾಧ್ವನಿಯ ಸಮಾರಂಭದ ಬಿಡುವಿನ ವೇಳೆಯಲ್ಲಿ ಬಸ್ ಮದುವೆ ಕಾರ್ಯಕ್ರಮಕ್ಕೆ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k